ಮತದಾರರ ಜಾಗೃತಿಗಾಗಿ ಚಿತ್ರಕಲಾ ಶಿಬಿರ

ಧಾರವಾಡ 18: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಎಂ.ಆರ್. ಬಾಳೀಕಾಯಿ ಆಟರ್್ ಗ್ಯಾಲರಿ ಸಹಯೋಗದಲ್ಲಿ ಮತದಾರರ ಜಾಗೃತಿಗಾಗಿ ಉತ್ತರ ಕನರ್ಾಟಕದ ಕಲಾವಿದರಿಂದ ಮೂರು ದಿನಗಳ ಚಿತ್ರಕಲಾ ಶಿಬಿರ ಜರುಗಿತು. 

  ವಿಕಾಸನಗರದ ನೇಮಿಚಂದ್ರ ಕಟ್ಟಡದಲ್ಲಿ ಏ. 14, 15 ಹಾಗೂ 16 ರಂದು ಮೂರು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಣಾಧಿಕಾರಿ ಡಾ.ಬಿ.ಸಿ. ಸತೀಶ್ ಭಾಗವಹಿಸಿದ್ದರು. ಹಿರಿಯ ಕಲಾವಿದ ಎಂ.ಆರ್. ಬಾಳೀಕಾಯಿ ಅವರು ಉತ್ತರ ಕನರ್ಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಾವಂತ ಕಲಾವಿದರಿಗೆ ಮಾರ್ಗದರ್ಶನ ಮಾಡಿದರು.  

ಡಾ.ಬಿ.ಎಲ್. ಚೌಹಾಣ, ಪಿ.ಎಸ್. ಕಡೇಮನಿ, ಯು.ಬಿ. ಬಾಳೀಕಾಯಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.