ಬಾಗಲಕೋಟೆ 05: ಬಾಗಲಕೋಟ: ಸ್ಥಳಿಯ ಬ.ವಿ.ವ ಸಂಘದ ಪಿ.ಎಮ್.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಳೆಯ ಬಾಗಲಕೋಟೆಯಿಂದ ನವನಗರದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸಿದ್ಧಗೊಂಡಿರುವ ನೂತನ ಕಟ್ಟಡಕ್ಕೆ ಡಿಸೆಂಬರ 10 ರಂದು ಸೋಮವಾರ ಪೂರ್ಣಪ್ರಮಾಣದಲ್ಲಿ ಕಾಯರ್ಾರಂಭ ಮಾಡಲಿದೆ.
ಹಳೆಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಂತ ರೋಗಿಗಳಿಗೆ ಡಿಸೆಂಬರ 6ರ ರವರೆಗೆ ಮಾತ್ರ ಚಿಕಿತ್ಸೆ ಲಭ್ಯವಿದೆ.
ಸಾರ್ವಜನಿಕರು ಈ ಸೌಲಭ್ಯ ಪಡೆದುಕೊಳ್ಳಲು ಸಂಘದ ಕಾಯರ್ಾಧ್ಯಕರಾದ ಡಾ|| ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾಯಾಧ್ಯಕ್ಷರಾದ ಸಿದ್ದಣ್ಣ ಶೆಟ್ಟರ ಮತ್ತು ದಂತ ಕಾಲೇಜಿನ ಪ್ರಾಚಾರ್ಯರಾದ ಡಾ|| ಶ್ರೀನಿವಾಸ ವನಕಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ:
ದಂತ ರೋಗಿಗಳಿಗೆ ಹೊಸ ಕಟ್ಟಡಕ್ಕೆ ಬರಲು ಹಳೆ ದಂತ ಕಾಳೇಜಿನ ಆವರಣ ಮತ್ತು ವಿದ್ಯಾಗಿರಿ ಬಸ್ ನಿಲ್ದಾಣದಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಮತ್ತು ಹೊರರೋಗಿಗಳಿಗೆ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಹಳೆ ದಂತ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಒದಗಿಸಲಾಗುವದು.