ಕೊಲ್ಕತ, ನ 28(ಯುಎನ್‍ಐ)- ಪಶ್ಚಿಮ ಬಂಗಾಳದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆ ಮತ ಎಣಿಕೆ ಮುಂದುವರೆದಿದ್ದು, ತೃಣಮೂಲ ಕಾಂಗ್ರೆಸ್ ಎರಡಲ್ಲಿ, ಬಿಜೆಪಿ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.
ಖರಗ್‍ಪುರ್ ಸದರ್ ಮತ್ತು ಕರಿಮ್‍ಪುರ್‍ನಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದರೆ, ಕಲಿಯಾಗಂಜ್‍ನಲ್ಲಿ ಬಿಜೆಪಿ ಮುಂದಿದೆ.
ಖರಗ್‍ಪುರ್‍ನಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಸರ್ಕಾರ್ ಅವರು ಬಿಜೆಪಿ ಅಭ್ಯರ್ಥಿ ಪ್ರೇಮ್ ಚಂದ್ರ ಜಾ ಅವರಿಗಿಂತ 6,000 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕರಿಮ್‍ಪುರ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಮುಗಿದಾಗ ಟಿಎಂಸಿಯ ಬಿಮಲೆಂದು ಸಿಂಘಾ ರಾಯ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಜೈ ಪ್ರಕಾಶ್ ಮುಜುಂದಾರ್ ಅವರಿಗಿಂತ 23,586 ಮತಗಳಿಂದ ಮುಂದಿದ್ದರು.
ಕಾಲಿಗಂಜ್‍ನಲ್ಲಿ ಬಿಜೆಪಿಯ ಕಮಲ್ ಚಂದ್ರ ಸರ್ಕಾರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ತಪನ್ ದೇಬ್ ಸಿನ್ಹಾ ಅವರಿಗಿಂತ 1,800 ಮತಗಳ ಅಂತರದಿಂದ ಮುಂದಿದ್ದರು.