ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲವು : ವೆಂಕಪ್ಪ ಹನುಮಪ್ಪ ಕೆಂಚರೆಡ್ಡಿ
ರಾಣೆಬೆನ್ನೂರ 04 : ಮಾ 4 ಅತೀವ ಕುತೂಹಲ ಮೂಡಿಸಿದ್ದ ಸ್ಥಳೀಯ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಗುಡಗೂರು ಸಾಲಗಾರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಪಂ ಮಾಜಿ ಸದಸ್ಯ ಶಿವಪ್ಪ ಸಣ್ಣೀಂಗಪ್ಪ ಕುರವತ್ತಿ(20) ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ವೆಂಕಪ್ಪ ಹನುಮಪ್ಪ ಕೆಂಚರೆಡ್ಡಿ(19) ವಿರುದ್ದ ಕೇವಲ 1 ಮತದಿಂದ ಗೆಲುವು ಸಾಧಿಸಿದ್ದಾರೆ. ಇನ್ನೊಂದು ದೇವರ ಗುಡ್ಡದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ್ ಬೂಸಮ್ಮನವರ ಹಾಗೂ ಬಿಜೆಪಿ ಬೆಂಬಲಿತ ಹುಚ್ಚಪ್ಪ ನಿಂಬಕ್ಕಳವರ ತಲಾ 21 ಮತಗಳನ್ನು ಪಡೆದು ಸಮನಾದ ಕಾರಣ ಚೀಟಿ ಎತ್ತುವ ಮೂಲಕ ಮಂಜುನಾಥ ಆಯ್ಕೆಗೊಂಡರು. ಈ ವರ್ಷದ ಜ.12ರಂದು ಈ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮತದಾರರ ಸಂಭಂದ ಹೈಕೋರ್ಟನಲ್ಲಿದ್ದ ಪ್ರಕರಣದ ಫಲಿತಾಂಶ ತಡೆಹಿಡಿಯಲಾಗಿತ್ತು. ಇದೀಗ ಹೈಕೋರ್ಟ ಸೂಚನೆ ಮೇರೆಗೆ ತಡೆ ಹಿಡಿಯಲಾಗಿದ್ದಫಲಿತಾಂಶ ಘೋಷಿಸಲಾಗಿದೆ.