ಪಿ ಎಲ್ ಡಿ ಬ್ಯಾಂಕ್ ಚುನಾವಣೆ ದೊಡ್ಡಕೇಶವ ರೆಡ್ಡಿ ಸೇರಿ 12 ಜನ ನಿರ್ದೇಶಕರಾಗಿ ಆಯ್ಕೆ
ಬಳ್ಳಾರಿ 24 : ನಗರದ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕಿಗೆ ಡಾ. ರಾಜಕುಮಾರ್ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಚುನಾವಣೆ ನಡೆದು 12 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಮತ್ತು ಸಾಲಗಾರರ ಕ್ಷೇತ್ರದ ಪರಿತಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ’ಎ’ ಹಾಗೂ ಹಿಂದುಳದ ವರ್ಗ-1ಮಹಿಳಾ ಮತ್ತು ಸಾಲಗಾರರಲ್ಲದ ಕ್ಷೇತ್ರದ ಸಾಮಾನ್ಯ ಸ್ಥಾನಗಳಗೆ ಮೀಸಲಾಗಿರುವ ಮತ ಕ್ಷೇತ್ರದಿಂದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಬಳ್ಳಾರಿ, ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ, ಈ ಕೆಳಕಂಡ ಅಭ್ಯರ್ಥಿಗಳು ಚುನಾವಣೆಯಲ್ಲಿ ಕರ್ನಾಟಕಸಹಕಾರ ಸಹಕಾರ ಸಂಘಗಳ ನಿಯಮಗಳು 1960, ನಿಯಮ 14 ಎ.ಬ ದಲ್ಲಿನ ಉಪಬಂದ ಅನುಸಾರ ಒಟ್ಟು 12 ಜನ ಅಭ್ಯರ್ಥಿಗಳು ವಿದ್ಯುಕ್ತವಾಗಿ ಚುನಾಯಿತರಾಗಿದ್ದಾರೆಂದು ರಿಟರ್ನಿಂಗ್ ಆಫೀಸರ್ ಘೋಷಿಸಿದ್ದಾರೆ.ಬಳ್ಳಾರಿ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಅಟೋ ಗುರಿತಿನಿಂದ ಕೊರಲಗುಂದಿ ದೊಡ್ಡ ಕೇಶವ ರೆಡ್ಡಿ ,ಕುಡತಿನಿ ಕ್ಷೇತ್ರದಿಂದ ದಮ್ಮೂರು ಷಣ್ಮುಖ,ಹಲಕುಂದಿ ಕ್ಷೇತ್ರದಿಂದ ಗೋವಿಂದ ನಾಯಕ,ಬಳ್ಳಾರಿ ನಗರ ಕ್ಷೇತ್ರದಿಂದ ಲತಾ ಎ, ಕೊರಲ್ಲಗುಂದಿ ಕ್ಷೇತ್ರದಿಂದ ವಿ ಗಂಗಮ್ಮ ಅಯ್ಕೆಗೊಂಡಿದ್ದುರೂಪನಗುಡಿ ಕ್ಷೇತ್ರದಿಂದ ಬಿ ಚಂದ್ರಶೇಖರ್ ಎಲ್,ಅವಿರೋಧವಾಗಿ ಅಯ್ಕೆ ಗೊಂಡಿದ್ದು ಒಟ್ಟು ಸಾಲಗಾರಲ್ಲದ ಕ್ಷೇತ್ರದಿಂದ 7 ಜನ.ಮತ್ತೊಂದು ತಂಡದಿಂದ 5 ಜನ ವಣೇನೂರು ಕ್ಷೇತ್ರ, ಶ್ರೀಧರ ಗಡ್ಡೆ, ಅಮರಾಪುರ ಕ್ಷೇತ್ರ, ಯರಗುಡಿ ಕ್ಷೇತ್ರ, ಚಾಗನೂರು ಕ್ಷೇತ್ರ, ಗೆಲುವು ಸಾದಿಸಿದ್ದಾರೆ ಎಂದು ಒಟ್ಟು 12 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಗುರುರಾಜ್ ಎಂ ಚಲವಾದಿತಿಳಿಸಿದರು.ದೊಡ್ಡ ಕೇಶವ ರೆಡ್ಡಿಯವರ ಬೆನ್ನಿಗೆ ನಿಂತು ಇವರ ಗೇಲುವಿಗೆ ಶ್ರಮ ಮೀರಿ ಪ್ರತ್ನಿಸಿದ ತಮ್ಮ ಸಹೋದರರಾದ ರಮಣ ರೆಡ್ಡಿ, ವಿ. ಗುರುಪಾದ ರೆಡ್ಡಿ ಯವರಿಗೆ ದೊಡ್ಡ ಕೇಶವ ರೆಡ್ಡಿಯವರುಶ್ಲಾಘನೀಯ ತಿಳಿಸಿದರು.