ಪ್ರಾ.ಗ್ರಾ.ಸಹಕಾರ ಸಂಘದ ಅದ್ಯಕ್ಷರಾಗಿ ಪಿ.ವಿಜಯಕುಮಾರ ಆಯ್ಕೆ
ಹೂವಿನಹಡಗಲಿ 09: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿಜಯಕುಮಾರ್, ಉಪಾಧ್ಯಕ್ಷರಾಗಿ ಕೆ. ವೀಣಾ ಭಟ್ ಅವಿರೋಧವಾಗಿ ಆಯ್ಕೆಯಾದರು.ಸಂಘದ ಕಚೇರಿಯಲ್ಲಿ ಬುಧವಾರ ಚುನಾವಣೆ ನಡೆಯಿತು. 12 ನಿರ್ದೇಶಕರ ಪೈಕಿ 10 ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅವಿರೋಧ ಆಯ್ಕೆಯನ್ನು ಬೆಂಬಲಿಸಿದರು.ಚುನಾವಣಾಧಿಕಾರಿ ಪಟ್ಟಣದ ಕಾರ್ಯಕರ್ತರು ಶಾಸ್ತ್ರಿ ವೃತ್ತದಲ್ಲಿ ಪಟಾಕಿ ಹಾರಿಸಿ ಸಂಭ್ರಮಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ್, ಸಹಕಾರ ಸಂಘದ ನಿರ್ದೇಶಕರಾದ ಸೋಗಿ ಹಾಲೇಶ, ಎಸ್.ಬಿ.ಸಿದ್ದೇಶ, ಹಣ್ಣಿ ಸುಶೀಲಾ, ಎನ್.ಇರ್ಫಾನ್, ಜಾಕೀರ್ ಹುಸೇನ್, ಎಂ.ಜಮೀರುದ್ದೀನ್, ಎಚ್.ಗೀರೀಶ, ವಿಷ್ಣುನಾಯ್ಕ ಇದ್ದರು.