ದಿನದ ಮತ್ತು ವಾರದ ಮಾರುಕಟ್ಟೆ ಹಾಗೂ ಪಾಕಿಂರ್ಗ್ ಫೀಗೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆ

Open auction process held for daily and weekly market and parking fees

ದಿನದ ಮತ್ತು ವಾರದ ಮಾರುಕಟ್ಟೆ ಹಾಗೂ ಪಾಕಿಂರ್ಗ್ ಫೀಗೆ ನಡೆದ ಬಹಿರಂಗ ಹರಾಜು ಪ್ರಕ್ರಿಯೆ

ಕಂಪ್ಲಿ:ಏ.25. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ದಿನದ ಮತ್ತು ವಾರದ ಮಾರುಕಟ್ಟೆ ಹಾಗೂ ಪಾರ್ಕಿಂಗ್ ಫೀ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ಜರುಗಿತು.  

 2025ರ ಮೇ.1ರಿಂದ 2026ರ ಮಾರ್ಚ್‌ 31ವರೆಗಿನ ಒಂದು ವರ್ಷದ ಹರಾಜು ಪ್ರಕ್ರಿಯೆ ನಡೆಸಲಾಯಿತು. ಇಲ್ಲಿ ನಡೆದ ದಿನದ ಮಾರುಕಟ್ಟೆ ಹರಾಜಿನಲ್ಲಿ ಯು.ಪರಮೇಶ್ವರ​‍್ಪ ಇವರಿಗೆ ಸುಮಾರು 3 ಲಕ್ಷ ರೂ.ಗಳ ಬಿಡ್ ಆಗಿದೆ. ಮತ್ತು ಯು.ಪರಮೇಶ್ವರ​‍್ಪ ಇವರು ಸುಮಾರು 1.5 ಲಕ್ಷಕ್ಕೆ ವಾರದ ಮಾರುಕಟ್ಟೆ ಹರಾಜು ಪಡೆದುಕೊಂಡರು. ನಂತರದ ಪಾಕಿಂರ್ಗ್ ಹರಾಜಿನಲ್ಲಿ ಎಂ.ಜಾವೀದ್ ಇವರು 75 ಸಾವಿರದ ಹರಾಜು ತನ್ನದಾಗಿಸಿಕೊಂಡರು.  

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಡಾ.ವಿ.ಎಲ್‌.ಬಾಬು, ಕಂದಾಯ ಅಧಿಕಾರಿ ನಾಗಭೂಷಣ, ಕಂದಾಯ ನೀರೀಕ್ಷಕರಾದ ಬರಮಣ್ಣ, ಜಯಲಕ್ಷ್ಮಿ ಹಾಗೂ ಬಿಡ್‌ದಾರರಾದ ಬಿ.ದೇವೇಂದ್ರ, ಬಿ.ಇಮ್ರಾನ್, ಇಸ್ಮಾಯಿಲ್ ಇದ್ದರು.