ಮಹಿಳೆಯರನ್ನು ಗೌರವ ಹೆಮ್ಮೆಯಿಂದ ಕಂಡಾಗ ಮಾತ್ರ ದೇಶ ಅತ್ಯುನ್ನತ ಸ್ಥಾನ ಹೊಂದುತ್ತಾಳೆ : ಸತೀಶ ವಿಶ್ವನಾಥ ಭಾವಿ

Only when women are treated with respect and pride will the country attain the highest position: Sa

ಮಹಿಳೆಯರನ್ನು ಗೌರವ ಹೆಮ್ಮೆಯಿಂದ ಕಂಡಾಗ ಮಾತ್ರ ದೇಶ ಅತ್ಯುನ್ನತ ಸ್ಥಾನ ಹೊಂದುತ್ತಾಳೆ : ಸತೀಶ ವಿಶ್ವನಾಥ ಭಾವಿ 

ವಿಜಯಪುರ, 08 : ಮಹಿಳೆಯರನ್ನು ಗೌರವ ಹೆಮ್ಮೆಯಿಂದ ಕಂಡಾಗ ಮಾತ್ರ ದೇಶ ಅತ್ಯುನ್ನತ ಸ್ಥಾನಕ್ಕೆ ಹೋಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಸತೀಶ ವಿಶ್ವನಾಥ ಭಾವಿ ಹೇಳಿದರು. ಅವರು ನಗರದ ಗಾಂಧಿವೃತ್ತದ ಮುಂಭಾಗದಲ್ಲಿ ಬೀದಿ ಬದಿಯ ವ್ಯಾಪಾರ ಮಾಡುವ ಮಹಿಳೆಯೊಂದಿಗೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.  ಅಂತರಾಷ್ಟ್ರೀಯ ಮಹಿಳಾ ದಿನಾಚಣೆಯ ಈ ದಿನದ ಮಹತ್ವವೇನು, ಇದು ಏಕೆ ಆಚರಿಸಲಾಗುತ್ತದೆ ಎಂಬುದೇ ಬೀದಿ ಬದಿ ವ್ಯಾಪಾರ ಮಾಡುವ ಮಹಿಳೆಯರಿಗೆ ತಿಳಿದಿಲ್ಲ. ಇವರೊಂದಿಗೆ ಈ ದಿನಾಚರಣೆಯನ್ನು ಸಂತಸವಾಗಿ ಆಚರಿಸಿದ್ದು ಹೃದಯಸ್ಪರ್ಶಿಯಾಗಿತ್ತು. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ರ್ತೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀ ಅವಿನಾಶಿ, ಸಂಜೀವಿನಿ, ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು. ಮಹಿಳೆಯರ ಶಕ್ತಿಯನ್ನು ಮತ್ತು ಶ್ರಮವನ್ನು ನಾವು ಕೇವಲ ಇಂದು ಮಾತ್ರವಲ್ಲ, ಪ್ರತಿದಿನವೂ ಗುರುತಿಸಿ ಮತ್ತು ಬೆಂಬಲಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಿಳೆಯರಾದ ಕಸ್ತೂರಿಬಾಯಿ, ಮುಮ್ತಾಜ್, ರಜಬ, ರಹಮತಬಾಯಿ,  ಗುಲಶನಬಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.