ಪಿಡಿಐಟಿಯಲ್ಲಿ ಎನ್‌.ಬಿ.ಎ. ಮಾನ್ಯತೆ ಪ್ರಕ್ರಿಯೆ ಒಂದು ದಿನದ ಕಾರ್ಯಾಗಾರ

One-day workshop on NBA accreditation process at PDIT

ಪಿಡಿಐಟಿಯಲ್ಲಿ ಎನ್‌.ಬಿ.ಎ. ಮಾನ್ಯತೆ ಪ್ರಕ್ರಿಯೆ ಒಂದು ದಿನದ ಕಾರ್ಯಾಗಾರ  

ಹೊಸಪೇಟೆ  24: ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ದಿನಾಂಕ: 24/03/2025 ರಂದು ಐಕ್ಯೂಎಸಿಯ ಆಯೋಜಿಸಿದ್ದ ರಾಷ್ಟ್ರೀಯ ಮಾನ್ಯತೆ ಮಂಡಳಿಯ (ಎನ್‌.ಬಿ.ಎ.) ಮಾನ್ಯತೆ ಪ್ರಕ್ರಿಯೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ವಿಜಯ ವಿಠ್ಠಲ ಇಂಜಿನಿಯರಿಂಗ್ ಕಾಲೇಜಿನ ಡೆಟಾ ಸೈನ್ಸ್‌ ವಿಭಾಗದ ಮುಖ್ಯಸ್ಥರಾದ ಡಾ.ರಘುಕುಮಾರ್ ಕೆ.ಎಸ್‌. ರವರು ಎನ್‌.ಬಿ.ಎ. ಮಾನ್ಯತೆ ಪ್ರಕ್ರಿಯೆ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಅವರು ಎನ್‌.ಬಿ.ಎ. ಮಾನ್ಯತೆಯ ಸ್ವಯಂ ಮೌಲ್ಯಮಾಪನ ವರದಿಯ ಹೊಸ ಸ್ವರೂಪವನ್ನು ಪರಿಚಯಿಸಿದರು. ಕೇಂದ್ರ ಸರ್ಕಾರದ ಖಿಇಕಿಋ ಒಊಖಆ ಹಾಗೂ ರಾಜ್ಯಸರ್ಕಾರದ ಇತರೆ ಅನುದಾನಗಳನ್ನು ಪಡೆಯಲು ರಾಷ್ಟ್ರೀಯ ಮಾನ್ಯತೆ ಮಂಡಳಿ ನವದೆಹಲಿ ಇವರಿಂದ ಇಂಜಿನಿಯರಿಂಗ್ ಕಾಲೇಜುಗಳ ಎಲ್ಲಾ ವಿಭಾಗಗಳು ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಎನ್‌.ಬಿ.ಎ. ಮಾನ್ಯತೆಯಿಂದ ಇಂಜಿನಿಯರಿಂಗ್ ಪದವಿಗೆ ಅಂತರರಾಷ್ಟ್ರೀಯ ಮನ್ನಣೆ ದೊರಕುತ್ತದೆ. ಈ ನಿಟ್ಟಿನಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಜರುಗಿಸಬೇಕಾದ ಕ್ರಮಗಳು ಮಾನ್ಯತೆಯ ಮಹತ್ವ ಹಾಗೂ ಅದರ ಉಪಯೋಗಗಳು ಅಲ್ಲದೇ ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರ ಹೊಣೆಗಾರಿಕೆಗಳನ್ನು ಸವಿವರವಾಗಿ ತಿಳಿಸಿದರು. ಹಿಂದೆ ಈ ಮಾನ್ಯತೆ ಪಡೆಯಲು ಶೇಕಡಾ 50ಅ ರಷ್ಟು ಪ್ರವೇಶಾತಿ ಹಾಗೂ 50ಅ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳು ಹೊಂದಿದ್ದರೆ ಮಾತ್ರ ಅರ್ಹತೆ ಸಿಗುತ್ತಿತ್ತು, ಆದರೆ ಹೊಸ ನಿಯಮದ ಪ್ರಕಾರ ಮಾನ್ಯತೆ ಪಡೆಯಲು ಈ ಮಾನದಂಡಗಳ ಅವಲಂಬನೆ ಇರುವುದಿಲ್ಲ ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಸ್ವಯಂ ಉದ್ಯಮಿಯಾಗಲು ಪ್ರೇರೇಪಿಸಬೇಕು, ಸ್ಟಾರ್ಟ್‌ ಅಪ್ ಗಳು ಬೆಳೆದಂತೆ ಆತ್ಮನಿರ್ಭರ ಭಾರತದ ಕನಸನ್ನು ಪೂರೈಸಲು ಸಹಾಯಕವಾಗಲಿದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ, ಎನ್‌.ಬಿ.ಎ. ಮಾನ್ಯತೆಯನ್ನು ಸಿದ್ಧಪಡಿಸುವ ವಿವರವಾದ ಕಾರ್ಯವಿಧಾನವನ್ನು ನೀಡಲಾಯಿತು ಮತ್ತು ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಗಳೊಂದಿಗೆ ಚರ್ಚಿಸಲಾಯಿತು.  ಪ್ರಾಂಶುಪಾಲರಾದ ಡಾ.ಯು.ಎಂ.ರೋಹಿತ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮ್ಮ ಮಹಾವಿದ್ಯಾಲಯವು ಈಗಾಗಲೇ ನ್ಯಾಕ್ ಬಿ+ ಮಾನ್ಯತೆಯನ್ನು ಪಡೆದಿದೆ, ಮುಂದಿನ ದಿನಗಳಲ್ಲಿ ನಾವು ನಮ್ಮ ಕಾಲೇಜಿನ ನಾಲ್ಕು ವಿಭಾಗಗಳಿಗೆ ಎನ್‌.ಬಿ.ಎ. ಮಾನ್ಯತೆಗಾಗಿ ಅರ್ಜಿಯನ್ನು ಸಲ್ಲಿಸಲಿದ್ದೇವೆ, ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ನಮ್ಮ ಸಿಬ್ಬಂದಿವರ್ಗಕ್ಕೆ ತರಬೇತಿ ಪಡೆಯಲು ಸಹಾಯವಾಗುತ್ತದೆ. ಓಃಂ ಸಿದ್ಧತೆಗಳಿಗಾಗಿ ಎಲ್ಲಾ ಅಧ್ಯಾಪಕರು ಶ್ರಮಿಸಬೇಕು ಮತ್ತು ಓಃಂ ಮಾನ್ಯತೆ ತಯಾರಿಯ ಸಮಯದ ವೇಳಾಪಟ್ಟಿಯನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು. ಉಪ ಪ್ರಾಂಶುಪಾಲರಾದ ಡಾ. ಪಾರ್ವತಿ ಕಡ್ಲಿ ಸ್ವಾಗತಿಸಿದರು, ಪ್ರೊ. ರವಿಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ.ಇಂದಿರಾ  ಅತಿಥಿಗಳನ್ನು ಪರಿಚಯಿಸಿದರು. ಎನ್‌.ಬಿ.ಎ. ಕಾರ್ಯಕ್ರಮದ ಸಂಚಾಲಕರಾದ ಡಾ. ಕೆ.ಜಿ. ಪ್ರಕಾಶ್ ವಂದಿಸಿದರು.  

 ಪ್ರಾಂಶುಪಾಲರಾದ ಡಾ.ಯು.ಎಂ.ರೋಹಿತ್, ಉಪ ಪ್ರಾಂಶುಪಾಲರಾದ ಡಾ. ಪಾರ್ವತಿ ಕಡ್ಲಿ, ಐಕ್ಯೂಎಸಿಯ ಸಂಚಾಲಕರಾದ ಡಾ.ಶಿವಕೇಶವ್ ಕುಮಾರ್, ಡೀನ್ ಡಾ.ಮಂಜುಳಾ ಎಸ್‌.ಡಿ, ಎನ್‌.ಬಿ.ಎ. ಕಾರ್ಯಕ್ರಮದ ಸಂಚಾಲಕರಾದ ಡಾ. ಕೆ.ಜಿ. ಪ್ರಕಾಶ್, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಅದರ ಲಾಭವನ್ನು ಪಡೆದರು.