10ರಂದು ರೈತ ಕೃಷಿ ಕಾರ್ಮಿಕರ ವಿಧಾನಸೌಧ ಚಲೋ
ಧಾರವಾಡ ಹುಬ್ಬಳ್ಳಿ 06: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಮಾರ್ಚ್ 10ರ ರೈತ ಕೃಷಿ ಕಾರ್ಮಿಕರ ವಿಧಾನ ಸೌಧ ಚಲೋ ಕುರಿತು ಧಾರವಾಡ ತಾಲೂಕಿನ ಮುಗದ, ಕಲ್ಲಾಪುರ, ವರಹ ನಾಗಲಾವಿ, ಮಂಡ್ಯಾಳ, ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ನಡುವೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಇಂದು ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಅತ್ಯಂತ ಸಂಕಟಮಯ ಜೀವನ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಲದಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹೊಸ ಹೆಸರಿನೊಂದಿಗೆ ಜಾರಿ ಮಾಡಿ ರೈತರ ಮರಣ ಶಾಸನ ಬರೆಯಲು ಹೊರಟಿದೆ. ಇನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುತ್ತೇವೆ ಎಂದು ಹೇಳುತ್ತಲೇ ರೈತರ ಮೇಲೆ ಕೇಸ್ ಹಾಕಿ ಭೂಮಿಯಿಂದ ರೈತರನ್ನು ಒಕ್ಕಲೆಬ್ಬುಸುತ್ತಿದ್ದಾರೆ. ಕೃಷಿ ಒಳಸುರಿವುಗಳಾದ ಬೀಜ, ಗೊಬ್ಬರ ಕೀಟನಾಶಕ ಎಲ್ಲದರ ಬೆಲೆಯು ಗಗನಕ್ಕೆರಿ ರೈತನ ಬದುಕನ್ನು ಪಾತಾಳ ಸೇರುವಂತೆ ಮಾಡಿದೆ. ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೆ ರೈತನ ಮಗ್ಗಲು ಮುರಿಯುತ್ತಿದೆ. ವಿದ್ಯುತ್ ಕಾಯ್ದೆ 2023ರನ್ನು ಜಾರಿಗೊಳಿಸಿ ವಿದ್ಯುತ್ ಖಾಸಗಿಕರಣ ಮಾಡಿ ಪ್ರಿಪೇಡ ಮಾಡಲು ಹೊರಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಹಣ ಪಾವತಿ ಮಾಡಲಾಗದೆ ಕತ್ತಲೆಯಲ್ಲೇ ಜೀವನ ನಡೆಸುವಂತಾಗುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ವಿರೋಧಿಸಿ ಇದೇ ಮಾರ್ಚ್ 10 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ರೈತ ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಹೋರಾಟದಲ್ಲಿ ಭಾಗವಹಿಸುವರು 7411516670, 8553363832 ಈ ನಂಬರಿಗೆ ಸಂಪರ್ಕಿಸಲು ರೈತ ಕೃಷಿ ಕಾರ್ಮಿಕರ ಸಂಘಟನೆ ಮನವಿ ಮಾಡಿದೆ. ಜಿಲ್ಲಾಧ್ಯಕ್ಷರಾದ ದೀಪಾ ಧಾರವಾಡ, ಜಿಲ್ಲಾ ಸಂಘಟನಾ ಕಾರರಾದ ಮಂಜುನಾಥ್ ಪಾಟೀಲ್, ನಾರಾಯಣ ಮೇಘಾನಿ, ಸಿದ್ದಮ್ಮ, ಮಲ್ಲಪ್ಪ, ನಾಗಪ್ಪ ಮುಂತಾದವರು ಇದ್ದರು.