ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ದ್ರಾಕ್ಷಿ ಬೆಳೆಗಾರರ ಸಮಸ್ಯ ಬಗೆ ಹರಿಸುವಂತೆ ಆಗ್ರಹ

On behalf of the Grape Growers' Association, a request to solve the problems of the grape growers

ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ದ್ರಾಕ್ಷಿ ಬೆಳೆಗಾರರ ಸಮಸ್ಯ ಬಗೆ ಹರಿಸುವಂತೆ ಆಗ್ರಹ

ಅಥಣಿ 19 :ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ದ್ರಾಕ್ಷಿ ಬೆಳೆಗಾರರ ಸಮಸ್ಯ ಬಗೆ ಹರಿಸುವಂತೆ ಆಗ್ರಹಿಸಿ ಅಥಣಿಯ ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಅವರ ನೇತೃತ್ವದಲ್ಲಿ ಅಥಣಿ ದ್ರಾಕ್ಷಿ ಬೆಳೆಗಾರರ ಸಂಘದ ಸದಸ್ಯರು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಕೇಂದ್ರ ಸಚಿವರಾದ  ಶಿವರಾಜಸಿಂಗ  ಚವ್ಹಾಣ, ಕೇಂದ್ರ ಸಚಿವರಾದ ಎಚ್‌. ಡಿ ಕುಮಾರ ಸ್ವಾಮಿ,  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಇವರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿ  ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಮನವಿ ಸಲ್ಲಿಸಿದರು.  ದ್ರಾಕ್ಷಿ ಬೆಳೆಗೆ  ಪ್ರತಿ ವರ್ಷ ಒಂದಲ್ಲ ಒಂದು ನೈಸರ್ಗಿಕ ಸಮಸ್ಯೆ ಎದುರಾಗುತ್ತಿದೆ ಮತ್ತು ದರ ಕುಸಿಯುತ್ತಿರುವ ಪರಿಣಾಮ ದ್ರಾಕ್ಷಿ ಬೆಳೆಗಾರರು ತೀವೃ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಕೇಂದ್ರ ಸರಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ಮನವಿಯಲ್ಲಿ ಕೇಂದ್ರ ಸಚಿವರನ್ನು  ಆಗ್ರಹಿಸಿದ್ದಾರೆ. ಅನೇಕ ವರ್ಷಗಳಿಂದ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ಬಗೆ ಹರಿಸಿ ಅಗತ್ಯ ಪರಿಹಾರ  ಒದಗಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸುತ್ತ ಬಂದಿದ್ದರೂ ಕೂಡ ರಾಜ್ಯ ಸರಕಾರ ಮಾತ್ರ ಇಲ್ಲಿಯವರೆಗೂ ಯಾವುದೇ ಅಗತ್ಯ ಕ್ರಮ ಜರುಗಿಸಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ. ದ್ರಾಕ್ಷಿ ಬೆಳೆಗಾರರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಎಲ್ಲ ರಾಜ್ಯಗಳಲ್ಲಿಯೂ ಒಂದೇ ರೀತಿಯ ಸಮಸ್ಯೆಗಳು ಇರುವುದರಿಂದ ಅಧಿವೇಶನದಲ್ಲಿ ದ್ರಾಕ್ಷಿ ಬೆಳೆಯ ನಷ್ಟದ ಮತ್ತು ಬೆಂಬಲ ಬೆಲೆಯ ಕುರಿತು ಚರ್ಚಿಸಿ ಪರಿಹಾರ ಒದಗಿಸುವ ಮೂಲಕ ರೈತರ ಸಹಾಯಕ್ಕೆ ಧಾವಿಸಬೇಕು ಎಂದು ಮನವಿಯಲ್ಲಿ ಕೇಂದ್ರ ಸಚಿವರನ್ನು ಆಗ್ರಹಿಸಿದ್ದಾರೆ. ದ್ರಾಕ್ಚಿ ಬೆಳೆಗಾರರ ನಿಯೋಗದಲ್ಲಿ  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ದ್ರಾಕ್ಷಿ ಬೆಳೆಗಾರರಾದ  ಪ್ರಕಾಶ್ ಪಾಟಿಲ, ಸುಭಾಸ ಮೊರೆ, ಅಪ್ಪಾಸಾಬ ತೇರದಾಳ, ಶ್ರೀಕಾಂತ ಮಾಕಾಣಿ ಸೇರಿದಂತೆ ಹಲವರು  ಉಪಸ್ಥಿತರಿದ್ದರು