ಫೆ.26 ರಂದು ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ಲಿಂಗದಹಳ್ಳಿಯಲ್ಲಿ ವಿಶ್ವದಲ್ಲಿಯೇ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ

On February 26, the world's largest crystal lingam installation was held at Sukshetra Lingadahalli

ಫೆ.26 ರಂದು ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ಲಿಂಗದಹಳ್ಳಿಯಲ್ಲಿ ವಿಶ್ವದಲ್ಲಿಯೇ ಬೃಹತ್ ಸ್ಪಟಿಕ ಲಿಂಗ ಪ್ರತಿಷ್ಠಾಪನೆ  

ರಾಣೇಬೆನ್ನೂರ 12: ತಾಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮವನ್ನು ಭೂಕೈಲಾಸ ಮಾಡುವ ಸಂಕಲ್ಪದಿಂದ  ಹಾಗೂ ಲೋಕ ಕಲ್ಯಾಣಕ್ಕಾಗಿ ವಿಶ್ವದಲ್ಲಿಯೇ ದೊಡ್ಡದಾದ 9ಅಡಿ ಎತ್ತರದ ಹಾಗೂ 7 ಟನ್ ತೂಕದ ಸ್ಪಟಿಕ ಲಿಂಗದ ಪ್ರತಿಷ್ಠಾಪನೆಯನ್ನು  ಫೆ.,26 ರಂದು ಶಿವರಾತ್ರಿಯಂದು ನೆರವೇರಲಿದೆ ಎಂದು ಶ್ರೀಮಠದ ಪೀಠಾಧಿಪತಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಶ್ರೀಮಠದಲ್ಲಿ ಪ್ರತಿಷ್ಠಾಪಿಸಿದ್ದ ಸ್ಪಟಿಕ ಲಿಂಗವು ಕಳುವಾದ ಕಾರಣ ಬಹಳ ಮನಸ್ಸಿಗೆ ನೋವಾಗಿತ್ತು.ಭಕ್ತರ ಸಧಿಚ್ಚೆಯ ಮೇರೆಗೆ ಪುನಃ ಜಗತ್ತಿನಲ್ಲಿಯೇ ಅತಿ ದೊಡ್ಡದಾದ 9 ಅಡಿಯ ಸ್ಪಟಿಕ ಲಿಂಗ ಟಿಬೆಟಿಯನ್ನಿಂದ ತರಿಸಲಾಗುವುದು ಎಂದರು.ಈ ಹಿಂದೆ ಜಗತ್ತಿನಲ್ಲಿ ಅತಿ ದೊಡ್ಡದಾದ ಸ್ಪಟಿಕಲಿಂಗವು ಅಮೆರಿಕದಲ್ಲಿತ್ತು. ಪ್ರಸ್ತುತ ರಾಜ್ಯದ ಲಿಂಗದಹಳ್ಳಿ ಮಠದಲ್ಲಿ ಅತಿ ದೊಡ್ಡದಾದ 9 ಅಡಿಯ ಲಿಂಗವನ್ನು ಪ್ರತಿಷ್ಠಾಪಿಸ ಲಾಗುವುದು. ಪ್ರಸ್ತುತ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಸ್ಪಟಿಕ ಲಿಂಗವು ದೇಶದ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೆಮಠದಲ್ಲಿ ಇರಲಿದೆ. ಅತಿದೊಡ್ಡ ಸ್ಪಟಿಕ ಲಿಂಗವು ಮಹಾಶಕ್ತಿಯುಳ್ಳದ್ದಾಗಿರುತ್ತೆ. ಈ ಶಕ್ತಿಯ ಸ್ಪಟಿಕ ಲಿಂಗವು ಜಗತ್ತಿನ ಸರ್ವಜನರ ಕಲ್ಯಾಣ ವಾಗಲಿದೆ ಎಂದರು.ಪ್ರತಿದಿನ ಸ್ಪಟಿಕಲಿಂಗಕ್ಕೆ ರುದ್ರಾಭಿಷೇಕ, ಕ್ಷೀರಾಭಿಷೇಕ ವಿವಿಧ ಪೂಜಾ ಕೈಂಕರ್ಯಗಳು  ಮಠದಲ್ಲಿ ನೆರವೇರುವುದರಿಂದ ಸಮಸ್ತ ಮನುಕುಲಕ್ಕೆ ಒಳ್ಳೆಯದಾಗಲಿದೆ. ಸ್ಪಟಿಕ ಲಿಂಗವನ್ನು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಮೃತ ಹಸ್ತದಿಂದ ಹಾಗೂ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಪಿಸಲಾಗುವುದು  ಎಂದರು.ನಂತರ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವದ್ಪಾದಂಗಳವರು ವಹಿಸುವರು. ನೇತೃತ್ವವನ್ನು ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು ಎಂದರು.ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು,  ತೊಗರ್ಸೆಯ ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಮತ್ತು ಚನ್ನವೀರ ದೇಶಿ  ಕೇಂದ್ರ ಶಿವಾಚಾರ್ಯ .  ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ,  ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಶ್ರೀಗಳು. ಮಣಕೂರಿನ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿರುವರು ಎಂದರು.ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್, ಉಪ ಸಭಾಪತಿ ರುದ್ರ​‍್ಪ ಲಮಾಣಿ,  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಶಾಸಕ ಪ್ರಕಾಶ್ ಕೋಳಿವಾಡ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಸೇರಿದಂತೆ ಹಾಲಿ. ಮಾಜಿ ಶಾಸಕರು ಆಗಮಿಸುವರು. ಈ  ಮಂಗಳಮಯ ಕಾರ್ಯಕ್ಕೆ ಸದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.ಮಹಾಶಿವರಾತ್ರಿ ನಿಮಿತ್ತ ಶಿವ ಪೂಜಾ ಕಾರ್ಯಕ್ರಮದ ಜೊತೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಶ್ರೀಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳವರ 60ನೇ ವರ್ಷದ ಜನ್ಮದಿನೋತ್ಸವ ಜರುಗಲಿದೆ ಎಂದರು.  ರವಿಂದ್ರಗೌಡ ಪಾಟೀಲ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಪ್ರೊ. ಸಿ.ಎನ್‌.ಪೂಜಾರ, ಮಲ್ಲಿಕಾರ್ಜುನ ಸಾವಕ್ಕಳವರ ಸೇರಿದಂತೆ ಇತರರು ಇದ್ದರು.