ಫೆ.19ರಂದು ವಿದ್ಯಾ ಹಾಗೂ ವಿಶ್ವಚೇತನ ಪ್ರಕಾಶನದ ಕೃತಿಗಳ ಲೋಕಾರೆ್ಣ
ದೇವರಹಿಪ್ಪರಗಿ, 17; ವಿದ್ಯಾಚೇತನ ಹಾಗೂ ವಿಶ್ವಚೇತನ ಪ್ರಕಾಶನ ಸಿಂದಗಿ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜ ಇವರ ಸಹಯೋಗದಲ್ಲಿ ಕೃತಿಗಳ ಲೋಕಾರೆ್ಣ ಕಾರ್ಯಕ್ರಮ ಫೆಬ್ರುವರಿ 19ರಂದು ಬುಧುವಾರ ಬೆಳಗ್ಗೆ 10:30 ಕ್ಕೆ ಪಟ್ಟಣದ ಎ.ಬಿ. ಸಾಲಕ್ಕಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಏರಿ್ಡಸಲಾಗಿದೆ ಎಂದು ಎಸ್. ಎಸ್. ಸಾತಿಹಾಳ ಶಿಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಕಾಲೇಜಿನ ಪ್ರಾಚಾರ್ಯರಾದ ವ್ಹಿ.ಜಿ.ಹೂನಳ್ಳಿ ವಹಿಸಲಿದ್ದಾರೆ. ಕೃತಿಗಳ ಲೋಕಾರೆ್ಣಯನ್ನು ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ, ಕೃತಿಗಳ ಪರಿಚಯ ಸಿಂದಗಿ ಎಚ್.ಜಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಎ.ಆರ್. ಹೆಗ್ಗನದೊಡ್ಡಿ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಎನ್.ಬಸವರಡ್ಡಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ.ಎಚ್.ವಾಲೀಕಾರ, ತಾಲೂಕ ಕಸಾಪ ಅಧ್ಯಕ್ಷರಾದ ಜಿ.ಪಿ. ಬಿರಾದಾರ ಆಗಮಿಸಲಿದ್ದಾರೆ. ನಿವೃತ್ತ ಶಿಕ್ಷಕರು ಹಾಗೂ ಮಕ್ಕಳ ಸಾಹಿತಿಗಳಾದ ಹ.ಮ. ಪೂಜಾರ ಅವರ "ನನಗೆ ನೀನು ಬೇಕು" ಮಕ್ಕಳ ಕಥಾ ಸಂಕಲನ ಹಾಗೂ ಶಿಕ್ಷಕರು ಹಾಗೂ ಮಕ್ಕಳ ಸಾಹಿತಿಗಳಾದ ಎಸ್.ಎಸ್.ಸಾತಿಹಾಳ ಅವರ "ಅಜ್ಜಿಯ ಕೌದಿ" ಮಕ್ಕಳ ಕವನ ಸಂಕಲನ ಕೃತಿಗಳು ಲೋಕಾರೆ್ಣಗೊಳಲಿವೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ಪ್ರಕಾಶಕರು ಎಲ್ಲ ಸಾಹಿತ್ಯ ಆಸಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ