18ರಂದು ಹೊಳಗುಂದಿ ಗ್ರಾಮದಲ್ಲಿ ಸಿದ್ದೇಶ್ವರಸ್ವಾಮಿ ರಥೋತ್ಸವ
ಹೂವಿನಹಡಗಲಿ 16: ಹೊಳಗುಂದಿ ಗ್ರಾಮದ ಬೆಟ್ಟದ ಮೇಲೆ ತಲೆಎತ್ತಿರುವ ಸಿದ್ದೇಶ್ವರ ಸುಕ್ಷೇತ್ರಗತಕಾಲದ ವೈಭವ ಸಾರುವುದರ ಜೊತೆಗೆ ಕಲೆ. ಸಂಸ್ಕೃತಿ, ಸಾಹಿತ್ಯ, ರಂಗಭೂಮಿ ಸರ್ವ ಧರ್ಮವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಬಿಂಬಿಸುತ್ತದೆ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಹರಿದಿನಗಳನ್ನು ಊರಿನ ಹಬ್ಬವನ್ನಾಗಿ ಆಚರಿಸುವುದಕ್ಕೆ ಪ್ರತಿ ವರ್ಷ ಹೊಳಗುಂದಿಯಲ್ಲಿ ನಡೆಯುವ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿದರ್ಶನವೆನಿಸಿದೆ.
ಹೂವಿನಹಡಗಲಿಯಿಂದ ಹೊಸಪೇಟೆ ಮಾರ್ಗದಲ್ಲಿ 9ಕಿ.ಮೀ.ದೂರದಲ್ಲಿರುವ ಹೊಳಗುಂದಿ ಬಾವಿಹಳ್ಳಿ ಎಂಬ ಅವಳಿ ಗ್ರಾಮಗಳಿವೆ. ಪುರಾತನಕಾಲದಲ್ಲಿ ವೀರಾಪುರ, ಸಿದ್ದಾಪುರ, ಜೈರಾಪುರ, ಗಿರಿಯಾಪುರ, ಸೋಮಾಪುರ, ಅರಿಕೇರಿ, ಸನಗಟ್ಟಿ, ಈ ಏಳು ಹಳ್ಳಿಗೆ ಳನ್ನೊಳಗೊಂಡ ಎಳುಗುಂದಿ ಹೆಸರಿನಲ್ಲಿಗುರುತಿಸಲ್ಪಟ್ಟಿತ್ತು.ಈಗ್ರಾಮದ ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಉದ್ಭವ ಮೂರ್ತಿಇದೆ. ಸುತ್ತ ಮುತ್ತಲಿನ ಹಾವಿನ ಮತ್ತುಗಿಡ, ಬಳ್ಳಿಗಳು. ಬೆಳೆದು ಗವಿಯಂತಿದ್ದು,ಬೆಟ್ಟದಲ್ಲಿ ಮೇಯಲು ಹೋಗುತ್ತಿದ್ದ ಜಾನುವಾರುಗಳ ಪೈಕಿ ಗೌರಿ ಎಂಬ ಗೋವು ಪ್ರತಿನಿತ್ಯ ಲಿಂಗದ ಮೇಲೆ ಹಾಲನ್ನುಕರೆಯುತ್ತಿತ್ತೆಂಬ ಕಥೆಇದನ್ನಕಂಡಗ್ರಾಮದ ಹಿರಿಯರಿಗೆ ಕನ್ನಸಿನಲ್ಲಿ ಬಂದ ಸಿದ್ದೇಶ್ವರ ಸ್ವಾಮಿಯುತನ್ನದೇವಸ್ಥಾನ ನಿರ್ಮಿಸು ವಂತೆ ತಿಳಿಸಿದೆ. ಅದೇ ಸ್ಥಳದಲ್ಲಿ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿರುವುದಾಗಿ ಪ್ರತೀತಿ ಈ ದೇವಸ್ಥಾನದಲ್ಲಿ ಸಿದ್ದೇಶ್ವರ ಸ್ವಾಮಿಯಉದ್ಭವ ಲಿಂಗದ ಹಿಂಭಾಗದಲ್ಲಿರೇಣುಕಾಚಾರ್ಯರ ಪ್ರತಿಮೆ, ಗರ್ಭಗುಡಿಯ ಹೊರ ಭಾಗದಲ್ಲಿಅಶ್ವತ್ ವೃಕ್ಷಗಳು, ಬಳ್ಳಿ, ಕಣಿಗಿಲೆ. ಪುಷ್ಟ ವೃಕ್ಷಗಳು ಆಕರ್ಷಣೆಯಕೇಂದ್ರ ಬಿಂದುಗಳಾಗಿ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.ಜನವರಿಯಲ್ಲಿ ಹುಣ್ಣುಮೆ ನಂತರ ಸ್ವಾಮಿಯರಥೋತ್ಸವ. ಅಗ್ನಿಧಾರ್ಮಿಕಕಾರ್ಯ ಕ್ರಮಗಳು ನಡೆಯಲಿವೆ. ಜಾತ್ರೆ ನಿಮಿತ್ತಜಾನುವಾರು ಗಳು ಜಾತ್ರೆ. ಸ್ಥಳೀಯ ಕಲಾವಿದರಿಂದ ನಾಟಕಗಳು ನಡೆಯಲಿವೆ. ನೂಲ ಹುಣ್ಣುಮೆ ದಿನ ಪಲ್ಲಕ್ಕಿಉತ್ಸವ.ಗ್ರಾಮೀಣ ಆಟಗಳು ನಡೆಯಲಿವೆ.ಕಾರ್ತಿಕ ಮಾಸದ ಶ್ರಾವಣ ಮಾಸದಲ್ಲಿಒಂದುತಿಂಗಳು ಹೆಚ್.ಎಂ.ಬೆಟ್ಟಯ್ಯ .ಕರಿಬಸವಯ್ಯ ನೇತೃತ್ವದಲ್ಲಿಅಭಿಷೇಕ ನಡೆಸುತ್ತಿತ್ತು. ಇದೀಗ ಹೆಚ್.ಎಂ.ಮಲ್ಲಿಕಾರ್ಜುನಯ್ಯಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ನಡೆಯಲಿವೆ. ಸಿದ್ದೇಶ್ವರ ದೇಗುಲ ಕಮಿಟಿ ವಾಮದೇವಪ್ಪಅಧ್ಯಕ್ಷತೆಯಲ್ಲಿಅವಧಿಯಲ್ಲಿಕಲ್ಯಾಣ ಮಂಟಪ .ಮಹಾ ದ್ವಾರ ನಿರ್ಮಿಸಿದೆ.ನವಗ್ರಹ ಮಂಟಪ. ಪ್ರತಿಮೆಇದೆ.ಕಲ್ಯಾಣ ಮಂಟಪದಲ್ಲಿಧಾರ್ಮಿಕ. ಮದುವೆ ಸಮಾರಂಭ ಗಳು ನಡೆಯಲಿವೆ.ಈಚೆಗೆ ಎಸ್.ಮಹೇಶ್ವರ್ಪಅಧ್ಯಕ್ಷತೆಯಲ್ಲಿ ನೂತನರಥೋತ್ಸವ.ದೇವಾಲಯ ಸುಧಾರಣೆ ಕಂಡಿದೆ.ಹೊಳಗುಂದಿ ಗ್ರಾಮದಲ್ಲಿಇತಿಹಾಸ ಸಾರುವ ಶಾಸನಗಳಿರುವ ದೇವಾಲಯಗಳಿದ್ದು, ಪಂಚಲಿಂಗು ಗ್ರಾಮ ಎಬ ಹೆಗ್ಗಳಿಕೆ ಪಾತ್ರವಾದ ಹೊಳಗುಂದಿಯಲ್ಲಿ ಸಿದ್ದೇಶ್ವರ, ಬಿಲ್ಲೇಶ್ವರ, ಸೋಮೇಶ್ವರ, ಬಾಳೇಶ್ವರ, ಗುಡಿಗಳಲ್ಲಿ ಶಾಸನಗಳಿವೆ. ಶಾಸನ ಪ್ರಕಾರಚಾಲುಕ್ಯಅರಸತ್ರಿಭುದದೇವಾಲಯ ನಿರ್ಮಿಸಿರುವ ಉಲ್ಲೇಖವಿದೆ.
ವೀರಭದ್ರೇಶ್ವರದೇಗುಲ ಕೂಡ ಇದ್ದು, ಇಲ್ಲಿ ಧಾರ್ಮಿಕ ಮದುವೆ ಸಮಾರಂಭಗಳು ಕೂಡ ನಡೆಯಲಿವೆ. ಹಂಪಿ ಹುಣ್ಣಿಮೆಯ ದಿನ ಸ್ವಾಮಿಯ ಅಗ್ನಿ ಕಾರ್ಯಕ್ರಮ ಜರುಗಲಿದೆ. ದೇವರಮನಿ ವೀರೇಶ ಅಧ್ಯಕ್ಷತೆಯಲ್ಲಿ ಕಲ್ಯಾಣ ಮಂಟ ನಿರ್ಮಿಸಲಾಗಿದೆ. ಮತ್ತು ಮುದೇಗೌಡ್ರ ಪ್ರಕಾಶ ಅದ್ಯಕ್ಷತೆಯಲ್ಲಿ ದೇಗುಲ ಅಭಿವೃದ್ಧಿಯತ್ತ ಸಾಗಿದೆ.