ಗ್ಯಾರಂಟಿ ಯೋಜನೆಗಳು ಸಮರ್ಕವಾಗಿ ಜಾರಿಗೋಳಿಸಲು ಅಧಿಕಾರಿಗಳಿಗೆ ಸೂಚನೆ
ಬ್ಯಾಡಗಿ 31: ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದುಗ್ಯಾರಂಟಿಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಶಂಭನಗೌಡ ಪಾಟೀಲ ಹೇಳಿದರು. ಶನಿವಾರ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ‘ಗ್ಯಾರಂಟಿಯೋಜನೆ ಅನುಷ್ಠಾನ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.ಸರಕಾರ ಮಹತ್ತರ ಯೋಜನೆಗಳಾದ ಗ್ಯಾರಂಟಿ ಯೋಜನೆಗಳು ಅರ್ಹ ವ್ಯಕ್ತಿಗಳಿಗೆ ತಲುಪಿಸಲು ಆಯಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು ಅಲ್ಲದೇ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಂಡು ಅವರ ಕೆಲಸಗಳನ್ನು ತಡ ಮಾಡದೇ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿನಲ್ಲಿ ಹೆಚ್ಚಿನ ಫಲಾನುಭವಿಗಳು ಹಣ ಪಡೆಯುತ್ತಿದ್ದು ಬಾಕಿ ಉಳಿದವರಿಗೂ ಹಾಗೂ ತಾಲ್ಲೂಕಿನಲ್ಲಿರುವ ಇನ್ನುಳಿದವರಿಗೂ ಯೋಜನೆಯ ಅನುಕೂಲ ದೊರೆಯುವ ಕುರಿತು ಶಾಸಕರೊಂದಿಗೂ ಚರ್ಚಿಸಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಬೇಕುಎಂದರಲ್ಲದೆ ನಿಯಮಾನುಸಾರ ಪ್ರತಿ ತಿಂಗಳು ಸ್ವಯಂಘೋಷಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಗ್ಯಾರಂಟಿಯೋಜನೆ ಅನುಷ್ಠಾನ ಸಮಿತಿಯ ನಿರ್ದೇಶಕರಾದ ಹನುಮಂತಪ್ಪ ಕಾಟೇನಹಳ್ಳಿ, ರಾಮಪ್ಪ ಕೋಟಿಯವರ, ಪೀರಾಂಬಿ ವರ್ದಿ, ಸುಶೀಲಾ ಲಮಾಣಿ, ಇಮಾಮಸಾಬ ಓಲೇಕಾರ,ಗಣೇಶಪ್ಪ ತುಮರಿಕೊಪ್ಪ, ಸಿದಾರಲಿ ಕರೀಂ, ವೀರೇಶ ಲಮಾಣಿ, ಸುರೇಶ ಬಂಗಾರಿ,ವೀರಭದ್ರಗೌಡ ಪಾಟೀಲ, ಗುಡದೇಶ ಲಿಂಗದಳ್ಳಿ, ಹನುಮಂತಪ್ಪ ಶಿರಗಂಬಿ, ಅಲ್ಫಜಅಹ್ಮದ ಹಾವೇರಿ, ರಾಜಪ್ಪ ಅಂಗಾರಗಟ್ಟಿ ಹಾಗೂ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಐದು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.