ಬಡ ಜನರ ಭೂಮಿಗೆ ಕನ್ನ ಹಾಕಿದ ಅಧಿಕಾರಿಗಳು: ಸಮತಳ

ಲೋಕದರ್ಶನ ವರದಿ

ಕೊಪ್ಪಳ 31: ರಾಜ್ಯದಲ್ಲಿರುವ ಭೂ ರಹಿತ ಹಾಗೂ ನೀವೆಶನ ವಂಚಿತ ಬಡ ಜನರಿಗೆ ಸರಕಾರದಿಂದ ನೀಡಬೇಕಾದ ಭೂಮಿ ಮತ್ತು ವಸತಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಕೈಚಳಕದಿಂದ ಅನ್ಯರ ಪಾಲಾಗುತ್ತಿರುವುದನ್ನು ತಡೆಯಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕುಮಾರ್ ಸಮತಳ ಆಗ್ರಹಿಸಿದರು.

                ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಚಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಸರಕಾರ ಬಡ ಜನರ ಅಭಿವೃದ್ಧಿಗೆ ಸಾಕಷ್ಟು ರೀತಿಯಲ್ಲಿ ಸೌಲಭ್ಯವನ್ನು ನೀಡುತ್ತಿದೆ, ಆದರೆ ಯೋಜನೆಗಳು ಜನ ಸಾಮಾನ್ಯರಿಗೆ ದೊರೆಯದೆ ಅನ್ಯರ ಪಾಲಾಗುತ್ತಿವೆ. ಬಗ್ಗೆ ಸರಕಾರದ ಆದೇಶಗಳಿದ್ದರೂ ಜಾರಿಯಾಗಿಲ್ಲ, ಅವುಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ, ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಹಿರಿಯ ಸ್ವಾತಂತ್ರ್ಯ ಸೇನಾನಿ ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನು ನಡೆಸುತ್ತಿದೆ. ಸರಕಾರವು ಉನ್ನತ ಮಟ್ಟದ ಸಮಿತಿಯ ಮೂಲಕ ಭೂಮಿ ಮತ್ತು ವಸತಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲು ಮೇಲುಸ್ತುವಾರಿ ಸಮಿತಿ ರಚಿಸಿದ್ದು, ಬಡ ಜನರ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಮಟ್ಟದ ಸಮಿತಿಯಲ್ಲಿ ಗಂಭೀರವಾದ ಪ್ರಯತ್ನಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.

                .12 ರಂದು ಪ್ರತಿಭಟನೆ: ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಮೂಲಕ .12 ರಂದು ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಡಳಿತದ ಮುಂದೆ ಅನಿದರ್ಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾತ್ತಿದೆ  ಎಂದು ತಿಳಿಸಿದರು.

                ಮೂಲಕ ಉನ್ನತ ಮಟ್ಟದ ಸಮಿತಿಯ ತೀಮರ್ಾನಗಳ ಜಾರಿ ಹಾಗೂ ಫಾರಂ 50,53 ಮತ್ತು 94(ಸಿ), 94(ಸಿಸಿ) ದಾಖಲೆಗಳನ್ನು ಸಲ್ಲಿಸಿದವರಿಗೆ ಭೂಮಿ ಮತ್ತು ನೀವೆಶನಗಳಿಗೆ ಕೂಡಲೇ ಹಕ್ಕು ಪತ್ರ ವಿತರಿಸುವ ಬಗ್ಗೆ ಇನ್ನೂ ಹಲವಾರು ಸಮಸ್ಯೆಗಳ ಕುರಿತು ಸರಕಾರಕ್ಕೆ ಮನವರಿಕೆ ಮಾಡಿ ಕೊಡಲಾಗುತ್ತದೆ ಎಂದು ಹೇಳಿದರು.

                ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಡಿ.ಎಚ್.ಪೂಜಾರ, ಕನರ್ಾಟಕ ರಾಜ್ಯ ರೈತ ಸಂಘದ ಮುಖಂಡ ಮಲ್ಲೇಶಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.