ಲೋಕದರ್ಶನ ವರದಿ
ಕುಮಟಾ: ತಾಲೂಕಾಡಳಿತ ಹಾಗೂ ತಾಲೂಕ ಪಂಚಾಯತ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಯಕ ಶರಣರ (ದಲಿತ ವಚನಕಾರ) ಜಯಂತಿ ಆಯೋಜಿಸಲಾಗಿತ್ತು. ಆದರೆ, ಎಷ್ಟೇ ಕಾದರೂ ಕೊನೆಗೂ ಶಿವಶರಣರ ಜಯಂತಿಗೆ ಬಾರದ ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ನಡೆ ಸಾರ್ವಜನಿಕರ ಟೀಕೆಗೆ ಗುರಿಯಾಯಿತು.
ತಾಪಂ ಸಭಾಭವನದಲ್ಲಿ ಕಾಯಕ ಶರಣರ (ದಲಿತ ವಚನಕಾರ) ಜಯಂತಿ ಬೆಳಿಗ್ಗೆ 10:30ಕ್ಕೆ ಆಚರಣೆ ಸಮಯ ನಿಗದಿಪಡಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ಉಪನ್ಯಾಸಕರು, ಜನರು, ಪತ್ರಕರ್ತರು ಆಗಮಿಸಿದ್ದರು.
ವಿಪಯರ್ಾಸವೆಂದರೆ ಪಕ್ಕದ ತಹಶೀಲ್ದಾರ ಕಚೇರಿಯಲ್ಲೇ ಕುಳಿತಿದ್ದ ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ಅವರು ಕಾರ್ಯಕ್ರಮ ಉದ್ಘಾಟಿಸಲು ಬರದೇ ಅನಗತ್ಯ ಕಾಲ ಹರಣ ಮಾಡಿದರು. ಸಮಯಕ್ಕೆ ಬಂದ ಜನರನ್ನು ಕಾಯಿಸಿದರು. ಬೇಸತ್ತ ಕೆಲವರು ಉಪವಿಭಾಗಾಧಿಕಾರಿ ನಡೆಯನ್ನು ಟೀಕಿಸಿ ವಾಪಸ್ ತೆರಳಿದರು. ಕೊನೆಗೂ ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಬರದಿರುವುದರಿಂದ ಬಹುತೇಕ ಜನರು ವಾಪಸ್ ತೆರಳಿದರು. ಬೆರಳೆಣಿಕೆಯಷ್ಟು ಜನರು ಕೊನೆಯ ವರೆಗೂ ಕಾಯುತ್ತಿದ್ದರು. ಶರಣರ ಹಾಗೂ ವಚನಕಾರರ ಜಯಂತಿ ಆಚರಣೆ ಸರಕಾರದ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮಕ್ಕೆ ಇಲಾಖೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬರುತ್ತಿಲ್ಲ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿದೆ. ಇಂತಹ ವಿಶಿಷ್ಟ ಕಾರ್ಯಕ್ರಮಗಳಿಗೆ ಉಪವಿಭಾಗಾಧಿಕಾರಿಗಳು ಅಸಡ್ಡೆ ತೋರುತ್ತಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರದ ಕಾರ್ಯಕ್ರಮಗಳು ಗಾಳಿಗೆ ತೂರಿ ಕಾಟಾಚಾರಕ್ಕೆ ಎಂಬಂತೆ ಇಂತಹ ಜಯಂತಿಗಳು ಆಚರಣೆಯಾಗುತ್ತಿರುವುದು ವಿಪಯರ್ಾಸ ಎಂಬ ಮಾಥು ಪ್ರಜ್ಞಾವಂತ ನಾಗರಿಕರಿಂದ ಕೇಳಿಬಂತು.