ವಸ್ತುಗಳಿಗೆ ಸಂಸ್ಕಾರ ನೀಡಿದಾಗ ಅದರ ಮೌಲ್ಯ ಹೆಚ್ಚಾಗಲು ಸಾಧ್ಯ : ಸಾಹಿತಿ ಮ್ಯಾಗೇರಿ

Objects can increase in value when they are cremated : Sahiti Mageri

ವಸ್ತುಗಳಿಗೆ ಸಂಸ್ಕಾರ ನೀಡಿದಾಗ ಅದರ ಮೌಲ್ಯ ಹೆಚ್ಚಾಗಲು ಸಾಧ್ಯ : ಸಾಹಿತಿ ಮ್ಯಾಗೇರಿ 

ಶಿಗ್ಗಾವಿ 05 : ವಸ್ತುಗಳಿಗೆ ಸಂಸ್ಕಾರ ನೀಡಿದಾಗ ಅದರ ಮೌಲ್ಯ ಹೆಚ್ಚಾಗಲು ಸಾಧ್ಯ ಎಂದು ಸಾಹಿತಿ ಶಿವಾನಂದ ಮ್ಯಾಗೇರಿ ಹೇಳಿದರು.  ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ಮತ್ತು ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಹಾಗೂ ಬಸವಲಿಂಗ ಸ್ವಾಮೀಜಿ ಪುಣ್ಯಾರಾಧನೆ ಅಂಗವಾಗಿ ನಡೆದ ಧರ್ಮ ಸಮಾರಂಭಮದಲ್ಲಿಮಾತನಾಡಿದ ಅವರು ಮನುಷ್ಯನಿಗೆ ಸಂಸ್ಕಾರ, ಸಂಸ್ಕೃತಿ ಪಡೆದಾಗ ಆತನ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ.ಮಠಮಂದಿರಗಳು ಅಂತಹ ಜ್ಞಾನವನ್ನು ನೀಡುವ ಕಾರ್ಯ ಮಾಡುತ್ತಿವೆ ಎಂದರು.  ಸೀತಾಗಿರಿ ಎ. ಸಿ. ವಾಲಿ ಮಹಾರಾಜರು ಪ್ರವಚನ ಮಾಡಿದ ಅವರು ಮಹಾತ್ಮರು, ಶರಣರ ವಚನಗಳ ತಿರುಳನ್ನು ತಿಳಿಯುವುದು ಕಂಟಿನವಾಗಿದೆ. ಅಂತಹ ಶರಣ ವಚನಗಳು ಪಚನವಾಗಬೇಕು. ಆಗ ಮನುಕುಲದ ಬದುಕು ಸಾರ್ಥಕವಾಗುತ್ತಿದೆ ಅಲ್ಲದೇ ಶಿವಶರಣ ವಚನಗಳು ಸಮಾಜದಲ್ಲಿನ ಅಂಕು, ಡೊಂಕುಗಳನ್ನು ತಿದ್ದು ಮೂಲಕ ಸದೃಢ ನಾಡು ನಿರ್ಮಾಣ ಮಾಡುತ್ತಿವೆ. ಆದರೆ ವಚನಗಳು ಹೊರ ನೋಟ ಒಂದಾದರೆ ಒಳ ನೋಟವೆ ಬೇರೆಯಾಗಿದೆ. ಹೀಗಾಗಿ ವಚನಗಳನ್ನು ತಿಳಿದಾಗ ಜ್ಞಾನ ಹೆಚ್ಚಿಸುವ ಜತೆಗೆ ಬದುಕು ಪಾವನವಾಗುತ್ತಿದೆ ಎಂದರು.  ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರು ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ಎಸ್‌. ಕೆ. ಹೂಗಾರ, ಎಸ್‌. ಎನ್‌. ಮುಗಳಿ, ಉಪನ್ಯಾಸಕ ಶಶಿಕಾಂತ ರಾಠೋಡ, ಆನಂದ ಇಂದೂರ, ಶರೀಫ್ ಮಾಕಪ್ಪನವರ, ದೊಡ್ಡಾಟ ಕಲಾವಿದ ಬಸಣ್ಣ ಶಿಗ್ಗಾವಿ, ಬಸಲಿಂಗಪ್ಪ ನರಗುಂದ, ಚಿ.ನಿಖಿತ, ಶಿವಯೋಗಿ ಜವಳಿ, ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ಗಜಾನನ ಶೇಜವಾಡ್ಕರ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಇದ್ದರು. ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನ ಮತ್ತು ನಟರಾಜ ನಾಟ್ಯ ಶಾಲೆ ಮಕ್ಕಳ ಭರತ ನಾಟ್ಯ ಸೇರಿದಂತೆ ವಿವಿಧ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದಕಲಾವಿದ ಸಿದ್ದಲಿಂಗಪ್ಪ ನರೆಗಲ್ಲ, ಗದಿಗಯ್ಯ ಹಿರೇಮಠ ಸಂಗಡಿಗರಿಂದ ನಡೆದ ಸಂಗೀತ ಕಾರ್ಯಕ್ರಮಗಳು ಜರುಗಿದವು.