ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗನನಿಯ ಕಡಿಮೆ- ಶಿಕ್ಷಕರ ವಜಾ: ಎಐಡಿಎಸ್‌ಓ ಖಂಡನೆ

Number of students in undergrad colleges is too low- Teachers sacked: AIDSO condemns

ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗನನಿಯ ಕಡಿಮೆ- ಶಿಕ್ಷಕರ ವಜಾ: ಎಐಡಿಎಸ್‌ಓ ಖಂಡನೆ

ಬಳ್ಳಾರಿ 03: ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರದಕೊರತೆಯಕಾರಣ ನೀಡಿಉಪನ್ಯಾಸಕರನ್ನು ಕೆಲಸದಿಂದ ವಜಾಗೊಳಿಸುವಂತೆ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯುಆದೇಶ ಹೊರಡಿಸಿದೆ. ವಿಷಯವಾರು 40 ಕ್ಕಿಂತಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಹೊಂದಿರುವಉಪನ್ಯಾಸಕರನ್ನು ವಜಾ ಗೊಳಿಸಬೇಕಾಗಿ ಆದೇಶವು ತಿಳಿಸುತ್ತದೆ.ಕಳೆದ ಆರು ತಿಂಗಳಿನಿಂದ ಈ ಉಪನ್ಯಾಸಕರ ಸಂಬಳವನ್ನು ಕೂಡ ಸರ್ಕಾರವುತಡೆಹಿಡಿದಿದೆ.ಕರ್ನಾಟಕರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಈ ಕಡು ಶಿಕ್ಷಣ ವಿರೋಧಿ ಮತ್ತು ಹೃದಯಹೀನ ನಡೆಯನ್ನುಎಐಡಿಎಸ್‌ಓತೀವ್ರವಾಗಿಖಂಡಿಸುತ್ತದೆ.ಸರ್ಕಾರವು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲುಕ್ರಮ ಕೈಗೊಳ್ಳಬೇಕೆ ಹೊರತು, ಉಪನ್ಯಾಸಕರನ್ನು ವಜಾ ಮಾಡುವುದಲ್ಲ. ರಾಜ್ಯದ 821 ಅನುದಾನಿತ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಕೂಡ ಕೆಲವು ವಿಷಯಗಳಿಗೆ ವಿದ್ಯಾರ್ಥಿಗಳ ಸಂಖ್ಯೆಕಡಿಮೆಯಾಗಿದೆ.ಈ ಕಾರಣ ನೀಡಿ ಈಗ ಉಪನ್ಯಾಸಕರನ್ನು ವಜಾಗೊಳಿಸಿದರೆ, ಉಪನ್ಯಾಸಕರಕೊರತೆಯಿಂದ ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಕಡಿತಗೆದುಕೊಳ್ಳುತ್ತದೆ.ವಿದ್ಯಾರ್ಥಿಗಳಕೊರತೆಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆಯೇ, ಅಂತಿಮವಾಗಿ ಸರ್ಕಾರಿ ಮತ್ತುಅನುದಾನಿತ ಕಾಲೇಜುಗಳನ್ನು ಮುಚ್ಚುವ ಹುನ್ನಾರಇದಾಗಿದೆ. ಕೂಡಲೇಉಪನ್ಯಾಸಕರನ್ನು ವಜಾ ಮಾಡಿರುವಆದೇಶವನ್ನು ಸರ್ಕಾರವು ಹಿಂಪಡೆಯಬೇಕು ಮತ್ತುಅವಶ್ಯಕ ಸೌಕರ್ಯಗಳನ್ನು ನೀಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸರ್ಕಾರವೇಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿಯುಆಗ್ರಹ ವ್ಯಕ್ತಪಡಿಸುತ್ತದೆ.