ವಿದ್ಯಾಥರ್ಿಗೆ ಥಳಿತ: ವರದಿ ಸಲ್ಲಿಸಲು ಬಿಇಓಗೆ ಸೂಚನೆ

ಕೊಪ್ಪಳ 03: ಯಲಬುಗರ್ಾ ತಾಲೂಕು ಹಿರೇವಂಕಲಕುಂಟದ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾಥರ್ಿಯೋರ್ವನಿಗೆ ದೈಹಿಕ ಹಿಂಸೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಯಲಬುಗರ್ಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

  ಯಲಬುಗರ್ಾ ತಾಲೂಕು ಹಿರೇವಂಕಲಕುಂಟಾದ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪ್ರಭುದೇವ ಎನ್ನುವವರು ವಿದ್ಯಾಥರ್ಿಯೋರ್ವನಿಗೆ ಹೋಂವಕರ್್ ಮಾಡಿಲ್ಲ ಎಂಬ ಕಾರಣಕ್ಕಾಗಿ ದೈಹಿಕ ಹಿಂಸೆ ನೀಡಿದ್ದಾರೆ ಎನ್ನಲಾದ ಪ್ರಕರಣ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು.  ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಮಕ್ಕಳ ಸಮಿತಿಯ ಅಧ್ಯಕ್ಷೆ ನಿಲೋಫರ್ ರಾಂಪುರಿ ಅವರ ನೇತೃತ್ವದಲ್ಲಿ ಸಮಿತಿಯ ತಂಡವು ಮಂಗಳವಾರದಂದು ಗ್ರಾಮದ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ.  ಲಿಂಗಯ್ಯ ಸ್ವಾಮಿ ಸೇವಾ ಎಜ್ಯುಕೇಷನ್ ಟ್ರಸ್ಟ್ ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಹಾಗೂ ಪ್ರಭಾರಿ ಮುಖ್ಯೋಪಾಧ್ಯಾಯರಾದ ಭುವನೇಶ್ವರಿ ಅವರೊಂದಿಗೆ ತಂಡವು ಆಪ್ತಸಮಾಲೋಚನೆ ನಡೆಸಿದೆ.  ಈ ಸಂದರ್ಭದಲ್ಲಿ ಮಂಜುನಾಥ ಹಾಗೂ ಭುವನೇಶ್ವರಿ ಅವರು ವಿದ್ಯಾಥರ್ಿಗೆ ಥಳಿಸಿದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.   ಸಮಿತಿಯ ತಂಡವು ವಿದ್ಯಾಥರ್ಿಯ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ  ವಿದ್ಯಾಥರ್ಿಯ ತಂದೆ ಮಾಹಿತಿ ನೀಡಿ, ಶಾಲೆಯ ಮುಖ್ಯೋಪಾಧ್ಯಾಯರು, ತಮ್ಮ ಮಗ ಹೋಂ ವರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಥಳಿಸಿದ್ದು, ತಮ್ಮ ಮಗ ತುಂಬಾ ಹೆದರಿದ್ದು, ಮೈಮೇಲೆ ಬಾಸುಂಡೆಗಳು ಮೂಡಿವೆ ಎಂದು ತಿಳಿಸಿದ ಕಾರಣಕ್ಕೆ ಪ್ರಭುದೇವ ಎಂಬುವವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.  ಅಲ್ಲದೆ ವಿದ್ಯಾಥರ್ಿಯ ವೈದ್ಯಕೀಯ ವೆಚ್ಚವನ್ನು ಸಂಸ್ಥೆ ಭರಿಸಲಿದೆ ಎಂಬುದಾಗಿ ಸಂಸ್ಥೆ ನೀಡಿರುವ ಮುಚ್ಚಳಿಕೆ ಪತ್ರದ ದಾಖಲೆ ಪತ್ರ ಸಮಿತಿಗೆ ಲಭ್ಯವಾಗಿದೆ.  ವಿದ್ಯಾಥರ್ಿಯ ತಂದೆ, ಮುಖ್ಯೋಪಾಧ್ಯಾಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿರುತ್ತಾರೆ.  ಸಾರ್ವಜನಿಕ ಶಿಕ್ಷಣ ಇಲಾಖೆಯು 2007 ರಲ್ಲಿ ಹೊರಡಿಸಿರುವ ಸುತ್ತೋಲೆಯನ್ವಯ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ದೈಹಿಕ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ.  ಅಲ್ಲದೆ ಮಕ್ಕಳ ನ್ಯಾಯ ಕಾಯ್ದೆಯ ಕಲಂ 82ರಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವದನ್ನು ನಿಷೇದಿಸಿದ್ದು, ಒಂದು ವೇಳೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಿದಲ್ಲಿ ಅತಂಹ ಯಾವುದೇ ಸಿಬ್ಬಂದಿ ಅಥವಾ ಅದರ ಉಸ್ತುವಾರಿಯಲ್ಲಿರುವ ವ್ಯಕ್ತಿಗಳು ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲೂ ದೈಹಿಕ ಶಿಕ್ಷೆಯನ್ನು ನೀಡಿದ್ದೇ ಆದಲ್ಲಿ, ಅಂತಹ ವ್ಯಕ್ತಿಗಳಿಗೆ ಮೊದಲ ಅಪರಾಧಕ್ಕೆ ಹತ್ತು ಸಾವಿರ ರೂಪಾಯಿ ದಂಡ ಮತ್ತು ಮುಂದಿನ ಪ್ರತಿ ಅಪರಾಧಕ್ಕೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಈ ಕುರಿತು ಪರಿಶೀಲನೆ ನಡೆಸಿದ್ದು, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕಿರುತ್ತದೆ.  ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕರಣ ಕುರಿತು ಕಾನೂನು ರೀತ್ಯಾ ಸೂಕ್ತ ಕ್ರಮ  ಕೈಗೊಂಡು,  ಕೈಗೊಂಡ ಕ್ರಮಗಳ ಬಗ್ಗೆ ವರದಿಯನ್ನು ಮೂರು ದಿನಗಳ ಒಳಗಾಗಿ ಸಲ್ಲಿಸಬೇಕು.   ಯಾವುದೇ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವ ಪ್ರಕರಣಗಳು ಮರುಕಳಿಸದಂತೆ, ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ನಿಲೋಫರ್ ರಾಂಪುರಿ, ಸದಸ್ಯರುಗಳಾದ   ಸರೋಜಾ ಬಾಕಳೆ, ನೇತ್ರಾ ಪಾಟೀಲ್, ಯಮುನಮ್ಮ ಹಾಗೂ ಕಲ್ಲಪ್ಪ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ, ವಲಯ ಸಂಪನ್ಮೂಲ ವ್ಯಕ್ತಿ ಹನುಮಗೌಡ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ತಂಡದಲ್ಲಿದ್ದರು ಎಂದು ಮಕ್ಕಳ ಕಲ್ಯಾಣ ಸಮಿತಿ ಪ್ರಕಟಣೆ ತಿಳಿಸಿದೆ.