ಕಳೆದ ಬಜೆಟ್‌ನಲ್ಲಿ ಘೋಷಿಸಿದ ಪ್ರಸ್ತಾಪಗಳಿಗಿಂತ ಭಿನ್ನವಾಗಿಲ್ಲ- ಕಾಮ್ರೇಡ್ ಪ್ರವಾಶ್ ಘೋಷ್
ಬಳ್ಳಾರಿ 01: ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ 2025ಕ್ಕೆ ತಕ್ಷಣದ ಪ್ರತಿಕ್ರಿಯೆಯಾಗಿ, ಎಸ್‌ಯುಸಿಐ(ಸಿ) ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪ್ರವಾಶ್ ಘೋಷ್ ಅವರು ಹೇಳಿಕೆಯಲ್ಲಿ ಹೇಳಿದರು.
“ನೀರೀಕ್ಷಿಸಿದಂತೆ, ಕೇಂದ್ರ ಬಜೆಟ್ 2025 ಅಂಕಿಅಂಶಗಳ ಕುಶಲತೆಯ ಮೂಲಕ ಮತ್ತು ಅಬ್ಬರದ ಮಾತುಗಳ ಮೂಲಕ ಬಿಜೆಪಿ ಸರ್ಕಾರದ ನಕಲಿ ಸಾಧನೆಗಳನ್ನು ಬಡಾಯಿ ಕೊಚ್ಚುವ ಭಾಷಣ ಅಷ್ಟೇ. ಸಾಮಾನ್ಯ ಜನರು ಎದುರಿಸುತ್ತಿರುವ ಯಾವುದೇ ಜ್ವಲಂತ ಸಮಸ್ಯೆಯನ್ನು ಬಜೆಟ್ ಪರಿಹರಿಸಿಲ್ಲ. ಉದ್ಯೋಗ ಸೃಷ್ಟಿಯ ಭರವಸೆಗಳು ಮತ್ತು ಸಾಮಾನ್ಯ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಕ್ರಮಗಳು ಕಳೆದ ಬಜೆಟ್‌ನಲ್ಲಿ ಘೋಷಿಸಿದ ಪ್ರಸ್ತಾಪಗಳಿಗಿಂತ ಭಿನ್ನವಾಗಿಲ್ಲ ಮತ್ತು ಅವು ಹೇಗೆ ವಿಫಲವಾದವು ಎಂಬುದು ಎಲ್ಲರಿಗೂ ತಿಳಿದಿದೆ.
ಖಾಸಗಿ-ಸಾರ್ವಜನಿಕ ಪಾಲುದಾರಿಕೆ (ಪಿಪಿಪಿ) ಮಾದರಿಯ ವ್ಯಾಪಕ ಬಳಕೆ, ವಿಮಾ ಕ್ಷೇತ್ರದಲ್ಲಿ 100ಅ ಎಫ್‌ಡಿಐ ಮತ್ತು ಆಸ್ತಿಯ ನಗದೀಕರಣ ಯೋಜನೆಯ ಮುಂದುವರಿಕೆ, ಅಂದರೆ ಸರ್ಕಾರಿ ಮೂಲಸೌಕರ್ಯಗಳನ್ನು ಖಾಸಗಿ ಕೈಗೆ ಹಸ್ತಾಂತರಿಸುವುದು ಮುಂತಾದ ಹೆಚ್ಚಿನ ಖಾಸಗೀಕರಣದ ಕಡೆಗೆ ನಿರ್ದಿಷ್ಟವಾದ ಒಲವು ಪ್ರಸ್ತುತ ಬಜೆಟಿನ ಪ್ರಮುಖ ಅಂಶವಾಗಿದೆ. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಇತರ ಕ್ಷೇತ್ರಗಳಿಗೆ ಹಂಚಿಕೆಯ ಬಗ್ಗೆ ನಿರ್ದಿಷ್ಟ ಉಲ್ಲೇಖವನ್ನು ಎಚ್ಚರಿಕೆಯಿಂದ ತಪ್ಪಿಸಲಾಗಿದೆ.
ವೈಯಕ್ತಿಕ ತೆರಿಗೆ ದರಗಳನ್ನು ಕಡಿಮೆ ಮಾಡುವ ರೂಪದಲ್ಲಿ ಕೆಲವು ತಾತ್ಕಾಲಿಕ ನೋವು ನಿವಾರಕಗಳನ್ನು ಮಾತ್ರ ಘೋಷಿಸಲಾಗಿದೆ, ದೇಶೀಯ ಮಾರುಕಟ್ಟೆ ಕ್ಷೀಣಿಸಿ, ಗ್ರಾಹಕ ಸರಕುಗಳ ಮಾರಾಟದಲ್ಲಿ ಕುಸಿತವನ್ನು ತಡೆಯುವ ಅನಿವಾರ್ಯತೆಯಿಂದ ಇದನ್ನು ಮಾಡಲಾಗಿದೆ ಮತ್ತು ಆ ಮೂಲಕ ಮಧ್ಯಮ ವರ್ಗದ ಹತಾಶ ಮನೋಭಾವವನ್ನು ಸ್ವಲ್ಪ ಶಮನಗೊಳಿಸುತ್ತದೆ. ಎನ್‌ಡಿಎ ಮೈತ್ರಿಕೂಟದ ಪಾಲುದಾರ ನೀತೀಶ್ ಕುಮಾರ್ ಅವರನ್ನು ಸಂತುಷ್ಟಗೊಳಿಸಲು ಬಿಹಾರಕ್ಕೆ ಕೆಲವು ಯೋಜನೆಗಳನ್ನು ಘೋಷಿಸಲಾಗಿದೆ.
ಬಜೆಟ್ ಹೆಸರಿನಲ್ಲಿ ಈ ಅಪಹಾಸ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಇಂತಹ ಜನವಿರೋಧಿ ಕಾರ್ೊರೇಟ್ ಪರವಾದ ಹಣಕಾಸು ದಾಖಲೆಯ ವಿರುದ್ಧ ಒಗ್ಗಟ್ಟಿನ ಪ್ರತಿಭಟನೆಯ ಧ್ವನಿಯನ್ನು ಎತ್ತಲು ಸಂಕಷ್ಟಗಳಿಗೆ ಒಳಗಾದ ದೇಶವಾಸಿಗಳಿಗೆ ಕರೆ ನೀಡುತ್ತೇವೆ.”