ರಾಷ್ಟ್ರೀಯ ವಿಚಾರದಲ್ಲಿ ರಾಜಿಯಿಲ್ಲ: ರಾಜನಾಥ್ ಸಿಂಗ್

 ನವದೆಹಲಿ 24: ಭಾರತವು ಪಾಕಿಸ್ತಾನದ ಜೊತೆ ಮಾತನಾಡಲು ಬಯಸುವುದಾರೆ  ಪಾಕ್-ಅಕ್ರಮಿತ ಮತ್ತು ಜಮ್ಮು  ಕಾಶ್ಮಿರದ ಬಗ್ಗೆ ಕಾಶ್ಮೀರದ ಬಗ್ಗೆಯೂ   ಮಾತನಾಡುತ್ತೇವೆ, ಜೊತೆಗೆ ರಾಷ್ಟ್ರಿಯ ವಿಚಾರದಲ್ಲಿ ರಾಜಿಮಾಡಿಕೊಳ್ಳುವುದಿಲ್ಲ  ಎಂದೂ  ರಕ್ಷಣಾ ಸಚಿವ ರಾಜನಾಥ್ ಲೋಕಸಭೆಯಲ್ಲಿ  ಹೇಳಿದ್ದಾರೆ .

    ಈ ಕುರಿತು   ಹೇಳಿಕೆ ನೀಡಿದ ಅವರು,  ಅಮೆರಿಕದಲ್ಲಿ  ಮೋದಿ -ಟ್ರಂಪ್ ಮಾತುಕತೆ ನಡೆದ ಸಮಯದಲ್ಲಿ  ವಿದೇಶಾಂಗ ಸಚಿವ ಜೈಶಂಕರ್ ಅವರು ಕೂಡ ಹಾಜರಿದ್ದರು ಎಂದು ಅವರು ಹೇಳಿದರು. ಡಿಎಂಕೆ ನಾಯಕ ಟಿ ಆರ್ ಬಾಲು ಅವರು ಈ ಸಮಯದಲ್ಲಿ  ಮೋದಿಯವರು  ಸದನದಲ್ಲಿ ಇರಬೇಕಿತ್ತು ಎಂದು  ಹೇಳಿದರು. ರಾಜನಾಥ್ ಸಿಂಗ್ ಅವರ ಉತ್ತರ ಹಾಗೂ  ಪ್ರಧಾನಿ ಗೈರು ಹಾಜರಿ ವಿರೋಧಿಸಿ  ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಎರಡನೇ  ದಿನವೂ ಸಭಾತ್ಯಾಗ ಮಾಡಿದರು     ನಾವು ಪಾಕ್ ಜೊತೆ ಮಾತನಾಡಬೇಕಾದರೆ ಕೇವಲ  ಕಾಶ್ಮೀರ ವಿಷಯದ ಬಗ್ಗೆ ಮಾತ್ರ ಮಾತನಾಡುವುದಿಲ್ಲ , ಜೊತೆಗೆ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಬಗ್ಗೆಯೂ ಮಾತನಾಡಬೇಕಿದೆ  ಎಂದೂ ಸಚಿವರು ಹೇಳಿದರು. 'ಪಾಕಿಸ್ತಾನ ಆಕ್ರಮಿತ ಕಾಶ್ಮೀರ'ವನ್ನು ಹೆಚ್ಚಾಗಿ ಪಾಕಿಸ್ತಾನ ಆಡಳಿತ-ಕಾಶ್ಮೀರ ಎಂದು ಕರೆಯಲಾಗುತ್ತದೆ ಮತ್ತು ಇದು ಎರಡು ದೇಶಗಳ ನಡುವೆ ದೀರ್ಘಕಾಲದ ಸಂಘರ್ಷಕ್ಕೆ ಒಳಗಾಗಿದೆ  ಈ ಪ್ರದೇಶವು ಗಿಲ್ಗಿಟ್-ಬಾಲ್ಟಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ ಮತ್ತು ದಕ್ಷಿಣಕ್ಕೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಪಶ್ಚಿಮಕ್ಕೆ ಖೈಬರ್ ಪಖ್ತುನ್ ಪ್ರಾಂತ್ಯದ ಗಡಿಯನ್ನೂ ಹೊಂದಿದೆ.ಪೂರ್ವಕ್ಕೆ, ಪಿಒಕೆ ಅನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದಿಂದ ನಿಯಂತ್ರಣ ರೇಖೆ  ಬೇರ್ಪಡಿಸಲಾಗಿದೆ ಎಂದರು  ಚಚರ್ೆಯ  ಸಮಯದಲ್ಲಿ ಮಧ್ಯಪ್ರವೇಶ ಮಾಡಿ ಮಾತನಾಡಿದ ಅವರು, ಕಾಶ್ಮೀರದ ವಿಷಯವು ಭಾರತದ ಸ್ವಾಭಿಮಾನ  ಮತ್ತು ರಾಷ್ಟ್ರಿಯ ವಿಷಯವಾಗಿದೆ ಹೀಗಾಗಿ   ರಾಷ್ಟ್ರೀಯ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ  ಎಂದು ಹೇಳಿದರು. ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಭಾರತ ಸಿದ್ದವಿಲ್ಲ  ಎಂದು ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ವಿದೇಶಾಂಗ ಸಚಿವರು ವ್ಯಕ್ತಪಡಿಸಿದ ಭಾವನೆಗೆ ಸಚಿವರೂ  ಸಹಮತ ವ್ಯಕ್ತಪಡಿಸಿದರು . ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೂನ್ನಲ್ಲಿ  ಮಾತುಕತೆ ನಡೆಸಿದ್ದು ನಿಜ. ಆದರೆ ವಿದೇಶಾಂಗ ಸಚಿವರು ತಮ್ಮ ಹೇಳಿಕೆಯಲ್ಲಿ ಕಾಶ್ಮೀರದ ಬಗ್ಗೆ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ  ಪ್ರಧಾನಿ ಮೋದಿಯವರು ಸದನಕ್ಕೆ ಬಂದು ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್  ನಾಯಕ ಅಧೀರ್ ಚೌಧರಿ ಒತ್ತಾಯಿಸಿದಾಗ  ರಾಜನಾಥ್ ಸಿಂಗ್ ಈ ಉತ್ತರ ನೀಡಿದರು.  ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿವಾದದ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದಾರೆ ಎಂಬ ಟ್ರಂಪ್ ಹೇಳಿಕೆ ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ  ಕೋಲಾಹಲಕ್ಕೆ  ಕಾರಣವಾಗಿತ್ತು  ವಿದೇಶಾಂಗ ಸಚಿವರಿಗಿಂತ ಉತ್ತಮ ಮತ್ತು ಅಧಿಕೃತ ಹೇಳಿಕೆಯನ್ನು ಬೇರೆ ಯಾರು ನೀಡಲೂ  ಸಾಧ್ಯವಿಲ್ಲ. ಏಕೆಂದರೆ ಮೋದಿ ಮತ್ತು ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆಸಿದಾಗ ನಮ್ಮ ವಿದೇಶಾಂಗ ಸಚಿವರು ಅಲ್ಲಿಯೇ ಇದ್ದರು  ಎಂದು ರಕ್ಷಣಾ ಸಚಿವರು ತಿಳಿಸಿದರು. ಕಾಶ್ಮೀರ ವಿಷಯದಲ್ಲಿ, ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಬೇಕಿಲ್ಲ  ಈ ವಿಷಯ ಶಿಮ್ಲಾ ಒಪ್ಪಂದಕ್ಕೆ ವಿರುದ್ಧವಾಗಿರುತ್ತದೆ ಎಂಬದು ನಮಗೆ ತಿಳಿದಿದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಸಮಸ್ಯೆಗಳ  ಪರಿಹಾರಕ್ಕೆ  ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆ ಸಹಾಯಕವಾಗಲಿದೆ ಎಂದೂ ವಿದೇಶಾಂಗ ಸಚಿವ  ಡಾ.ಜೈಶಂಕರ್ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿದ್ದರು.