ಗದಗ 10: ಹಿಂದೆಂದಿಗಿಂತಲೂ ಇಂದು ಜನರು ಒತ್ತಡ ಬದುಕು ಸಾಗಿಸುತ್ತಿದ್ದು ಪ್ರತಿಯೊಬ್ಬರೂ ಆರೋಗ್ಯವಾಗಿರುವುದು ಅಗತ್ಯವಾಗಿದ್ದು ಇದಕ್ಕೆ ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಛತೆ ಮುಖ್ಯವಾಗಿದೆ ಎಂದು ಗದಗ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ.ಸಲಗರೆ ನುಡಿದರು.
ಗದಗ ಹೊಸ ಬಸ್ ನಿಲ್ದಾಣದಲ್ಲಿಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಕೇಂದ್ರ ಕಚೇರಿಗಳ ಸಹಯೋಗದಲ್ಲಿ ಆಯೋಜಿಸಿರುವ ಸ್ವಚ್ಛತೆ ಹಾಗೂ ಆರೋಗ್ಯ ಕುರಿತ ಎರಡು ದಿನಗಳ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಆರೋಗ್ಯ ಇಲಾಖೆಯ ಮೂಲಕ ರಾಜ್ಯದ ಜನರ ಆರೋಗ್ಯ ಕುರಿತಂತೆ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪಲು ಜನಜಾಗೃತಿಯ ಅವಶ್ಯವಿದ್ದು ಇಂತಹ ವಸ್ತುಪ್ರದರ್ಶನಗಳಿಂದ ಹೆಚ್ಚಿನ ಜನರಿಗೆ ಮಾಹಿತಿ ನೀಡಲು ಸಾಧ್ಯವಿದೆ. ಇಂತಹ ಸುಸಜ್ಜಿತ ವಸ್ತು ಪ್ರದರ್ಶನಗಳು ತಾಲೂಕಾ ಹಾಗೂ ಗ್ರಾಮ ಮಟ್ಟಕ್ಕೂ ವಿಸ್ತರಿಸುವ ಅಗತ್ಯವಿದೆ ಎಂದು ಸಲಗರೆ ಅಭಿಪ್ರಾಯಪಟ್ಟರು.
ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ, ವಿರುಪಾಕ್ಷ ಮಾದಿನೂರ ಸ್ವತಹ ಆಸಕ್ತಿಯಿಂದ ವಸ್ತು ಪ್ರದರ್ಶನ ವೀಕ್ಷಿಸಿ ಇಲಾಖೆಯ ಯೋಜನೆಗಳಾದ ತಾಯಿ ಕಾರ್ಡ, ರಕ್ತಹೀನತೆ ತಡೆ, ಮಕ್ಕಳ ಅಪೌಷ್ಠಿಕತೆಗೆ ತಡೆ, ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮ, ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರ, ಡೆಂಗ್ಯು, ಕ್ಪ್ಷಯ ನಿಯಂತ್ರಣ ಕ್ರಮ ಕುರಿತ ಪ್ರದರ್ಶನ ಫಲಕಗಳಲ್ಲಿ ಇರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ವಾಯವ್ಯ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ, ಗದಗ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿನಗಾ, ಗದಗ ವಾತರ್ಾ ಕಚೇರಿ ಹಾಗೂ ವಾಯವ್ಯ ಸಾರಿಗೆಯ ಅದಿಕಾರಿ ಸಿಬ್ಬಂದಿ, ಸಾರ್ವಜನಿಕರು ಇದ್ದರು.