ಜ.1 ರಂದು ಹೊಸ ವಷರ್ಾಚರಣೆ ನಿಷೇಧಕ್ಕೆ ಶ್ರೀರಾಮ ಸೇನೆ ಒತ್ತಾಯ

ಲೋಕದರ್ಶನ ವರದಿ

ವಿಜಯಪುರ 30 : ಜನವರಿ 1 ರಂದು ಹೊಸ ವಷರ್ಾಚರಣೆ ಮಾಡುವುದು ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗೆ ವಿರುದ್ಧವಾಗಿರುವುದರಿಂದ ಜಿಲ್ಲೆಯಲ್ಲಿ ಹೊಸ ವಷರ್ಾಚರಣೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಸಂಘಟನೆಯಿಂದ ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತೀ ವರ್ಷ ಡಿಸೆಂಬರ 31 ರಂದು ರಾತ್ರಿ ಹೊಸ ವಷರ್ಾಚರಣೆಯ ನೆಪದಲ್ಲಿ ಮದ್ಯಪಾನ ಮಾಡಿ ಕುಣಿದಾಡುತ್ತ ಪಾಶ್ಚ್ಯಾತ್ಯ ಸಂಸ್ಕೃತಿಯ ಅನುಕರಣೆ ಮಾಡುವುದನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸುತ್ತದೆ.

ಭಾರತೀಯ ಧರ್ಮ ಸಂಸ್ಕೃತಿಯ ಪ್ರಕಾರ ಯುಗಾದಿಯಂದು ಹೊಸ ವಷರ್ಾಚರಣೆ ಮಾಡಬೇಕು. ಪಾಶ್ಚ್ಯಾತ್ಯ ಸಂಸ್ಕೃತಿಯ ಆಚರಣೆ ನಮ್ಮ ಯುವ ಜನಾಂಗವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ಹೊಸ ವಷರ್ಾಚರಣೆಯ ಹಿನ್ನೆಲೆಯಲ್ಲಿ ತಡರಾತ್ರಿಯವರೆಗೆ ಹೊಟೇಲ್, ದಾಬಾ ಸೆರಾಟರ್್ಗಳಲ್ಲಿ ಕಂಠಪೂತರ್ಿ ಕುಡಿದು ಜಗಳವಾಡುವುದು ಸಾಮಾನ್ಯ. ಹೊಸ ವಷರ್ಾಚರಣೆ ಮಾಡಲು ಹೋಗಿ ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಿ ಅಪಘಾತದಲ್ಲಿ ಸಾವನ್ನಪ್ಪಿರುವ ಉದಾಹರಣೆಗಳು ಇವೆ. ಹೊಸ ವಷರ್ಾಚರಣೆಯಂದು ಲಕ್ಷಾಂತರ ರೂ. ಮೌಲ್ಯದ ಮದ್ಯಪಾನ, ಗಾಂಜಾ ಮುಂತಾದ ವಸ್ತುಗಳು ಮಾರಾಟವಾಗುತ್ತದೆ. ಇದೊಂದು ಮಾಫಿಯಾ ಆಗಿದ್ದು, ನಮ್ಮ ದೇಶ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಇದರಿಂದ ಬಾಧಕವಾಗುತ್ತದೆ. ಕಾರಣ  ಜಿಲ್ಲೆಯಲ್ಲಿ ಹೊಸ ವಷರ್ಾಚರಣೆ ಹಗೂ ಹೊಸ ವಷರ್ಾಚರಣೆಯಂದು ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಬೇಕು. ನಗರ ಹಾಗೂ ನಗರ ಹೊರಯಲಯದಲ್ಲಿರುವ ಹೊಟೇಲ್, ದಾಬಾ ಹಾಗೂ ರೆಸಾಟರ್್ಗಳಲ್ಲಿ ಹೊಸ ವಷರ್ಾಚರಣೆ ಮಾಟಡಲು ಅವಕಾಶ ಕೊಡದಂತೆ ಹೊಟೇಲ್, ದಾಬಾ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಶ್ರೀರಾಮ ಸೇನಾ ಜಿಲ್ಲಾ ಪ್ರಮುಖ ಎಂ ಕುಡುಮೇಶ, ಜಿಲ್ಲಾ ಕಾಯರ್ಾಧ್ಯಕ್ಷ ಬಸವರಜ ಕಲ್ಯಾಣಪ್ಪಗೋಳ, ಜಿಲ್ಲಾ ಪ್ರಧಾಣ ಕಾರ್ಯದಶರ್ೀ ಆನಂದ ಕುಲಕಣರ್ಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.