ನ್ಯೂಯಾರ್ಕ್ ನಲ್ಲಿ ನಿಲ್ಲದ ಹಿಂಸಾಚಾರ, ಲೂಟಿ : ಕರ್ಫ್ಯೂ ವಿಸ್ತರಣೆ

ವಾಷಿಂಗ್ಟನ್, ಜೂನ್ 3, ಆಫ್ರಿಕ ಮೂಲದ  ನಿವಾಸಿ  ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ದೇಶದಲ್ಲಿ ಉಂಟಾಗಿರುವ  ಪ್ರತಿಭಟನೆಯಿಂದ ಹೆಚ್ಚುತ್ತಿರುವ ಲೂಟಿ, ಹಿಂಸೆ, ಮತ್ತು  ಅಪರಾಧ ಕೃತ್ಯಗಳನ್ನು ತಡೆಯಲು ನ್ಯೂಯಾರ್ಕ್ ನಗರದಲ್ಲಿ  ಭಾನುವಾರದ ವರೆಗೂ  ಕರ್ಫ್ಯೂ ವಿಸ್ತರಿಸಲಾಗಿದೆ  ಎಂದು ಮೇಯರ್ ಬಿಲ್ ಡಿ ಬ್ಲಾಸಿಯೊ ಬುಧವಾರ ಹೇಳಿದ್ದಾರೆ.ಸೋಮವಾರದ ಕರ್ಫ್ಯೂ, 1943 ರಿಂದ ನಗರದಲ್ಲಿ ಮೊದಲನೆಯದು, ರಾತ್ರಿ 11 ಗಂಟೆಗೆ ಪ್ರಾರಂಭವಾಗಿದ್ದರೂ   ಲೂಟಿಕೋರರು   ಅಂಗಡಿಗಳಿಗೆ ನುಗ್ಗುವುದು,  ಹಿಂಸಾಚಾರದಲ್ಲಿ  ನಿರತರಾಗಿರವುದನ್ನು  ತಡೆಯಲಾಗಿಲ್ಲ .ಸೋಮವಾರ ರಾತ್ರಿ ಕರ್ಫ್ಯೂ ಜಾರಿಗೆ ಬರುವ ಮುನ್ನ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 

ಮತ್ತು ಇಡೀ ರಾತ್ರಿ 700 ಕ್ಕೂ ಹೆಚ್ಚು ಜನರನನ್ನು ಬಂಧಿಸಲಾಗಿದ್ದು ಇವರ ಪೈಕಿ  ಹೆಚ್ಚಿನವರು  ಯುವಕರು ಎಂದು ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ (ಎನ್‌ವೈಪಿಡಿ) ತಿಳಿಸಿದೆ."ನಾವು ಪೊಲೀಸ್ ಅಧಿಕಾರಿಗಳ ಮೇಲೆ ಕೆಟ್ಟ ದಾಳಿಗಳನ್ನು ನೋಡಿದ್ದೇವೆ, ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ  ಎಂದು ಡಿ ಬ್ಲೇಸಿಯೊ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ  ಹೇಳಿದರು. ಮಂಗಳವಾರದಿಂದ, ಕರ್ಫ್ಯೂ ಪ್ರಾರಂಭವಾದ ಕೂಡಲೇ ಮ್ಯಾನ್‌ಹ್ಯಾಟನ್‌ನ ಹೆಚ್ಚಿನ ಭಾಗದಲ್ಲಿ  ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ  ನಿವಾಸಿಗಳಿಗೆ  ಅಗತ್ಯ ಕಾರ್ಮಿಕರು, ಬಸ್ಸುಗಳು ಮತ್ತು ಟ್ರಕ್ ವಿತರಣೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.ಗುರುವಾರ, ಪ್ರತಿಭಟನೆ ಸ್ಫೋಟಗೊಂಡಾಗಿನಿಂದ ನಗರಲ್ಲಿ 2,ಸಾವಿರಕ್ಕೂ ಹೆಚ್ಚು  ಜನರನ್ನು ಬಂಧಿಸಿದೆ. 50 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಎನ್ವೈಪಿಡಿ ತಿಳಿಸಿದೆ.