ಕಾರವಾರ 03: ನಗರದ ಕೆಎಚ್ ಬಿ ಹೊಸ ಬಡಾವಣೆಯ ಆರು ಮುಖ್ಯ ರಸ್ತೆಗಳ ಕಾಂಕ್ರೀಟಿಕರಣ ನಗರೋತ್ಥಾನ-3ರಲ್ಲಿ ಮುಕ್ತಾಯ ಹಂತ ತಲುಪಿದೆ. ಕಿರು ಸೇತುವೆಗಳ ನಿಮರ್ಾಣ ಕಾರ್ಯ ನಡೆದಿದ್ದು, ಕಾಲೂನಿಯ ಮೂವತ್ತಕ್ಕೂ ಹೆಚ್ಚು ರಸ್ತೆಗಳ ಪೈಕಿ 3 ಕಿ.ಮೀ. ರಸ್ತೆ ಕಾಂಕ್ರಿಟೀಕರಣ ಮುಕ್ತಾಯ ಹಂತದಲ್ಲಿದೆ. ಇದರಿಂದಾಗಿ ಕಳೆದ ಹನ್ನೆರಡು ವರ್ಷಗಳಿಂದ ಶಾಪಗ್ರಸ್ತವಾಗಿದ್ದ ರಸ್ತೆಗಳು ಇದೀಗ ಶಾಪವಿಮೋಚನೆಯ ಭಾವ ಅನುಭವಿಸುತ್ತಿವೆ. ನಗರೋತ್ಥಾನದಲ್ಲಿ ರಾಜ್ಯ ಸಕರ್ಾರದಿಂದ ಬಂದ 28 ಕೋಟಿ ರೂ.ಅನುದಾನದಲ್ಲಿ 2.90 ಕೋಟಿಯನ್ನು ನ್ಯೂ ಕೆಎಚ್ಬಿ ಕಾಲೂನಿಗೆ ನಗರಸಭೆಯ ನೀಡಿದ್ದು, ಇನ್ನು 4 ಕೋಟಿ ರೂ.ಗಳನ್ನು ಕಾಲೂನಿಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ನೀಡಬೇಕೆಂಬುದು ಕಾಲೂನಿಯ ನಿವಾಸಿಗಳ ಒತ್ತಾಯವಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಕಾಲೂನಿಹಗೆ ಸ್ವತಃ ಭೇಟಿ ನೀಡಿ, ಇಲ್ಲಿನ ದುಸ್ಥಿತಿ ಕಂಡು 2 ಕೋಟಿ ರೂ.ಗಳನ್ನು ಮುಖ್ಯ ಚರಂಡಿ ನಿಮರ್ಾಣಕ್ಕೆ ಮಂಜೂರು ಮಾಡಿದ್ದಾರೆ. ಈ ಅನುದಾನ ಇನ್ನಷ್ಟೇ ಕಾಲೂನಿಯ ಚರಂಡಿಗಳ ನಿಮರ್ಾಣಕ್ಕೆ ದಕ್ಕಬೇಕಿದೆ. ತಾಂತ್ರಿಕ ಸವರ್ೆ ಮುಗಿದಿದ್ದು, ಚರಂಡಿ ನಿಮರ್ಾಣಕ್ಕೆ ಟೆಂಡರ್ ಪ್ರಕ್ರಿಯೆ ಆಗುವುದು ಬಾಕಿ ಇದೆ. ಕಾಲೂನಿಯಲ್ಲಿ ಇನ್ನು 3.5 ಕಿ.ಮೀ. ಸಣ್ಣ ಸಣ್ಣ 100 ಮೀಟರ್ ಉದ್ದದ ಅಡ್ಡ ರಸ್ತೆಗಳ ಕಾಂಕ್ರೀಟಿಕರಣ ಬಾಕಿ ಇದೆ. ಅದನ್ನು ಶೀಘ್ರ ನಗರಸಭೆ ಕೈಗೆತ್ತಿಕೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ನಗರೋತ್ಥಾನದ ಅನುದಾನದಲ್ಲಿ ಮೀನು ಮಾರುಕಟ್ಟೆ ನಿಮರ್ಾಣಕ್ಕಾಗಲಿ, ನಗರಸಭೆಯ ಕಟ್ಟಡ ನಿಮರ್ಾಣಕ್ಕಾಗಲಿ ಅನುದಾನ ಡೈವರ್ಟ ಮಾಡಲು ಬರುವುದಿಲ್ಲ. ನಗರೋತ್ಥಾನದ ಅನುದಾನ ಐಡಿಎಸ್ಎಂಟಿ ಯೋಜನೆಗೆ ಬಳಸಲು ಬರುವುದಿಲ್ಲವಾದ್ದರಿಂದ 5 ರಿಂದ 7 ಕೋಟಿ ರೂ. ಅನುದಾನ ನಗರೋತ್ಥಾನ-3 ರ ಅನುದಾನವು ನ್ಯೂ ಕೆಎಚ್ಬಿ ರಸ್ತೆ ಅಭಿವೃದ್ಧಿಗೆ ಬಳಸಬಹುದಾಗಿದೆ.
ಕೋಡಿಭಾಗದಿಂದ ಸುಂಕೇರಿತನಕ ಕಾಳಿ ನದಿಗೆ ದಂಡೆಗೆ ರಸ್ತೆ ನಿಮರ್ಾಣ :
ಕೋಡಿಭಾಗದಿಂದ ಸುಂಕೇರಿತನಕ ಕಾಳಿ ನದಿಗೆ ದಂಡೆಗೆ ರಸ್ತೆ ನಿಮರ್ಾಣಕ್ಕೆ 5 ಕೋಟಿ ರೂ.ಗಳನ್ನು ನಗರೋತ್ಥಾನ-3ರಲ್ಲಿ ನೀಡಲು ನಗರಸಭೆ ಹಿಂದೆ ಯೋಚಿಸಿತ್ತು. ಆದರೆ ನದಿಯ ದಂಡೆಗೆ ಕಾಂಡ್ಲಾ ಗಿಡಗಳಿದ್ದು, ದಂಡೆಯ ಉದ್ದಕ್ಕೆ ರಸ್ತೆ ನಿಮರ್ಾಣಕ್ಕೆ ಸಿಆರ್ಝೆಡ್ ಮುಂತಾದ ಪರಿಸರ ನಿಯಮಗಳು ಅಡ್ಡಿಯಾಗಲಿವೆ. ಹಾಗಾಗಿ ನಗರೋತ್ಥಾನದ 28 ಕೋಟಿ ರೂ. ಸಂಪೂರ್ಣ ಬಳಸಲು ಇರುವ ದಾರಿ ನ್ಯೂ ಕೆಎಚ್ಬಿ ಕಾಲೂನಿಯ ಸಂಪೂರ್ಣ ಅಭಿವೃದ್ಧಿ ಯೋಜನೆ ರೂಪಿಸುವುದಾಗಿದೆ. ನಗರಸಭೆ ಮತ್ತು ನಗರಾಭಿವೃದ್ಧಿ ಕೋಶ ಈ ಸಂಬಂಧ ದಿಟ್ಟ ಹೆಜ್ಜೆಗಳನ್ನು ಇಡಬೇಕಿದೆ.
ಒಳಭಾಗದ ಅಡ್ಡ ರಸ್ತೆಗಳನ್ನು ಮಾಡಿ :
ಕಾಲೂನಿಯ ಒಳಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದರೂ ಕಾಂಕ್ರೀಟ್ ಮಾಡಲು ನಗರಸಭೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರೋತ್ಥಾನ ಯೋಜನೆಯಡಿ ಬಡಾವಣೆಯ ವಿವಿಧೆಡೆ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗುತ್ತಿದೆ. ಅದರ ಭಾಗವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸುಮಾರು 20 ಮೀಟರ್ ಹಿಂದಿನವರೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಅಲ್ಲಿಂದ ಮುಂದೆ ನೂರಾರು ಮನೆಗಳಿವೆ. ಮಳೆಗಾಲದಲ್ಲಿ ಮೊಣಕಾಲುದ್ದ ನೀರು ನಿಂತು ವಾಹನ ಸಂಚಾರ ದುಸ್ತರವಾಗುತ್ತದೆ. ಹಾಗಾಗಿ ಕಾಲೂನಿಯ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಲು ಮುಂದಾಗಬೇಕು ಎಂದು ಸ್ಥಳೀಯ ರಾಜೇಶ್ ನಾಯ್ಕ ವಿನಂತಿಸಿದ್ದಾರೆ.
ಇದೇ ಬಡಾವಣೆಯ ನೀರಿನ ಟ್ಯಾಂಕ್ ಬಳಿಯ ಖಾಲಿ ಜಾಗ ಮಳೆಗಾಲ ಕೆರೆಯಂತಾಗಿರುತ್ತದೆ. ಅಲ್ಲಿಂದ ನೀರು ಹರಿದು ಹೋಗುವ ಜಾಗದಲ್ಲಿ ಈಗ ಕಾಂಕ್ರೀಟ್ ರಸ್ತೆ ನಿಮರ್ಾಣ ಮಾಡಿ ಮುಚ್ಚಲಾಗಿದೆ. ಅಲ್ಲದೇ ರಸ್ತೆಯ ಕೊನೆಯ ಭಾಗದವರೆಗೆ ಕಾಂಕ್ರೀಟ್ ಮಾಡಿಲ್ಲ. ಹಾಗೂ ಇಲ್ಲಿ ಎರಡು ರಸ್ತೆಗಳ ಮಧ್ಯೆ ಕಿರು ಸೇರುತೆ ನಿಮರ್ಾಣ ಮಾಡಬೇಕು. ಇಲ್ಲದಿದ್ದರೆ ರಸ್ತೆ ಬದಿಯ ಮನೆಗಳಿಗೆ ಮಳೆಗಾಲ ಬರಲು ಮತ್ತಷ್ಟು ತೊಂದರೆಯಾಗಲಿದೆ ಎಂದು ಸ್ಥಳೀಯರಾದ ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಕ್ರೀಟ್ ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಯಲು ಸುಮಾರು ಒಂದು ಅಡಿ ಅಂತರವಿದೆ. ಅಲ್ಲಿಗೆ ಪುಡಿ ಮಣ್ಣು ಭತರ್ಿ ಮಾಡಲಾಗುತ್ತಿದೆ. ಅದು ಒಂದೆರಡು ಬಾರಿ ವಾಹನಗಳು ಸಂಚರಿಸಿದಾಗ ಧೂಳಾಗಿ ಪರಿವರ್ತನೆಯಾಗುತ್ತದೆ. ಗಾಳಿ ಬಂದಾಗ, ವಾಹನ ಸಂಚರಿಸಿದಾಗ ಧೂಳು ಸುತ್ತಮುತ್ತಲಿನ ಮನೆಗಳಿಗೆಲ್ಲ ವ್ಯಾಪಿಸಿಕೊಳ್ಳುತ್ತಿದೆ. ಇದು ಅನಾರೋಗ್ಯಕ್ಕೂ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಹಾಗಾಗಿ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.