ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಆಂಟಿರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ

Neutering and anti-rabies vaccination program of stray dogs

  ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ಆಂಟಿರೇಬಿಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ  

ಗದಗ  22:  ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ಬೀದಿ ನಾಯಿಗಳಿಂದ ಅತಿಯಾದ ಉಪಟಳ ಹೆಚ್ಚಾಗಿ ನಗರಸಭೆಗೆ ಬಹಳಷ್ಟು ದೂರುಗಳು ಸ್ವೀಕೃತವಾದ ಕಾರಣ ಗದಗ-ಬೆಟಗೇರಿ ನಗರಸಭೆ ವತಿಯಿಂದ ಪ್ರಾಣಿಜನನ ನಿಯಂತ್ರಣ ಕಾಯ್ದೆ-2023ರ ಪ್ರಕಾರ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ( ಎಬಿಸಿ) ಹಾಗೂ ಆಂಟಿ ರೇಬಿಸ್ ವ್ಯಾಕ್ಸಿನೇಷನ್ (ಎಆರ್‌ವಿ) ಕಾರ್ಯಕ್ರಮ ಅನುಷ್ಟಾನದ ಕಾರ್ಯ ಹಮ್ಮಿಕೊಳ್ಳ್ಳಲಾಯಿತು.   ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ:-17್ಘ18 ಜವಳಗಲ್ಲಿ ಮುಖ್ಯರಸ್ತೆ ಹಾಗೂ ಮೀನಿನ ಮಾರುಕಟ್ಟೆ ಭಾಗದಲ್ಲಿ ಬೀದಿ ನಾಯಿಗಳ ಹಿಡಿದು ಹಾಕುವ ಕಾರ್ಯಾಚರಣೆ ಪ್ರಾರಭಿಸಲಾಯಿತು. 1 ನೇ ದಿನಕ್ಕೆ  ಒಟ್ಟು 30 ಸಂಖ್ಯೆ ಬೀದಿ ನಾಯಿಗಳನ್ನು ಹಿಡಿದು ಚಿಕಿತ್ಸಾ ಕೇಂದ್ರಕ್ಕೆ ಸಾಗಿಸಲಾಯಿತು. ಪೌರಾಯುಕ್ತರಾದ ಮಹೇಶ ಪೋತದಾರ ಇವರು ಮಾತನಾಡಿ ಸದರಿ ಕಾರ್ಯಕ್ಕೆ ಸಾರ್ವನಿಕರೆಲ್ಲರೂ ಸಹಕಾರ ನೀಡಲು ಕೋರಿದರು. ವಾರ್ಡ ನಂ:-17 ರ ಸದಸ್ಯರಾದ ಶ್ರೀಮತಿ ಆಸ್ಮಾ ಮುನ್ನಾಸಾಬ ರೇಶ್ಮಿ ಇವರು ಈ ಸಂದರ್ಭದಲ್ಲಿ ಮಾತನಾಡಿ ಬಹಳಷ್ಟು ಸಾರ್ವಜನಿಕರು ರಾತಿ ವೇಳೆಯಲ್ಲಿ ಬೀದಿನಾಯಿಗಳ ಉಪಟಳದಿಂದ ತೊಂದರೆ ಅನುಭವಿಸುತ್ತಲಿದ್ದು ನಗರಸಭೆಯವರು ಹಮ್ಮಿಕೊಳ್ಳಲಾದ ಈ ಕಾರ್ಯ ತುಂಬಾ ಶ್ಲಾಘನೀಯ ಎಂದು ಹೇಳಿದರು ಹಾಗೂ ಈ ಕಾರ್ಯಾಚರಣೆಯಲ್ಲಿ ಬೀದಿ ನಾಯಿಗಳ ( ಎಬಿಸಿ ಮತ್ತು ಎಆರ್‌ವಿ) ಕಾರ್ಯಕ್ರಮ ಅನುಷ್ಟಾನದ ಏಜನ್ಸಿದಾರರಾದ ಎನಿಮಲ್ ರೈಟ್ಸ ಫಂಡ,ವಾರ್ಡ ನಂ:-18ರ ಗೌರವಾನ್ವಿತ ಸದಸ್ಯರಾದ ಜೆ.ಆರ್ ನಮಾಜಿಯವರು ಚಂದ್ರು ಕರಿಸೋಮನಗೌಡ್ರ ಹಾಗೂ  ಆನಂದ ಯ ಬದಿ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ) ಗದಗ-ಬೆಟಗೇರಿ ನಗರಸಭೆ, ಎಂ.ಎಂ ಮಕಾನದಾರ ಹಿರಿಯ ಆರೋಗ್ಯ ನೀರೀಕ್ಷಕರು ಗದಗ-ಬೆಟಗೇರಿ ನಗರಸಭೆ  ದಫೆದಾರರಾದ ಕೆಂಚಪ್ಪ ಪೂಜಾರ,ಹೇಮೇಶ ಯಟ್ಟಿ ಹಾಗೂ ಇನ್ನಿತರ ಸ್ವಚ್ಚತಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು