ನೇತಾಜಿ : ಜೀವನವೇ ಒಂದು ಸಂದೇಶ ಇಂತಹ ಮೇರು ಚೇತನ ನಮಗೆಲ್ಲ ಆದರ್ಶವಾಗಿದ್ದಾರೆ
ರಾಣಿಬೆನ್ನೂರ:25 ರಾಷ್ಟ್ರದ ಶಕ್ತಿ ಚೈತನ್ಯ ನವಭಾರತದ ಚೇತನ ವಿಶ್ವ ಕಲ್ಯಾಣದ ಹಾಗೂ ಮನುಕುಲದ ಸ್ವಾತಂತ್ರ್ಯಕ್ಕಾಗಿ ರಾಷ್ಟ್ರ ಸೇನೆ ಕಟ್ಟಿ ಯುವಕರ ಕಣ್ಮಣಿಯಾದವರೇ ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಎಂದು ರಾಷ್ಟ್ರೋತ್ಥಾನ ಪರಿಷತ್ ಜಿಲ್ಲಾ ಸಂಯೋಜಕ ರಾಘವೇಂದ್ರ ಪಿ ಹೇಳಿದರು.
ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ನೆಡೆದ ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮ ದಿನೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಭಾಷ ಚಂದ್ರ ಬೋಸ್ ಅವರು ಜೀವನವೇ ಒಂದು ಸಂದೇಶ ಇಂತಹ ಮೇರು ಚೇತನ ನಮಗೆಲ್ಲ ಆದರ್ಶವಾಗಿದ್ದಾರೆ ಎಂದರು.
ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬಂತೆ ಮುಂದಿನ ಸಮಾಜದ ಭದ್ರ ಬುನಾದಿಯಾದ ಶಿಕ್ಷಕರು ಭಾರತೀಯ ನೈಜ ಇತಹಾಸವನ್ನು ಅರಿಯಬೇಕು, ಶಿಕ್ಷಕರು ಸತ್ಯ ಶೋಧನೆಯಲ್ಲಿ ತೊಡಗಿ ಭವಿಷ್ಯದ ರೂವಾರಿಗಳಾಗಬೇಕು ಎಂದರು.
ಪ್ರಾಚಾರ್ಯ ಡಾ.ಎಂ.ಎಂ. ಮೃತ್ಯುಂಜಯ ಮಾತನಾಡಿ, ಸ್ವಸ್ಥ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ನಿಜವಾದ ಪ್ರೇರಣೆ ನೇತಾಜಿ ಸುಭಾಷ್ ಚಂದ್ರ ಬೋಸರು. ಅವರ ರಾಷ್ಟ್ರ ಪ್ರೇಮ ಹಾಗೂ ಹೋರಾಟದ ಕಿಚ್ಚು ವಿದೇಶಗಳಲ್ಲಿಯೂ ಸೈನ್ಯ ಕಟ್ಟಿದ ರೀತಿ ಈ ದಿನವನ್ನು ಪರಾಕ್ರಮ ದಿವಸ್ ಎಂದು ಕರೆಯುವ ಹಿನ್ನೆಲೆಯನ್ನು ತಿಳಿಯಬೇಕೆಂದರು.
ಎನ್‌ಎಸ್‌ಎಸ್ ಕಾರ್ಯಕ್ರಾಮಾಧಿಕಾರಿ ಪ್ರೊ. ಪರಶುರಾಮ ಪವಾರ ಮಾತನಾಡಿ, “ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ”ಎಂಬ ಸಿಡಿಲ ನುಡಿಯ ಹಿನ್ನೆಲೆ ಹಾಗೂ ಆಜಾದ್ ಹಿಂದ್ ಫೌಜ್‌ನ ಸಂಸ್ಥಾಪನೆಯ ಶ್ರಮದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸದರು.
ಡಾ. ಹೆಚ್.ಐ. ಬ್ಯಾಡಗಿ ಅವರು, ನೇತಾಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಥಳೀಯ ನಾಯಕರಾಗಿ ಸಿದ್ದಗೊಳಿಸಿದ ಇತಿಹಾಸವನ್ನು ತಿಳಿಸದರು.
ಈ ಸಂದರ್ಭದಲ್ಲಿ ಪರಾಕ್ರಮ ದಿವಸದ ನಿಮಿತ್ತ ಆಯೋಜಿಸಲಾದ ನೇತಾಜಿ ಹಾಗೂ ಸ್ವಾತಂತ್ರ್ಯ ಹೋರಾಟ ಎಂಬ ಶೀರ್ಷಿಕೆಯ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿವಕುಮಾರ ಬಿಸಲಳ್ಳಿ, ಸುಮಾ, ಆಯೀಷಾ, ಪವನಕುಮಾರ ಲಮಾಣಿ, ಯುವರಾಜ, ಪ್ರಿಯಾಂಕ ದ್ಯಾವಪ್ಪನವರ ಸೇರಿ ಭೋಧಕ ಹಾಹೂ ಭೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಫೋಟೊ:25ಆರ್‌ಎನ್‌ಆರ್04ರಾಣಿಬೆನ್ನೂರ: ನಗರದ ಬಿಎಜೆಎಸ್‌ಎಸ್ ಬಿ.ಇಡಿ ಕಾಲೇಜಿನಲ್ಲಿ ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮ ದಿನಾಚರಣೆ ಆಚರಿಸಲಾಯಿತು.