ಲೋಕದರ್ಶನ ವರದಿ
ಚಡಚಣ 04: ಅಧಿಕಾರಿಗಳ ನಿರ್ಲಕ್ಷದಿಂದಾಗಿ ಭೀಮಾ ನದಿ ಸಂಪೂರ್ಣವಾಗಿ ಬತ್ತಿದ್ದು, ಪಟ್ಟಣವೂ ಸೇರಿದಂತೆ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ.
ಕಳೆದ ಹತ್ತು ದಿನಗಳ ಹಿಂದೆಯೇ ನದಿ ಬರಿದಾಗಿದ್ದು.ಇದಕ್ಕೆ ಸಣ್ಣ ನಿರಾವರಿ ಇಲಾಖೆ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ಪ್ರಜಾವಾಣಿ ಯೊಂದಿಗೆ ಮಾತನಾಡಿದ ಉಮರಾಣಿ ಗ್ರಾಮದ ರೈತ ಜಗದೇವ ಭೈರಗೊಂಡ,ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಾಂದಾರ ವಿಕ್ಷಣೆಗೆ ಆಗಮಿಸಿದ ಶಾಸಕ ದೇವಾನಂದ ಚವ್ಹಾಣ ಸಮ್ಮುಖದಲ್ಲಿ ನಿರಾವರಿ ಇಲಾಖೆ ಅಧಿಕಾರಿಗಳು 15 ದಿನಗಳ ಒಳಗಾಗಿ ಬಾಂದಾರಗೆ ಹೊಸ 320 ಗೇಟ್ ಅಳವಡಿಸಲಾಗುವದು ಎಂದು ವಾಗ್ದಾನ ಮಾಡಿದ್ದರು.ಆದರೆ ನಾಲ್ಕು ತಿಂಗಳು ಗತಿಸಿದರೂ ಗೇಟ್ ಅಳವಡಿಸದೇ ರೈತರನ್ನು ಸಂಕಟದಲ್ಲಿ ದೂಡಿದ್ದಾರೆ ಎಂದರು.
ಕಳೆದ ಜನೆವರಿ ತಿಂಗಳಲ್ಲಿ ಉಜನಿ ಜಲಾಶದಿಂದ ಭೀಮಾ ನದಿಗೆ ಸುಮಾರು 9 ಸಾವಿರ ಕೈಸೆಕ್ ನೀರು ಬಿಡಲಾಯಿತು.ಇದರಿಂದ ನದಿಗೆ ನಿಮರ್ಿಲಾದ ಉಮರಜ,ಶಿರನಾಳ ಹಾಗೂ ಟಾಕಳಿ ಸೇರಿದಂತೆ ಉಮರಾಣಿ ಬಾಂದಾರ ಕೂಡ ತುಂಬಿ ಹರಿದವು.ಆದರೆ ಉಮರಾಣಿ ಗ್ರಾಮದ ಹತ್ತಿರದ ಬಾಂದಾರನ ಗೇಟ್ಗಳು ಕಿತ್ತು ಹೋಗಿದ್ದರಿಂದ ನೀರು ಕೇವಲ ಒಂದು ತಿಂಗಳೊಳಗೆ ಬತ್ತಿ ಹೋಯಿತು.ಗೇಟ್ ಅಳವಡಿಸಿದ್ದರೆ ಇನ್ನೂ ಒಂದು ತಿಂಗಳು ವರೆಗೆ ಬಾಂದಾರನಲ್ಲಿ ನೀರು ಸಂಗ್ರಹವಾಗಿರುತ್ತಿತ್ತು .ಆದರೆ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಚಡಚಣ ಪಟ್ಟಣಕ್ಕೆ ನೀರು ಪುರೈಕೆ ಮೂಲ ಸ್ಥಗಿತಗೊಂಡಿದೆ. ನದಿ ತೀರದ ಜನರೂ ಸಹ ಪರಿದಾಡುವಂತಾಗಿದೆ. ಆನರು ಕೊಳವೆ ಬಾವಿ,ತೆರದ ಬಾವಿಗಳಿಗೆ ಮೊರೆ ಹೋಗಿದ್ದರೂ ಸಮರ್ಪಕ ನೀರು ದೊರೆಯುತ್ತಿಲ್ಲ.
ನದಿ ಬತ್ತಿರುವದರಿಂದ ಬೆಳೆಗಳು ಒಣಗಲಾರಂಭಿಸಿವೆ.ಕನಿಷ್ಠ ಪಕ್ಷ ಜನ ಹಾಗೂ ಜಾನುವಾರುಗಳಿಗಾದರೂ ನೀರು ಸಿಕ್ಕರೆ ಸಾಕು ಎನ್ನುವ ಸ್ಥಿತಿ ನಿಮರ್ಾಣವಾಗಿದೆ' ಕೂಡಲೇ ಜಿಲ್ಲಾಡಳಿತ ಭೀಮಾ ನದಿಗೆ ನೀರು ಹರಿಸಲು ಕ್ರಮ ಕೈಗೊಂಡು, ಉಮರಾಣಿ ಬಾಂದಾರ್ ಗೇಟ್ ಅಳವಡಿಸಲು ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಶಾಸಕರು ಕ್ರಮ ಜರುಗಿಸಬೇಕು ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕುತುಬ್ಗೌಡ ಪಾಟೀಲ, ಶಿವಾನಂದ ಭೃಗೊಂಡ, ಮುಖಂಡರಾದ ಸಣ್ಣಪ್ಪ ಚಿಂಚೋಳಿ, ಶ್ರೀಶೈಲಗೌಡ ಬಿರಾದಾರ, ಮುರಗೇಂದ್ರ ಸ್ವಾಮಿ, ರಾಜು ದುದಗಿ, ಸುರೇಶ ಬಿರಾದಾರ ಆಗ್ರಹಿಸಿದ್ದಾರೆ.