ನೀಲಕಂಠೇಶ್ವರ ಕಾರ್ತೀಕೋತ್ಸವ
ತಾಳಿಕೋಟೆ 08 : ಪಟ್ಟಣದ ಕುರುಹಿನಶೆಟ್ಟಿ ಸಮಾಜದ ಆರಾದ್ಯದೈವ ನೀಲಕಂಠೇಶ್ವರ ದೇವಸ್ಥಾನದಲ್ಲಿ ಕಳಸೋತ್ಸವ ಹಾಗೂ ಕಾರ್ತೀಕೋತ್ಸವ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಸಂಭ್ರಮಗಳಿಂದ ಶನಿವಾರ ನೆರವೇರಿತು.ದೇವಸ್ಥಾನದಲ್ಲಿ ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾಅಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ನಂತರ 9 ಗಂಟೆಗೆ ಗಂಗಸ್ಥಳ ಜರುಗಿ ಕಳಿಸೋವತ್ಸವದ ಭವ್ಯ ಬರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿ ಮರಳಿ ದೇವಸ್ಥಾನಕ್ಕೆ ತಲುಪಿತು. ಮಧ್ಯಾಹ್ನ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಸಂಜೆ ಸಮಾಜಬಾಂಧವರಿಂದ ಸಹಸ್ರ ದೀಪೋತ್ಸವ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು, ನಂತರ ಸಮಾಜಬಾಂಧವರಿಂದ ಕಾರ್ತಿಕ ಇಳಿಸುವುದು ಜರುಗಿತು. ಉತ್ಸವದಲ್ಲಿ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು, ಭಕ್ತಾದಿಗಳು ಇದ್ದರು.