ಗದಗ 30: ನಾವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಗ್ರಾಹಕರೇ ಆಗಿರುವಾಗ ನಾವು ಖರೀದಿಸುವ ವಸು, ಸೇವೆ ಇತ್ಯಾದಿಗಳ ಗುಣಮಟ್ಟ ಬೆಲೆ ಮುಂತಾದವುಗಳ ಕುರಿತು ಹಾಗೂ ಜಾರಿಯಲ್ಲಿರುವ ಗ್ರಾಹಕರ ರಕ್ಷಣೆ ಕಾಯ್ದೆ ಕುರಿತು ಹೆಚ್ಚಿನ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ರೇಣುಕಾ ಕುಲಕಣರ್ಿ ನುಡಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನ ಇಂದು ಅತೀ ವೇಗವಾಗಿ ಸಾಗುತ್ತಿದ್ದು ನಾವು ಸೇವಿಸುವ ಆಹಾರ ಬೆಳೆಸುವ ಹಲವಾರು ಸೌಂದರ್ಯ ವರ್ಧಕಗಳು ಆರೋಗ್ಯವೂ ಸೇರಿದಂತೆ ಪಡೆಯುವ ವಿವಿದ ಸೇವೆಗಳ ಗುಣಮಟ್ಟ ಕುರಿತು ಗಮನಹರಿಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಇದರಿಂದ ಕಲಬೆರಕೆ, ಬೆಲೆ ವೈಪರೀತ್ಯ ಹಾಗೂ ಅನಾವಶ್ಯಕ ತೊಂದರೆಗಳಿಂದ ನಾವು ದೂರವಿರಬಹುದು. ಆದಾಗ್ಯೂ ಕೂಡ ಗ್ರಾಹಕರು ಮೋಸ ಹೋಗುವ ಹಲವಾರು ಪ್ರಕರಣಗಳು ಹೆಚ್ಚುತ್ತಿದ್ದು ಆ ವ್ಯಾಜ್ಯಗಳು ಗ್ರಾಹಕರ ವೇದಿಕೆಗೆ ನ್ಯಾಯಾಲಯಗಳಲ್ಲಿ ದಾಖಲಾದಾಗ ತೀವ್ರವಾಗಿ ವಿಲೇಗೊಳಿಸುವುದೇ ಈ ಬಾರಿಯ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಧ್ಯೇಯೋದ್ದೇಶವಾಗಿದೆ ಎಂದು ಕುಲಕಣರ್ಿ ನುಡಿದರು.
ನಿವೃತ್ತ ಜಿಲ್ಲಾ ನ್ಯಾಯಾದೀಶ ಎಸ್.ಎಚ್. ಮಿಟ್ಟಲಕೋಡ ಅವರು ಕಾರ್ಯಕ್ರಮದ ಉಪನ್ಯಾಸ ನೀಡಿ ಯಾವುದೇ ವ್ಯಾಜ್ಯಗಳಿದ್ದಲ್ಲಿ ಅವುಗಳ ಶೀಘ್ರ ತೀಪರ್ು ನೀಡುವಿಕೆ ಬಹುಮುಖ್ಯವಾಗಿದೆ. ಅದಕ್ಕಾಗಿ ಸಮಯಪಾಲನೆ ಹಾಗೂ ಅಗತ್ಯ ಸಾಕ್ಷಿಗಳ ಒದಗುವಿಕೆ ಬಹುಮುಖ್ಯ. ಗ್ರಾಹಕರ ವ್ಯಾಜ್ಯ ಸಂಬಂಧದಲ್ಲಿ ಅವರು ವಸ್ತು ಅಥವಾ ಸೇವೆಗಾಗಿ ರಸೀದಿಯನ್ನು ಅಥವಾ ಹಣ ಪಾವತಿ ದಾಖಲೆ ಹೊಂದುವುದು ಬಹುಮುಖ್ಯವಾಗಿದೆ ಎಂದರು.
ವಸ್ತುಗಳನ್ನು ಕೊಳ್ಳುವಾಗ ಸಂಬಂಧಿತ ಕಂಪನಿ, ಮಾರಾಟಗಾರರು ನೀಡುವ ಖಾತ್ರಿಗಳು ಅವುಗಳ ಅವಧಿ, ಬೆಲೆ ಮುಂತಾದವುಗಳ ಕುರಿತು ಗ್ರಾಹಕರು ಸರಿಯಾದ ಪರಿಶೀಲನೆ ಮಾಡಿ ಹಣ ಪಾವತಿಸಿ ಸೂಕ್ತ ರಸೀದಿ ಪಡೆಯಬೇಕು. ಪುರುಷರರಿಗಿಂತ ಮಹಿಳೆಯರೇ ಇಂತಹ ವಿಷಯಗಳ ಕುರಿತು ಹೆಚ್ಚಿನ ಕಾಳಜಿ ಹಾಗೂ ಮಾಹಿತಿ ಹೊಂದಿರುವುದು ಗ್ರಾಹಕ ರಕ್ಷಣೆ ಕಾಯ್ದೆ ಜಾರಿಯ ಉತ್ತಮ ಬೆಳವಣಿಗೆ ಆಗಿದೆ ಎಂದು ಎಮ್. ಎಚ್. ಮಿಟ್ಟಲಕೋಡ ನುಡಿದರು.
ಗದಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಸಿ.ಎಚ್. ಸಮೀಉನ್ನಿಸಾ ಅಬ್ರಾರ, ಸದಸ್ಯರಾದ ಬಿ.ಎಸ್. ಕೆರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರು ಗ್ರಾಹಕರ ಹಿತರಕ್ಷಣೆಗಾಗಿ ಜಾರಿಗೊಳೀಸಲಾದ ಗ್ರಾಹಕ ರಕ್ಷಣಾ ಕಾಯ್ದೆ ಹಾಗೂ ಗ್ರಾಹಕರು ಕಡ್ಡಾಯವಾಗಿ ಗಮನಹರಿಸಬೇಕಾದ ವಿಷಯಗಳ ಕುರಿತು ಮಾತನಾಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಪಿ.ಸಿ. ಅಜರ್ುಣಗಿ ತೂಕ ಮತ್ತು ಅಳತೆ ಕುರಿತು, ಡಿ.ಎಸ್. ಅಂಗಡಿ, ಡಾ. ಆರ್.ಎಸ್. ಗಡಾದ, ಉಮೇಶ ಕರಮುಡಿ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತು, ಜಿಲ್ಲಾ ನಿರೂಪಣಾಧಿಕಾರಿ ಅಕ್ಕಮಹಾದೇವಿ ಅವರು ಮಹಿಳೆ ಮತ್ತು ಮಕ್ಕಳ ಹಕ್ಕು, ರಕ್ಷಣೆಗಳ ಕುರಿತು ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಜಿ.ಎಸ್. ಪಲ್ಲೇದ ಅವರು ಗ್ರಾಹಕರ ಕಾಯ್ದೆ ಮಹತ್ವವನ್ನು ತಿಳಿಸಿ ಗದಗ ಜಿಲ್ಲೆಯ ರೈತರಿಗೆ ವಿಮಾ ಮೊತ್ತ ದೊರಕಿಸುವಲ್ಲಿ ಗ್ರಾಹಕರ ವೇದಿಕೆ ನಿರ್ವಹಿಸಿದ ಪಾತ್ರದ ಉದಾಹರಣೆ ನೀಡಿದರು. ಯಾವುದೇ ರೀತಿ ವ್ಯಾಪಾರ, ಸೇವೆಗಳಿಂದ ಯಾರೇ ತೊಂದರೆಗೆ ಒಳಗಾಗಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ನುಡಿದರು.
ಆಹಾರ ಇಲಾಖೆ ಉಪನಿದರ್ೇಶಕ ಅಶೋಕ ಕಲಘಟಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿಗಳು ಪ್ರಾರ್ಥನೆ ಹಾಗೂ ನಾಡಗೀತೆಯನ್ನು ಪ್ರಸ್ತುತಿಸಿದರು. ಸೃಷ್ಟಿ ಸಂಸ್ಥೆಯ ಅಶ್ವಿನಿ ಹಿರೇಮಠ ವಂದಿಸಿದರು. ಆಹಾರ ಇಲಾಖೆಯ ಸಹಾಯಕ ನಿದರ್ೇಶಕ ಜಿ.ಬಿ. ಮಠದ ಕಾರ್ಯಕ್ರಮ ನಿರೂಪಿಸಿದರು. ವಿವಿದ ಇಲಾಖೆ ಅಧಿಕಾರಿಗಳು ತಾಲೂಕುಗಳಿಂದ ಆಗಮಿಸಿದ ಪಡಿತರ ಅಂಗಡಿಗಳ ಮಾಲೀಕರು, ಗ್ರಾಹಕರು, ವಿವಿಧ ಶಾಲೆಗಳ ವಿದ್ಯಾಥರ್ಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಮಾರಂಭವನ್ನು ಜಿಲ್ಲಾಡಳಿತ, ಆಹಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕನರ್ಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಹಾಗೂ ಸೃಷ್ಟಿ ನಗರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಕಾರದಲ್ಲಿ ಆಯೋಜಿಸಲಾಗಿತ್ತು.