ರಾಷ್ಟ್ರೀಯ ಯುವ ದಿನಾಚರಣೆ ಇಂದಿನ ವಿದ್ಯಾರ್ಥಿಗಳು ಆದರ್ಶತೆ ಮೈಗೂಡಿಸಿಕೊಳ್ಳಬೇಕು - ಪ್ರಕಾಶ ಕೋಳಿವಾಡ
ರಾಣೇಬೆನ್ನೂರು 17 : ಇಂದಿನ ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಶಿಕ್ಷಣದ ಜೊತೆಗೆ, ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು ಅವರು ಇಲ್ಲಿನ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಮಹಾ ವಿದ್ಯಾಲಯದಲ್ಲಿ, ಆಯೋಜಿಸಲಾಗಿದ್ದ, ಸ್ವಾಮಿ ವಿವೇಕಾನಂದರ 162ನೇ ಜಯಂತೋತ್ಸವದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಯುವಕ ಯುವತಿಯರಿಗೆ, ಸ್ವಾಮಿ ವಿವೇಕಾನಂದರು ಐಕಾನ್ ಆಗಿದ್ದಾರೆ. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಲ್ಲಿ ಸದಾವಕಾಲವು, ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದರು. ಭಾರತ ದೇಶವು ಯುವ ಸಮುದಾಯದಿಂದ ಕೂಡಿದ ಬಹುದೊಡ್ಡ ದೇಶ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದೇ ಭಾರತ ದೇಶದ ವಿಶೇಷತೆ ಎಂದು ವಿಶ್ಲೇಷಿಸಿ ಮಾತನಾಡಿದ ಶಾಸಕರು, ಯುವಕ ಯುವತಿಯರು ಬಲಿಷ್ಠ ಭಾರತ ಕಟ್ಟುವಲ್ಲಿ ಮುಂದಾಗಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮವನ್ನು ಯುವ ಜನ ಮತ್ತು ಸೇವಾ ಕ್ರಿಡಾ ಇಲಾಖೆ, ನೆಹರು ಯುವ ಕೇಂದ್ರ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಆಯೋಜಿಸಿತ್ತು. ದಿವ್ಯ ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದಜಿ ಮಹಾರಾಜ್ ಅವರು, ಪಾಚ್ಚಿ ಮಾತ್ಯ ಸಂಸ್ಕೃತಿಯು ಇಂದಿನ ಆಧುನಿಕ ಯುವ ಜನಾಂಗದಲ್ಲಿ ಪ್ರಭಾವ ಬೀರುತ್ತಲ್ಲಿದೇ. ಪರಿಣಾಮ ದೇಶಪ್ರೇಮ ಕಡಿಮೆಯಾಗುತ್ತಲ್ಲಿದೆ. ದೇಶದ ಆರ್ಥಿಕತೆ, ಸಮಾನತೆಗಾಗಿ ನಾವೆಲ್ಲ ಒಂದಾಗಿ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ವಿವರಿಸಿ ಮಾತನಾಡಿದ ಶ್ರೀಗಳು ಮೊದಲು ದೇಶ ನಂತರ ಎಲ್ಲವೂ ಎನ್ನುವ ಭಾವ ಮೂಡಿದಾಗ ಮಾತ್ರ ಸ್ವಾಮಿ ವಿವೇಕಾನಂದರು ಕಂಡ ಕನಸು ನನಸಾಗಲು ಸಾಧ್ಯವಾಗುವುದು ಎಂದರು. ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವ್ಹಿ.ಪಿ. ಲಿಂಗನಗೌಡ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀಮತಿ ಪೂರ್ಣಿಮಾ ಪ್ರಕಾಶ್ ಕೋಳಿವಾಡ, ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ಶ್ರೀಮತಿ ಲತಾ ಎಚ್, ನೆಹರು ಯುವ ಕೇಂದ್ರದ ಪ್ರೊ,ವೀರೇಶ್ ಕುರಹಟ್ಟಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಕವಿತಾ ಗಡ್ಡದಗೊಳಿ, ಶೋಭಾ ದೊಡ್ಡನಾಗಳ್ಳಿ, ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರೊ, ವಿದ್ಯಾಶ್ರೀ ದಾಮೋದರ ಪ್ರಾರ್ಥಿಸಿದರು. ಪ್ರಾಚಾರ್ಯ ನಾರಾಯಣ ನಾಯಕ ಎ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಪ್ರೊ, ಸಾಯಿಲತಾ ಮಡಿವಾಳರ ನಿರೂಪಿಸಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ರೇಖಾ ಶಿಡೇನೂರ, ವಂದಿಸಿದರು.