ಲೋಕದರ್ಶನ ವರದಿ
ಸವಣೂರ 14: ತಾಲೂಕಿನ ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸುವ ಮೂಲಕ ಅವರ ಸಂದೇಶ ಸಾರುವ ರಾಷ್ಟೀಯ ಯುವ ದಿನಾಚಾರಣೆ ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಎಸ್.ಜಿ ಚರಂತಿಮಠ ಮಾತನಾಡಿ ಸ್ವಾಮಿ ವಿವೇಕಾನಂದರು ವ್ಯಕ್ತಿಗಿಂತ ಭಾರತೀಯರ ಶಕ್ತಿಯಾಗಿ ಬೆಳೆದವರು. ಅವರ ಅಧ್ಯಯನ ಸಾಮಥ್ಯ ಎಲ್ಲರನ್ನು ಮಿರಿಸುವಂತೆ ಇತ್ತು. ಯುವಕರಿಗೆ ಹಾಗೂ ವಿದ್ಯಾಥರ್ಿಗಳಿಗೆ ಅವರ ಜೀವನ ಸಂದೇಶವೇ ನಾವೆಲ್ಲರೂ ಅಳವಡಿಸಿಕೊಳ್ಳುವ ಆದರ್ಶಗಳಾಗಿವೆ.
ವಿದ್ಯಾಥರ್ಿಗಳು ಅವರ ಪುಸ್ತಕ ಜೀವನ ಯಶೋಗಾಥೆ ತಿಳಿದುಕೊಂಡು ತಮ್ಮ ಬದುಕನ್ನು ಸಾಧನೆಯತ್ತ ಹೋಗಲು ಅವರು ಪ್ರೇರಣಾಶಕ್ತಿಯಾಗಿದ್ದಾರೆ ಎಂದು ಅವರ ಬದುಕಿನ ಘಟನೆ ವಿವರಿಸಿದರು.