ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2025

National Science Day-2025

ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2025 

ವಿಜಯಪುರ, ಮಾ.03, ; ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜಿಲ್ಲಾ ಪಂಚಾಯತಿ ವಿಜಯಪುರ  ಹಾಗೂ ಗ್ರಾಮ ಪಂಚಾಯತ ಸಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಕಣಮುಚನಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು  ಆಚರಣೆ ಮಾಡಲಾಯಿತು.  ಕಾರ್ಯಕ್ರಮದ  ಅಧ್ಯಕ್ಷತೆಯ ವಹಿಸಿ ಮಾತನಾಡಿದ  ಪ್ರೌಡಶಾಲೆಯ  ಮುಖೋಪಾದ್ಯರಾದ  ಆರ್‌.ವಿ.ಹೊಸುರ ಅವರು, ಎಲೆಕ್ಟ್ರಾನಿಕ್  ಮಾಹಿತಿ ತಂತ್ರಜ್ಞಾನ  ಕ್ಷೇತ್ರಗಳಲ್ಲಿ  ಮಹತ್ತರವಾದ ಬದಲಾವಣೆಯನ್ನು ಮಾಡಿದೆ. ಮಕ್ಕಳು ಇಂತಹ ಹೊಸ ಆವಿಸ್ಕಾರಗಳ ಬಗ್ಗೆ, ತಂತ್ರಜ್ಞಾನದ ಬದಲಾವಣೆಗಳ ವಿಷಯಗಳ ಕುರಿತು  ಅರಿತುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತಿಯ ಎನ್ ಆರ್ ಡಿ ಎಮ್ ಎಸ್ ಕೇಂದ್ರದ ಯೋಜನಾ ಸಂಯೋಜಕರ ಅಧಿಕಾರಿಗಳಾದ  ವಿದ್ಯಾಧರ ಇವರು ಮಾತನಾಡಿ,  ಭೌತಶಾಸ್ತ್ರಜ್ಞ ಸರ್ ಸಿ.ವಿ. ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರವನ್ನು ಸ್ಮರಣೆಯ ನಿಮಿತ್ಯ ಇಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಮಾಡಲಾಗುತ್ತಿದೆ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮತ್ತು ಪ್ರಸ್ತುತ ತಂತ್ರಜ್ಞಾನವು ಹೇಗೆ ಬದಲಾವಣೆ ಹೊಂದುತ್ತಿದೆ, ಎಂಬುದನ್ನ ವಿಜ್ಞಾನ ತಂತ್ರಜ್ಞಾನ ಮಂಡಳಿಯು ಅರಿವು ಮೂಡಿಸಲಾಗುತ್ತಿದೆ.   ಮಕ್ಕಳಿಗೆ ಉಪನ್ಯಾಸ ಚರ್ಚಾ ಸ್ಪರ್ಧೆಗಳು  ರಸ ಪ್ರಶ್ನೆ  ವಸ್ತು ಪ್ರದರ್ಶನ ಹೀಗೆ ಅನೇಕ ಚಟುವಟಿಕೆಗಳನ್ನು  ಕೈಗೊಳ್ಳಲಾಗುತ್ತಿದೆ.   ವಿಜ್ಞಾನ ತಂತ್ರಜ್ಞಾನದ ಕ್ಷೇತ್ರ ದಲ್ಲಿನ ನೂತನವಾದ ಆವಿಸ್ಕಾರಗಳು,   ಮಕ್ಕಳಿಗೆ ಕಲಿಕೆಗೆ ಸಹಾಯಕವಾಗಿವೆ ಎಂದು  ಹೇಳಿದರು. ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರ ಸಬಲೀಕರಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಾಯಿತು. ಎಸ್‌.ಡಿ.ಎಮ್,ಸಿ ಅಧ್ಯಕ್ಷರಾದ ಲಕ್ಷಣಗೌಡ ಬಿರಾದಾರ, ಶಾಂತು ನಾಟೀಕಾರ ,ಶಿಕ್ಷಣ ಪ್ರೇಮಿ  ಮಹಾದೇವಪ್ಪ  ಮಮದಾಪೂರ, ಬೀಮಪ್ಪ ಪತ್ತಾರ ಶಿಕ್ಷರಾದ ಉಷಾರಾಣಿ  ಸುಮಲತಾ ನಂದಿಮಠ  ಕಾರ್ಯದರ್ಶಿ ರಮೇಶ  ಗೌಡಪ್ಪ ಗೋಳ ಉಪಸ್ಥಿತರಿದ್ದರು.