ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಶನ್ ಕಾರ್ಯಕ್ರಮ
ಗುರ್ಲಾಪೂರ 5: ಸರಕಾರಿ ಶಾಸಕರ ಮಾದರಿ ಶಾಲೆ ಗುರ್ಲಾಪುರನಲ್ಲಿ ಇಂದು ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಶನ್ ಕಾರ್ಯಕ್ರಮ ಬಹಳ ಸಿಸ್ತು ಬದ್ಧವಾಗಿ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಮೂಡಲಗಿ ಪುರಸಭೆ ಸದಸ್ಯರು, ಖಾನಟ್ಟಿ ಗ್ರಾಮದ ಸದಸ್ಯರು, ಊರಿನ ಗುರು ಹಿರಿಯರು ಪಾಲಕರು ಮತ್ತು ಶಿಕ್ಷಕರು ಮಕ್ಕಳು ಅಡುಗೆ ಸಿಬ್ಬಂದಿ ಹಾಜರಿದ್ದರು. ಭಾರತ ಸರ್ಕಾರದ ವಯಸ್ಕ ಶಿಕ್ಷಣ ಸಾಕ್ಷರತಾ ಮಿಶನ್ ಅಡಿಯಲ್ಲಿ ಪ್ರಾರಂಭವಾಗಿದ್ದ ವಿನೂತನ ಕಾರ್ಯಕ್ರಮ ಇದಾಗಿದೆ. ಮಕ್ಕಳನ್ನು ಶಾಲಾ ಮುಖ್ಯ ವಾಹಿನಿಗೆ ತರಲು ಗಂಡು ಮಕ್ಕಳಿಗೆ ಶರ್ಟ್ ಪ್ಯಾಂಟ್ ಸ್ವೆಟರ್ ಬೆಲ್ಟ್ ಹಾಗೂ ಹೆಣ್ಣು ಮಕ್ಕಳಿಗೆ ಶರ್ಟ್ ಸ್ಕರ್ಟ್ ಸ್ವೇಟರ್ ಬೆಲ್ಟ್ ಪ್ರತ್ಯೇಕ ಸಮವಸ್ತ್ರದ ಸೌಲಭ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೊತೆಗೆ ಕೂಡಿಕೊಂಡು ಕೊಡುವ ಯೋಜನೆ ಆಗಿದೆ ಎಂದು ಬಿ ವಾಯ ಮೋಮಿನ್ ನುಡಿದರು. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲು ಮುಖ್ಯೋಪಾಧ್ಯಾಯ ಜಿ ಆರ್ ಪತ್ತಾರ ತಿಳಿ ಹೇಳಿದರು.