ನ್ಯಾಷನಲ್ ಪಬ್ಲಿಕ್ ಶಾಲೆ : ವಾರ್ಷಿಕ ಕ್ರೀಡಾಕೂಟ ಸಂಭ್ರಮಿಸಿದ ವಿದ್ಯಾರ್ಥಿಗಳು
ರಾಣೇಬೆನ್ನೂರು 15: ನಗರ ಹೊರವಲಯದ ನ್ಯಾಷನಲ್ ಪಬ್ಲಿಕ್ ಶಾಲೆಯು, ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ, 2024 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು, ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸದಸ್ಯ ಶ್ರೀಮತಿ ವಜ್ರೇಶ್ವರಿ ವಾಸುದೇವಸಾ ಲದ್ವಾ ಅವರು ಮಾತನಾಡಿ, ಇಂದಿನ ಮಕ್ಕಳಲ್ಲಿ ವೈಚಾರಿಕ ಮನೋಭಾವನೆ ಇದೆ. ಅದರ ಜೊತೆಗೆ ಸ್ಪರ್ಧಾತ್ಮಕ ಕ್ರಿಡಾ ಚಟುವಟಿಕೆಗಳು, ಅಳವಡಿಸಿಕೊಳ್ಳಬೇಕಾದ ಅಗತ್ಯವೊ ಸಹ ಅಗತ್ಯವಿದೆ.ಕ್ರೀಡಾ ಚಟುವಟಿಕೆಗಳಿಂದ ಮಾನಸಿಕ, ದೈಹಿಕ, ಮತ್ತು ಬೌದ್ಧಿಕ ಬೆಳವಣಿಗೆ ಹೊಂದಲು ಸಾಧ್ಯವಾಗುವುದು ಎಂದರು.
ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತುಳಜಪ್ಪ ವಾ. ಲದ್ವಾ, ಅವರು, ಪ್ರತಿಭೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅವರಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸುವ, ಮತ್ತು ವೇದಿಕೆಯನ್ನು ಕಲ್ಪಿಸುವ ಅಗತ್ಯ ಇಂದು ಆಗಬೇಕಾಗಿದೆ ಎಂದರು. ಶಾಲೆಯ ವಿದ್ಯಾರ್ಥಿಗಳ, ಶರಾವತಿ ಮತ್ತು ತುಂಗಭದ್ರ ತಂಡಗಳ ಮಧ್ಯೆ ಸ್ಪರ್ಧಾತ್ಮಕವಾಗಿ ಕ್ರೀಡಾ ಚಟುವಟಿಕೆಗಳು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಸಂಸ್ಥೆಯ ನಿರ್ದೇಶಕರಾದ, ಡಾ, ಎಂ. ಎಂ.ಅನಂತರೆಡ್ಡಿ, ಡಾ, ಬಿ. ಆರ್. ಸಾಹುಕಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀಮತಿ ಅರುಣ ಪರಶುರಾಮ ಕಬಾಡಿ, ಮುರುಗೇಶ ವಿ. ಬೆಲ್ಲದ, ಪರಶುರಾಮಸಾ ಕಬಾಡಿ, ಸುಷ್ಮಾ ಪ. ಲದ್ವಾ, ಪ್ರಾಂಶುಪಾಲ ಶೈನ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಸುಮಿತ್ರಾ ಸಂಗಡಿಗರು ಪ್ರಾರ್ಥಿಸಿದರು. ರವಿಕುಮಾರ ಐರಣಿ ಸ್ವಾಗತಿಸಿ, ತೌಶಿಫ್ ಸೈಕಲಗಾರ್ ನಿರೂಪಿಸಿ, ಮಂಜುನಾಥ ಮೆಣಸಿನಹಾಳ ವಂದಿಸಿದರು.