ಲೋಕದರ್ಶನ ವರದಿ
ಬೆಳಗಾವಿ 26: ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ದಿ.26ರಂದು "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಪ್ರಯುಕ್ತ ಭೌತಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಆಂತರಿಕ ಗುಣಮಟ್ಟ ಮೌಲ್ಯಮಾಪನ ಘಟಕದ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿದ್ಯಾಥರ್ಿಗಳ ವಿಚಾರ ಸಂಕಿರಣ ಸರ್. ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವದರೊಂದಿಗೆ ವಿದ್ಯಾಥರ್ಿಗಳು ತಮ್ಮ ವಿಶೇಷ ಅಭಿರುಚಿಗೆ ತಕ್ಕಂತೆ ಉನ್ನತ ವ್ಯಾಸಂಗ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿವುಳ್ಳವರಾಗಬೇಕೆಂದು ಸಲಹೆ ನೀಡಿದರು. ಇದರಿಂದ ಸ್ವ ಅಭಿವೃದ್ದಿಯ ಜೊತೆಗೆ ಸಮಾಜದ ಅಭಿವೃದ್ಧಿಯು ಆಗುವುದೆಂದು ವಿವರಿಸಿದರು. ಆಳವಾದ ಅಧ್ಯಯನದ ಮೂಲಕ ಉನ್ನತ ಸ್ಥಾನಗಳನ್ನು ಪಡೆದು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಬೇಕೆಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಸಮಾರಂಭಕ್ಕೆ ಆಗಮಿಸಿದ ತಮಿಳುನಾಡು, ಮೇಘಾಲಯ, ಗೋವಾ, ಮಹಾರಾಷ್ಟ್ರ ಹಾಗೂ ಕನರ್ಾಟಕ ರಾಜ್ಯಗಳ ಹಲವಾರು ಮಹಾವಿದ್ಯಾಲಯಗಳಿಂದ ಸುಮಾರು 150 ವಿದ್ಯಾಥರ್ಿಗಳು ಭಾಗವಹಿಸಿ ಭೌತಶಾಸ್ತ್ರ ವಿಭಾಗದಿಂದ "ಭಾರತೀಯ ಬಾಹ್ಯಾಕಾಶ ಕಾರ್ಯಸೂಚಿ" ಹಾಗೂ ರಸಾಯನಶಾಸ್ತ್ರ ವಿಭಾಗದಿಂದ "ಆವರ್ತಕ ಕೋಷ್ಟಕದ ಅಂತರಾಷ್ಟ್ರೀಯ ವರ್ಷ ಎಂಬ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಡಿ. ಯಳಮಲಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಜಿ. ಬೇವಿನಕಟ್ಟಿ ಸರ್ವರನ್ನು ಸ್ವಾಗತಿಸಿದರು. ಪ್ರೊ. ವ್ಹಿ.ಕೆ. ಗಾಣಿಗೇರ ಅತಿಥಿಗಳನ್ನು ಪರಿಚಯಿಸಿದರು. ಕುಮಾರ. ಪ್ರತೀಕ ಹಾಗೂ ಸಂಗಡಿಗರು ಪ್ರಾರ್ಥನೆಯನ್ನು ಹಾಡಿದರು. ಕುಮಾರ. ಅಕ್ಷಯ ಭಕೇಡಿ ವಂದಿಸಿದರು. ಕುಮಾರಿ. ನಯನ ಹಾಗೂ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಡಾ. ಜೆ.ಎಸ್. ಕವಳೇಕರ, ಪ್ರೊ. ಆರ್.ಆರ್. ವಡಗಾವಿ, ಪದವಿ ಪೂರ್ವ ಪ್ರಾಚಾರ್ಯ ಪ್ರೊ. ಎಸ್.ಜಿ. ನಂಜಪ್ಪನವರ, ಪದವಿ ಪ್ರಾಚಾರ್ಯ ಡಾ.ವ್ಹಿ.ಡಿ. ಯಳಮಲಿ, ಪ್ರೊ. ಎನ್.ಬಿ. ಗೋಕಾವಿ ಹಾಗೂ ವಿದ್ಯಾಥರ್ಿ ಪ್ರತಿನಿಧಿಗಳು ಉಪಸ್ಥಿತರಿದ್ದಾರೆ.