ರೋಣ ಪಟ್ಟಣದಲ್ಲಿ ಗಮನ ಸೆಳೆದ ನರೇಗಾ ಮಾಹಿತಿ ಮಳಿಗೆ

Narega information shop has attracted attention in Rona town

ರೋಣ ಪಟ್ಟಣದಲ್ಲಿ ಗಮನ ಸೆಳೆದ ನರೇಗಾ ಮಾಹಿತಿ ಮಳಿಗೆ 

ರೋಣ 15: ತಾಲೂಕಿನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ದಲ್ಲಿ ವಿವಿಧ ಇಲಾಖೆಯಿಂದ ನಿರ್ಮಾಣ ಮಾಡಿದ ಮಾಹಿತಿ ಮಳಿಗೆ ಗಳಲ್ಲಿ ಎಲ್ಲರ ಗಮನ ಸೆಳೆಯುವ ಮೂಲಕ ನರೇಗಾ ಮಾಹಿತಿ ಮಳಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಜನರ ಮೆಚ್ಚುಗೆಗೆ ಪಾತ್ರವಾಯಿತು.ಜಿಲ್ಲಾ ಪಂಚಾಯತ ಗದಗ ಹಾಗೂ ತಾಲೂಕ ಪಂಚಾಯತ ರೋಣ ಅವರ ಸಹಯೋಗದೊಂದಿಗೆ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣ ದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿ ನಿರ್ಮಾಣ ಮಾಡಿದ ಮಳಿಗೆಯಲ್ಲಿ ಒಂದೇ ಸೂರಿನಡಿ ಜನರಿಗೆ ಹಾಗೂ ರೈತರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಯಿತು..ಮಾಹಿತಿ ಮಳಿಗೆಯಲ್ಲಿ ಜನರಿಗೆ ಹಾಗೂ ರೈತರಿಗೆ ನರೇಗಾ ಯೋಜನೆಯಡಿ ಕೃಷಿ ಚಟುವಟಿಕೆ ಗಳನ್ನು ಉತ್ತೇಜಿಸುವ ಕೆಲಸಗಳನ್ನು ಮಾಡಿಕೊಂಡು ಜಮೀನಿನ ಉತ್ಪಾದಕತೆಯನ್ನು ಹೆಚ್ಚಿಸಿ, ಅವರ ಕುಟುಂಬಕ್ಕೆ ಜೀವನೋಪಾಯದ ಮಾರ್ಗಗಳನ್ನು ಬಲಪಡಿಸಲು ಸಹಕಾರಿ ಆಗುವ ಕರಪತ್ರಗಳನ್ನು ಹಂಚಲಾಯಿತು.  

ವೈಯಕ್ತಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕುರಿಶೆಡ್, ಕೃಷಿ ಬಾವಿ, ಕೃಷಿ ಹೊಂಡ, ಅರಣ್ಯಿಕರಣ, ತೋಟಗಾರಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಅನುಷ್ಟಾನ ಮಾಡಿಕೊಳ್ಳಲು ಜನರಿಗೆ ತಿಳಿಸಲಾಯಿತು*ಕೊಟ್ ನರೇಗಾ ಮಳಿಗೆಯಲ್ಲಿ ಮಿಕ್ಕಿ ಮೌಸ್*ನರೇಗಾ ಮಳಿಗೆಯಲ್ಲಿ ಮಿಕ್ಕಿ ಮೌಸ್ ವೇಷದಾರಿ ಜನರ ಆಕರ್ಷಣೆ ಕೇಂದ್ರವಾಗಿತ್ತು ನಮ್ಮ ನರೇಗಾ, ನಮ್ಮ ಹೆಮ್ಮೆ ಅನ್ನುವ ಬೋರ್ಡ್‌ ಹಾಕಿಕೊಂಡು ಕಿಟಲೇ ಮಾಡುತ್ತಿರುವ ವೇಷದಾರಿ ಜೊತೆಗೆ ಎಲ್ಲರೂ ಸೆಲ್ಫ್‌ ತೆಗೆದುಕೊಂಡು ಮಕ್ಕಳ ಹಾಗೂ ಮಹಿಳೆಯರು ಖುಷಿ ಪಡುವದು ಸಾಮನ್ಯವಾಗಿತ್ತು.