ನರಸಿಂಹವಾಡಿ ದತ್ತಜಯಂತಿ ಉತ್ಸವ ಗೊಡಚಿ ವೀರಭದ್ರೇಶ್ವರ ಜಾತ್ರೆ: ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ

Narasimhwadi Datta Jayanti Utsav Godachi Veerbhadreshwar Jatra: Operation of Additional Buses

ನರಸಿಂಹವಾಡಿ ದತ್ತಜಯಂತಿ ಉತ್ಸವ ಗೊಡಚಿ ವೀರಭದ್ರೇಶ್ವರ ಜಾತ್ರೆ: ಹೆಚ್ಚುವರಿ ಬಸ್ಸುಗಳ ಕಾರ್ಯಾಚರಣೆ  

ಚಿಕ್ಕೋಡಿ 09: ಹೊಸ್ತಿಲ ಹುಣ್ಣಿಮೆ ನಿಮಿತ್ಯ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರೆ ದಿ. 12 ರಿಂದ 16ರವರೆಗೆ ಹಾಗೂ ದಿ.15ರಂದು ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕುರಂದವಾಡ ತಾಲೂಕಿನ ನರಸಿಂಹವಾಡಿ ದತ್ತಜಯಂತಿ ಉತ್ಸವ ಜರುಗಲಿದೆ. 

       ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಗೋಕಾಕ ಘಟಕದಿಂದ ದಿ.12ರಿಂದ ದಿ. 16ರವರೆಗೆ ಜಾತ್ರಾ ಪ್ರಯುಕ್ತ ಗೊಡಚಿವರೆಗೆ ಹಾಗೂ ದಿ.15ರಂದು ನಿಪ್ಪಾಣಿ ಹಾಗೂ ಚಿಕ್ಕೋಡಿ ಘಟಕಗಳಿಂದ ನರಸಿಂಹವಾಡಿ ದತ್ತಜಯಂತಿ ಉತ್ಸವಕ್ಕೆ ಹೆಚ್ಚುವರಿ ವಾಹನಗಳ ಕಾರ್ಯಾಚರಣೆ ಮಾಡಲಾಗುವುದು.  

       ಗೊಡಚಿ ಜಾತ್ರಾ ಹೆಚ್ಚುವರಿ ವಾಹನಗಳ ಕಾರ್ಯಾಚರಣೆಗಾಗಿ ಗೋಕಾಕ ಬಸ್ ನಿಲ್ದಾಣ ಹಾಗೂ ಗೊಡಚಿ ಜಾತ್ರಾ ಕೇಂದ್ರದಲ್ಲಿ ಹಾಗೂ ನರಸಿಂಹವಾಡಿ ದತ್ತಜಯಂತಿ ಉತ್ಸವ ಪ್ರಯುಕ್ತ ನಿಪ್ಪಾಣಿ ಬಸ್ ನಿಲ್ದಾಣ ಹಾಗೂ ನರಸಿಂಹವಾಡಿಯಲ್ಲಿ ನುರಿತ ಸಾರಿಗೆ ನಿಯಂತ್ರಕರನ್ನು ನಿಯೋಜಿಸಿ ಪ್ರತ್ಯೇಕ ನಿಯಂತ್ರಣ ಬಿಂದುಗಳ ವ್ಯವಸ್ಥೆ ಮಾಡಿ ಜಾತ್ರೆಗೆ ತೆರಳುವ ಪ್ರಯಾಣಿಕರಿಗೆ ವ್ಯವಸ್ಥಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸಾರ್ವಜನಿಕ ಪ್ರಯಾಣಿಕರು ಈ ಜಾತ್ರಾ ವಿಶೇಷ ಹೆಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಲು ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಲಾಗಿದೆ.