ನಾಗಪ್ಪ ನೀಲಪ್ಪ ತಿಪ್ಪಕನವರ ಅವರನ್ನು ಮಹರ್ಷಿ ವಾಲ್ಮೀಕಿ ಮಹಾಸಭಾ ವತಿಯಿಂದ ಸನ್ಮಾನಿ

Nagappa Neelappa Thippakanavara honored by Maharishi Valmiki Mahasabha

ನಾಗಪ್ಪ ನೀಲಪ್ಪ ತಿಪ್ಪಕನವರ ಅವರನ್ನು ಮಹರ್ಷಿ ವಾಲ್ಮೀಕಿ ಮಹಾಸಭಾ ವತಿಯಿಂದ ಸನ್ಮಾನಿ 

ಸವಣೂರ 08: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ ಸವಣೂರ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹುರಳಿಕುಪ್ಪಿ ಸಾಲಗಾರ ಮತ ಕ್ಷೇತ್ರದಿಂದ(ಪರಿಶಿಷ್ಟ ಪಂಗಡ)ಅವಿರೋಧವಾಗಿ ಆಯ್ಕೆಯಾದ ನಾಗಪ್ಪ ನೀಲಪ್ಪ ತಿಪ್ಪಕನವರ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕ ಮಹರ್ಷಿ ವಾಲ್ಮೀಕಿ ಮಹಾಸಭಾ ವತಿಯಿಂದ ಗೌರವಿಸಿ ಸನ್ಮಾನಿಸಿದರು. 

         ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಧರ ದೊಡ್ಡಮನಿ,ಯಲ್ಲಪ್ಪ ದೇವಗಿರಿ,ಉಮೇಶ ದೊಡ್ಡಮನಿ,ಪ್ರಕಾಶ ಡೊಂಬರಮತ್ತೂರ,ಹನಮಂತ ಹಳ್ಳಿ,ಶಿವರಾಜ ಹುರಳಿಕುಪ್ಪಿ,ಆಕಾಶ ಕರೆಚಿಕ್ಕಣ್ಣನವರ ಸೇರಿದಂತೆ ಅನೇಕರಿದ್ದರು.