ಲೋಕದರ್ಶನ ವರದಿ
ಹಳಿಯಾಳ: ಮುತ್ತಲಮರಿ ಗ್ರಾಮದಿಂದ ಕಿವಡೆಬೈಲ್ ಸಂಪರ್ಕ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆ ಊರಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುತ್ತಲಮುರಿಯ ನೂರಾರು ರೈತರು ಸೋಮವಾರ ತಾಲೂಕ ಕಚೇರಿಗೆ ಬಂದು ತಮ್ಮ ಹೊಲಗಳಿಗೆ ತೆರಳುವ ರಸ್ತೆ ಸಮಸ್ಯೆಯ ಬಗ್ಗೆ ತಹಶೀಲ್ದಾರರಿಗೆ ವಿವರಿಸಿದರು. ಕಿವಡೆಬೈಲ್ ಭಾಗದಲ್ಲಿ ತಮ್ಮ ಊರಿನ ರೈತರ ಹೊಲ-ಗದ್ದೆಗಳಿವೆ. ನಿತ್ಯ ಹೊಲ-ಗದ್ದೆಗಳಿಗೆ ತೆರಳುವ ವಹಿವಾಟಿನ ರಸ್ತೆ ಖಾಸಗಿಯವರದ್ದು ಎಂದು ತಿಳಿದುಬಂದಿರುವುದರಿಂದ ಅವರು ಅದನ್ನು ಉಳುಮೆ ಮಾಡಿಕೊಂಡು ಗದ್ದೆಯನ್ನಾಗಿ ಪರಿವರ್ತಿಸಿದ್ದಾರೆ. ಇನ್ನೊಂದೆಡೆ ಸರಕಾರಿ ದಾಖಲೆಗಳ ಪ್ರಕಾರ ಇರುವ ರಸ್ತೆಯನ್ನು ಓರ್ವ ರೈತ ಅತಿಕ್ರಮಣ ಮಾಡಿಕೊಂಡಿದ್ದಾನೆ. ಪರಿಣಾಮ ಹೊಲಗಳಿಗೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ತಹಶೀಲ್ದಾರರು ಸಕರ್ಾರಿ ದಾಖಲೆಗಳಲ್ಲಿ ನಮೂದಾಗಿರುವಂತೆ ಅತಿಕ್ರಮಣಗೊಂಡ ಜಮೀನನ್ನು ಬಿಡಿಸಿಕೊಂಡು ಅದನ್ನು ರಸ್ತೆಯನ್ನಾಗಿ ಪರಿವತರ್ಿಸಿ ಜನರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ತಹಶೀಲ್ದಾರರಿಗೆ ಕೋರಲಾಯಿತು.