ಲೋಕದರ್ಶನವರದಿ
ಮುತ್ತಗಿ೨೦ : ಕಲಘಟಗಿ ಬೀರೇಶ್ವರರು ಕನಕಭವನ ಬೀರ ಲಿಂಗೇಶ್ವರರು ಸಾಕ್ಷಾತ ಶಿವನ ಅವತಾರಿ ಮಂಗಲಕಾರಿಯಾದವರು ಯಾವುದೇ ಶುಭ ಕಾರ್ಯಕ್ಕೆ ಕಂಬಳಿ, ಭಂಡಾರ, ಡೊಳ್ಳು ಅತ್ಯಂತ ಅವಶ್ಯಕ ಪವಿತ್ರ ಆಭರಣಗಳಾಗಿದೆ.
ಶಿವನ ಅಲಂಕಾರದ ಪವಿತ್ರ ಆಭರಣಗಳೆ ಬೀರಲಿಂಗೇಶ್ವರನ ಪರಮ ಆಸ್ತಿಗಳಾಗಿವೆ. ಕಂಬಳಿ ಬೀಸಿದರೆ ಮಳೆ ತರೆಸಿದ್ದು ಭಂಡಾರ ಧರೆಸಿದರೆ ಬದುಕು ಬಂಗಾರವಾಗುವುದು.ಡೊಳ್ಳು ಬಾರಿಸಿದರೆ ಸಾಕ್ಷಾತ ಶಿವನೆ ಪ್ರತ್ಯೇಕ್ಷನಾಗುವನು ಎಂಬ ಅಪಾರ ನಂಬಿಕೆ ಇಟ್ಟವರು ಹಾಲುಮತ ಕುರುಬರು ಎಂದು ಮನಸೂರು ರೇವಣಸಿದ್ಧೇಶ್ವರ ಮಹಾಮಠದ ಪೀಠಾಧಿಪತಿ ಬಸವರಾಜ ದೇವರು ಇಂದಿಲ್ಲಿ ನುಡಿದರು. ಮತ್ತುಗಿ ಗ್ರಾಮದಲ್ಲಿದ್ದು ಬೀರೇಶ್ವರ ಜಾತ್ರಾ ಮಹೋತ್ಸವ 2019 ಡೊಳ್ಳು ಬಾರಿಸಿ, ಕಂಬಳಿ ಬೀಸಿ, ಚಾಲನೆ ನೀಡಿದ ಶ್ರೀಗಳು ಮಳೆ ಬೆಳೆ ಶಾಂತಿ ಸೌಕ್ಯಕ್ಕಾಗಿ ಜಾತ್ರೆಗಳು ಅತ್ಯಂತ ಅಗತ್ಯವೆಂದು ಹೇಳಿದರು.
ಬೆಳ್ಳಿಗ್ಗೆ ಅಮೃತ ಮಹೋತ್ಸವದಲ್ಲಿ ಬೀರಲಿಂಗೇಶ್ವರನಿಗೆ ಅಭಿಶೇಕ, ಪೂಜೆ, ಮಹಾ ಮಂಗನ ಪ್ರಸಾದ ವಿತರಣೆ ಜರುಗಿತು. ಬೀರೇಶ್ವರ ಪಲ್ಲಕ್ಕಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸಿದವು. ಪ್ರಸಿದ್ಧ ಡೊಳ್ಳಿನ ಹಾಡಿಕೆ ಜರುಗಿದವು.