ಸಂಗೀತ. ಸಾಹಿತ್ಯದಂತಹ ಕಲೆಗಳು ಸಾಧಕರ ಸ್ವತ್ತು: ಬಡಿಗೇರ

ವಿಶ್ವರೂಪ ಲಲಿತಕಲಾ ನಿಕೇತನದ ಸಂಗೀತ ಕಲಿಕಾ ಪ್ರೇರಣಾದ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಬಡಿಗೇರ ಉದ್ಘಾಟಿಸಿದರು

ಲೋಕದರ್ಶನ ವರದಿ  

ರಾಣೆಬೆನ್ನೂರು21: ಸಂಗೀತವು ಮನುಷ್ಯನ ಅನೇಕ ನೋವುಗಳನ್ನು ದೂರ ಮಾಡುತ್ತದೆ. ಸಂಗೀತ, ಸಾಹಿತ್ಯ ಇವು ಸಾಧಕರ ಸ್ವತ್ತು. ಸದಾ ಸಾಧನೆ ಮಾಡುತ್ತಲೇ ಕಲಿಯಬೇಕು. ಅಂದಾಗ ಮಾತಾ ಕಲೆ ಸಿದ್ದಿಸುತ್ತದೆ. ಇದು ಕೇವಲ ಸಾಧಕರಿಗೆ ಮಾತ್ರ ಸಾಧ್ಯ ಎಂದು ಹುಬ್ಬಳ್ಳಿಯ ಸಾಹಿತಿ ಭೀಮಸೇನ ಬಡಿಗೇರ ಹೇಳಿದರು. 

ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪಂಚಾಪತಿ ಸಭಾಭವನದಲ್ಲಿ ಬುಧವಾರ ನಡೆದ ವಿಶ್ವರೂಪ ಲಲಿತಕಲಾ ನಿಕೇತನದ ಸಂಗೀತ ಕಲಿಕಾ ಪ್ರೇರಣಾದ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

   ಇಂದು ದಾಸ ಸಾಹಿತ್ಯವಾಗಲಿ, ವಚನ ಸಾಹಿತ್ಯವಾಗಲಿ ಯಾವದೇ ಜನಪದ ಕಲೆಯಾಗಲಿ ಉಳಿದುಕೊಂಡಿದ್ದು ಸಂಗೀತದಿಂದಲೇ ರಾಜಮಹಾರಾಜರ ಕಾಲದಿಂದಲೂ ಸಂಗೀತಕ್ಕೆ ತನ್ನದೆ ಆದ ಸ್ಥಾನಮಾನ ವಿದೆ. ಇದನ್ನು ಇಂದಿನ ಪೀಳಿಗೆ ಉಳಿಸಿಕೊಂಡು ಬೆಳಿಸಿಕೊಂಡು ಹೋಗಬೇಕೆಂದರು.   

  ನಿವೃತ್ತ ಶಿಕ್ಷಕ ಎಸ.ಕೆ. ದುರ್ಗದಸೀಮಿ ಮಾತನಾಡಿ, ಸಂಗೀತವು ನಶಿಸಿಹೋಗಬಾರದು, ಸಂಗೀತ ಶಿಕ್ಷಕ ಮೌನೇಶ ಬಡಿಗೇರ ಮಕ್ಕಳಿಗೆ ಕಲಿಸುವ ಮೂಲಕ ಕಲೆಯನ್ನು ಉಳಿಸಬೇಕು. ಜೊತೆಗೆ ಮಕ್ಕಳು ಕಲಿತು ಸಂಗೀತ ಶಾಲೆಗೆ ಕೀತರ್ಿ ತರಬೇಕು ಎಂದರು.  

 ಪತ್ರಕರ್ತ ಗುರುರಾಜ. ಶಿರಹಟ್ಟಿ ಮಾತನಾಡಿ, ನಮ್ಮ ನಾಡಿನಲ್ಲಿ ಸಂಗೀತಕ್ಕೆ ವಿಶೇಷವಾದ ಸ್ಥಾನಮಾನವಿದೆ, ಪುರಂದರ ದಾಸರನ್ನು ಸಂಗೀತ ಪಿತಾಮಾಹಾ ಎಂದು ಕರೆದಿದ್ದಾರೆ.  

ದಾಸ ಸಾಹಿತ್ಯವು ಉಳಿದಿರುವುದು ಸಂಗೀತಗಾರರಿಂದಲೇ ಅನೇಕ ಅಪ್ರತಿಮ ಸಂಗೀತಗಾರರನ್ನು ಕೊಟ್ಟ ನಾಡಿದು. ಪಂಡೀತ ಭೀಮಸೇನ ಜೋಶಿ ಅಂತ ಪ್ರತಿಭೆ ಇದೆ ಕನರ್ಾಟಕ ನಾಡಿನದು ಎಂಬುದನ್ನು ಮರೆಯುವಂತಿಲ್ಲಾ ಎಂದರು.  

ಇದೇ ಸಂದರ್ಭದಲ್ಲಿ ವಯೋವೃದ್ದ ಕಲಾವಿದ ಎನ್. ಡಿ. ನಾಯ್ಕ ಅವರನ್ನು ಸನ್ಮಾನಿಸಲಾಯಿತು.  

  ನಿವೃತ್ತ ಎಂಜಿನಿಯರ ಶ್ಯಾಮರಾವ್ ನಿಂಬರಗಿ ಅಧ್ಯಕ್ಷತೆ ವಹಿಸಿದ್ದರು. ನಿಕೇತನ ಶಾಲೆಯ ಸಂಗೀತ ಶಿಕ್ಷಕ ಮೌನೇಶ್ವರ ಬಡಗೇರ, ಸುನಿತಾ ಎಂ.ಬಿ, ಹಾಲೇಶ ವಿ.ಎಚ್.  

ವಿಶ್ವರೂಪ ಲಲಿತಕಲಾ ನಿಕೇತದ ವಿಧ್ಯಾಥರ್ಿಗಳಾದ ವಿಜಯ ಜಿ.ಕೆ, ವೆಂಕಟೇಶ ಶಿರಹಟ್ಟಿ. ಅತ್ರೇಯ ಎಸ್, ಸುಹಾಸ ಎ.ಡಿ, ರಾಘವೇಂದ್ರ ಎಂ, ತನ್ಮಯಿ ಎನ್.ಸಿ, ಭರತೆ ಸಿ, ಕೃಷ್ಣ ಎಂ. ಬಿ, ಶಕುಂತಲಾ, ಶಿವಯೋಗಿ, ಅಖಿತಾ, ಕಾವ್ಯ ಜಿ.ಎಸ್, ರಜಿತಾ ಅವರು ತಮ್ಮ ಕಲಾ ಸಂಗೀತ ಪ್ರತಿಭೆಯನ್ನು ಪ್ರದಶರ್ಿಸಿದರು.