ಲೋಕದರ್ಶನ ವರದಿ
ಬೆಳಗಾವಿ20: ಬೆಳಗಾವಿಯ ಸಂಗೀತ ಕಲಾಕಾರ ಸಂಘದವರು ಶಹಾಪೂರದ ವಿಠ್ಠಲದೇವಗಲ್ಲಿಯ ವಿಠ್ಠಲ ಮಂದಿರದಲ್ಲಿ ಪಂ. ಬಿ. ವಿ. ಕಡ್ಲಾಸ್ಕರ ಅವರ ಜಯಂತಿ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಗೀತ ವಿದ್ಯಾಲಯದ ಪ್ರಾಚಾಯರ್ೆ, ಗಾಯಕಿ ಶ್ರೀಮತಿ ನಿರ್ಮಲಾ ಪ್ರಕಾಶ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಗಾಯಕಿ ನಿರ್ಮಲಾ ಪ್ರಕಾಶ ಆರಂಭದಲ್ಲಿ ರಾಗ ಶುದ್ಧ ಕಲ್ಯಾಣ ರಾಗವನ್ನು ಪ್ರಸ್ತುತ ಪಡಿಸಿದರು. ಮುಂದೆ ಪುರಂದರದಾಸರ ರಚನೆ 'ನಾ ನಿನ್ನ ಧ್ಯಾನದೊಳಿರಲು ಸದಾ...' ಸುಶ್ರಾವ್ಯವಾಗಿ ಹಾಡಿದರು. ಭೈರವಿ ರಾಗದಲ್ಲಿ ಶ್ಲೋಕ, ಭವಾನಿ ದಯಾನಿ ಮತ್ತು ತರಾನಾದೊಂದಿಗೆ ಕಾರ್ಯಕ್ರಮ ನೀಡುವುದರೊಂದಿಗೆ ಸಂಗೀತಾಸಕ್ತರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
ವಾಮನ ವಾಗೂಕರ ಹಾಮರ್ೋನಿಯಮ್ ಹಾಗೂ ನಾರಾಯಣ ಗಣಾಚಾರಿ ತಬಲಾ ಸಾಥ ನೀಡಿದರು. ಕಲಾವಿದರಾದ ರಾಜಪ್ರಭು ಧೋತ್ರೆ, ಗುರುರಾಜ ಕಲಕಣರ್ಿ, ಸಂಜಯ ದೇಶಪಾಂಡೆ, ರೋಹಿಣಿ ಗಣಫುಲೆ, ಸ್ನೇಹಾ ರಾಜೂರಕರ್ ಉಪಸ್ಥಿತರಿದ್ದರು.