ಕಂಪ್ಲಿ ಪಟ್ಟಣದಲ್ಲಿ ರಸ್ತೆ ಅಗೀಕರಣಕ್ಕೆ ಸಮೀಕ್ಷೆಕೈಗೊಂಡ ಪುರಸಭೆ

Municipality surveyed for road construction in Kampli town

ಕಂಪ್ಲಿ ಪಟ್ಟಣದಲ್ಲಿ ರಸ್ತೆ ಅಗೀಕರಣಕ್ಕೆ ಸಮೀಕ್ಷೆಕೈಗೊಂಡ ಪುರಸಭೆ 

ಕಂಪ್ಲಿ 20: ಸ್ಥಳೀಯ ಪುರಸಭೆ ವ್ಯಾಪ್ತಿಯ ನಡುವಲ ಮಸೀದಿಯಿಂದ ಜೋಗಿ ಕಾಲುವೆ ( ಗಂಗಾವತಿ ಸಂಪರ್ಕ ರಸ್ತೆ) ವರೆಗಿನ ರಸ್ತೆ ಅಗಲೀಕರಣಕ್ಕಾಗಿ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಸ್ತೆಯ ಅಳತೆ ಮಾಡಿ ಅಗಲೀಕರಣ ಮಾಡಬೇಕಾದ ಮಾರ್ಗವನ್ನು ಗುರುತಿಸಿದರು. ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆ ವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಿದ್ದು, ಈ ಹಿನ್ನೆಲೆಯಲ್ಲಿ ರಸ್ತೆಯ ಮಧ್ಯ ಭಾಗದಿಂದ ರಸ್ತೆ ಅಗಲೀಕರಣ ಮಾಡಬೇಕಿರುವ ಪ್ರದೇಶವನ್ನು ಗುರುತಿಸಲಾಗುತ್ತಿದೆ. 

 ಈ ರಸ್ತೆಯಲ್ಲಿ ಹಳೇ ಪೊಲೀಸ್ ಠಾಣೆಯವರೆಗೆ ಅಗಲವಾಗಿದ್ದು, ಮುಂದೆ ರಸ್ತೆ ಅತ್ಯಂತ ಕಿರಿದಾಗಿದೆ. ಕಲೆವು ಭಾಗದಲ್ಲಿ 20 ಅಡಿ,ಇನ್ನು ಕೆಲವು ಭಾಗದಲ್ಲಿ 25 ಅಡಿ,ಇನ್ನೂ ಕೆಲವು ಭಾಗದಲ್ಲಿ ತೀರ ಕಡಿಮೆ ಅಳತೆಯ ರಸ್ತೆ ಇದೆ. ಇದರಿಂದ ವಾಹನ ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ತೀವ್ರವಾದ ಅಡಚಣೆಯಾಗಿದ್ದು, ಈ ರಸ್ತೆಯಲ್ಲಿನ ಮನೆಗಳ ಅಳತೆಗಳನ್ನು ದಾಖಲೆಗಳಲ್ಲಿ ಪರೀಶೀಲಿಸಿ ರಸ್ತೆ ಅಗಲೀಕರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.ರಸ್ತೆ ಅಭಿವೃದ್ಧಿ ಕಾಮಗಾರಿಗೂ ಮುನ್ನ ಈ ಭಾಗದ ಸಾರ್ವಜನಿಕರು, ಜನಪ್ರತಿನಿಧಿಗಳ ಸಭೆಯನ್ನು ಕರೆದು ಸಮಾಲೋಚನೆ ಮಾಡಿ ರಸ್ತೆ ಅಗಲೀಕರಣಕ್ಕೆ  ಸೂಕ್ತವಾದ ಅಳತೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ನಿರ್ಧರಿಸಲಾಗುವುದು ಎಂದರು.  

ಈ ಸಂದರ್ಭದಲ್ಲಿ ಪುರಸಭೆ ಕಿರಿಯ ಅಭಿಯಂತರರಾದ ಮೇಘನಾ ಅಶೋಕ್ ಸೇರಿದಂತೆ ಸಿಬ್ಬಂದಿಗಳು ಇದ್ದರು, ಕಳೆದ 2009ರಲ್ಲಿ ಪುರಸಭೆಯಿಂದ ನಡುವಲ ಮಸೀದಿಯವರೆಗೆ ಮಾತ್ರ ರಸ್ತೆ ಅಗಲೀಕರಣ ಮಾಡಿದ್ದರು, ನಂತರ ಮುಮದುವರಿದ ಈ ರಸ್ತೆಯನ್ನು ಅಗಲೀಕರಣ ಮಾಡಿರಲಿಲ್ಲ. ಇದರಿಂದ ಸಂಚಾರಕ್ಕೆ ಅನಾನುಕೂಲವಾಗಿದ್ದು, ಇದೀಗ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದಾರೆ.