ಲೋಕದರ್ಶನ ವರದಿ
ಪುರಸಭೆಯ 6 ಲಕ್ಷ 37 ಸಾವಿರ ಉಳಿತಾಯ ಬಜೆಟ ಮಂಡನೆ
ಮಹಾಲಿಂಗಪುರ, 19 : ಸ್ಥಳೀಯ ಪುರಸಭೆಯ ಸಭಾ ಭವನದಲ್ಲಿ ನಡೆದ ಪುರಸಭೆಯ 2025-26 ನೇ ಸಾಲೀನ ಪರಿಷ್ಕೃತ ಆಯ-ವ್ಯಯದ ಅಂದಾಜು ಮತ್ತು 2025-26 ನೇ ಸಾಲೀನ ಅಯ-ವ್ಯಯದಲ್ಲಿ ಪುರಸಭೆ ವಿವಿಧ ರೀತಿಯ 24 ಕೋಟಿ 40 ಲಕ್ಷ 90 ಸಾವಿರದಾ 350 ರೂ ಆಧಾಯ ನೀರೀಕ್ಷೆ ಮಾಡಿದ್ದು ಪುರಸಭೆಯ ಎಲ್ಲ ತರಹದ ಖರ್ಚು 24 ಕೋಟಿ 34 ಲಕ್ಷ 52 ಸಾವಿರದಾ 600 ರೂ ಸೇರಿ ಒಟ್ಟು 6 ಲಕ್ಷ 37 ಸಾವಿರದಾ 7 ನೂರಾ 50 ರೂ ಗಳ ನಿವ್ವಳ ಆದಾಯದ ಬಜೆಟ್ನ್ನು ಪುರಸಭೆ ಅಧ್ಯಕ್ಷರಾದ ಯಲ್ಲಣ್ಣಗೌಡ ಪಾಟೀಲ ಮಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರ ಹಿತ ಮತ್ತು ಪಟ್ಟಣದ ಸರ್ವತೋಮುಖ ಅಭಿವೃಧ್ದಿಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡನೆ ಮಾಡಲಾಗಿದೆ,ಇದಕ್ಕೂ ಹೆಚ್ಚಿನ ವಿಷಯಗಳನ್ನು ಪುರಸಭೆ ಸದಸ್ಯರು ಹೇಳಿದರೆ ಅದನ್ನು ಕೂಡಾ ಇದರಲ್ಲಿ ಸೇರಿಸಿಕೊಳ್ಳಲಾಗುವುದು. ಒಟ್ಟಿನಲ್ಲಿ ಪಟ್ಟಣದ ಅಭಿವೃಧ್ದಿಯೇ ಎಲ್ಲರ ಗುರಿಯಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಶೇಖರ ಅಂಗಡಿ ಬಜೆಟ್ ಮಂಡನೆಗೆ ಅಭಿನಂದನೆ ಸಲ್ಲಿಸಿ, ಈ ಬಜೆಟನಲ್ಲಿ ಕೆರೆ ಅಭಿವೃದ್ದಿ, ಬಹಳ ದಿನಗಳಿಂದ ತಿನಿಸು ಕಟ್ಟೆ ಮಾರುಕಟ್ಟೆಗೆ ಪುನಃ ಟೆಂಡರ ಕರೆದು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಒತ್ತಾಯಿಸಿದರು. ಬಾಡಿಗೆ ಮತ್ತು ಠೇವಣಿ ಕಡಿಮೆ ಮಾಡಲು ಅವಕಾಶ ಇದ್ದರೆ ಕಡಿಮೆ ಮಾಡಿ ಕೊಡಬೇಕು ಒತ್ತಾಯಿಸಿದರು. ಅಲ್ಲದೆ ಪುರಸಭೆಯ ಪರವಾಣಿಗೆ ಇಲ್ಲದೆ ಎಲ್ಲಿಯೂ ಬ್ಯಾನರಗಳನ್ನು ಅಳವಡಿಸಬಾರದು ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಡಬಲ್ ರಸ್ತೆಯಲ್ಲಿರುವ ಹರಳಯ್ಯ ಸಮುದಾಯದ 4 ಲಕ್ಷ ರೂಪಾಯಿ ಕಾಮಗಾರಿ ಏನಾಗಿದೆ,ಕೆಲಸ ಏಕೆ ಆರಂಭಿಸಿಲ್ಲ ಎಂದರು.ಜೋಡು ರಸ್ತೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಮಧ್ಯ ರಸ್ತೆ ಬಿಟ್ಟಿದ್ದು ಆ ರಸ್ತೆಯಲ್ಲಿ ಹಾಕಿದ ಅನದಿಕೃತ ಚಹಾ ಹೋಟೆಲ್ ತೇರುವು ಗೊಳಿಸಿದ್ದು ಇನ್ನೂ ಉಳಿದ ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವು ಗೊಳಿಸಲು ಒತ್ತಾಯಿಸಿದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಚನ್ನಬಸು ಯರಗಟ್ಟಿ ಪಟ್ಟಣದ ಕೆರೆ ಹತ್ತಿರವಿರುವ ಜಾಗೆಯಲ್ಲಿ ಒಂದು ಸುಂದರವಾದ ಗಾರ್ಡನ ಮಾಡಲು ಒತ್ತಾಯಿಸಿದರು.ಮತ್ತು ಪಟ್ಟಣದ ಯಾವ ಜಾಗದಲ್ಲಾದರೂ ಒಂದು ಸ್ವಿಮಿಂಗ ಫೂಲ್ ಮಾಡಬೇಕು ಇದರಿಂದ ಪಟ್ಟಣದ ಅಂದವೂ ಹೆಚ್ಚುತ್ತದೆ. ಜನತೆಗೆ ಇನ್ನೂ ಹೆಚ್ಚಿನ ಅನುಕೂಲ ಆಗುತ್ತದೆ ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ರಾಜು ಚಮಕೇರಿ ನಗರದ ಚೆನ್ನಮ್ಮ ವೃತ್ತದ ಹತ್ತಿರವಿರುವ ಮಹಾಲಿಂಗೇಶ್ವರ ತಿನಿಸು ಕಟ್ಟೆ ಹೆಸರು ಬದಲಾವಣೆ ಮಾಡಲು ಒತ್ತಾಯಿಸಿದರು.ತಿನಿಸು ಕಟ್ಟೆಯ ಮುಂದೆ ಹಾಕಿರುವ ಕಬ್ಬಿಣದ ಡ್ರಿಲ್ ತೆಗೆದು ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕೆಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಶ್ರೀಮತಿ ಸವಿತಾ ಹುರಕಡ್ಲಿ ಮಾತನಾಡಿ ಪುರಸಭೆ ತಮ್ನ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದೆ ಇರುವುದು ತುಂಬಾ ಬೇಸರ ತರಿಸಿದೆ ಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ ಜಂಗಮ ಸಮುದಾಯ ಭವನಕ್ಕೆ ಅನುದಾನ ನೀಡಲು ಒತ್ತಾಯಿಸಿದರು.ಪುರಸಭೆಯಲ್ಲಿ ನಿರ್ಧಾರವಾಗುವ ನಿಯಮಗಳನ್ನು ಸೂಚನಾ ಫಲಕದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿ ಎಂದು ಹೇಳಿದರು.
ಉದ್ಯಾನವನ ನಿರ್ವಹನೆಗೆ ಟೆಂಡರ್ : ನಗರದಲ್ಲಿರುವ ಉದ್ಯಾನವನಗಳಲ್ಲಿ ಆರು ಸಂಪೂರ್ಣ ಅಭಿವೃದ್ಧಿ ಹೊಂದಿದ್ದು ಅವುಗಳ ನಿರ್ವಹಣೆಗೆ ಮಹಿಳಾ ಸಂಘಗಳಿಗೆ ಟೆಂಡರ ಕರೆಯಲಾಗಿದೆ. ಅರ್ಹ ಸಂಘಗಳಿಗೆ ವಾರ್ಷಿಕ ನಿರ್ವಹಣೆ ವೆಚ್ಚವಾಗಿ ಪುರಸಭೆ 2.50 ಲಕ್ಷ ರೂಪಾಯಿ ಕೊಡುತ್ತದೆ ಎಂದರು.
ಈ ಎಲ್ಲ ಸಮಸ್ಯೆಗಳನ್ನು ಆಲಿಸಿದ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಕೂಡಲೇ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ಶೀಲಾ ಭಾವಿಕಟ್ಟಿ ಸ್ಥಾಯಿ ಸಮಿತಿ ಚೇರಮನ್ ಅಬ್ದುಲರಜಾಕ ಭಾಗವಾನ, ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಸಜನಸಾಬ ಪೆಂಡಾರಿ, ರಾಜು ಗೌಡಪ್ಪಗೋಳ, ಬಸಪ್ಪ ಬುರುಡ, ಚಾಂದನಿ ನಾಯಕ, ಸ್ನೇಹಲ್ ಅಂಗಡಿ, ಲಕ್ಷಿ ಮುದ್ದಾಪುರ, ಸವಿತಾ ಕೋಳಿಗುಡ್ಡ, ಸರಸ್ವತಿ ರಾಮೋಜಿ, ಭಾವನಾ ಪಾಟೀಲ, ಸುಜಾತಾ ಮಾಂಗ, ಗೋದಾವರಿ ಬಾಟ, ನಾಮನಿರ್ದೇಶೀತ ಸದಸ್ಯರಾದ ವಿನೋದ ಸಿಂಪಿ, ಪಾಪಾ ನಾಲಬಂಧ, ಅನಂತನಾಗ ಬಂಡಿ, ಬಸು ಕರೆಹೊನ್ನ, ಸೇರಿದಂತೆ ಪುರಸಭೆ ಅಧಿಕಾರಿಗಳಾದ ಎಸ್ ಎಸ್ ಪಾಟೀಲ, ಸಿ ಎಸ್ ಮಠಪತಿ, ಪಿ ವಾಯ್ ಸೊನ್ನದ, ಎಂ ಎಂ ಮುಗಳಕೋಡ, ಎಸ್ ಎಂ ಕಲಬುರ್ಗಿ, ರಾಜೇಶ್ವರಿ ಸೊರಗಾಂವಿ, ಸಿಪಾಯಿ ರಾಮು ಮಾಂಗ, ಮಹಾಲಿಂಗ ಮಾಂಗ, ಉಪಸ್ಥಿತರಿದ್ದರು.