ಹಣ ಬಲ, ತೋಲ್ ಬಲದಿಂದ ಪುರಸಭೆ ಅಧಿಕಾರ : ಅಳ್ಳಳ್ಳಿ ವಿರೇಶ ಗಂಭೀರ ಆರೋಪ
ಕಂಪಿ 23 : ವಾಮ ಮಾರ್ಗದಲ್ಲಿ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ ಎಂದು ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಅಳ್ಳಳ್ಳಿ ವಿರೇಶ ಆರೋಪಿಸಿದರು. ಅವರು ಗುರುವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನಂತರ ಚುನಾವಣೆಯಲ್ಲಿ ಗೈರಾದ ಮೂವರು ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಕಂಪ್ಲಿ ಪಟ್ಟಣದಲ್ಲಿ 13 ಜನ ಬಿಜೆಪಿ ಸದಸ್ಯರ ಬಹುಮತ ಇತ್ತು. ಆದರೆ, ಶಾಸಕ ಗಣೇಶ, ಸಂಸದರು ಮತ್ತು ಕಾಂಗ್ರೆಸ್ ಸರ್ಕಾರ ಬಿಜೆಪಿಯ ಮೂರು ಜನ ಸದಸ್ಯರಿಗೆ ಹಣ ಕೊಟ್ಟು ಖರೀದಿ ಮಾಡಿ, ಇಂದಿನ ಚುನಾವಣೆಯಲ್ಲಿ ಮೂರ ಜನ ಸದಸ್ಯರನ್ನು ಗೈರಾಗುವಂತೆ ಮಾಡಿ, ಜಯ ಪಡೆದಿದ್ದಾರೆ. ಬಿಜೆಪಿಯ ಸದಸ್ಯರಾದ ಕೆ.ನಿರ್ಮಲ, ಪಾರ್ವತಿ, ಗಂಗಮ್ಮ ಉಡೆಗೋಳ್ ಇವರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದೆ. ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಿ, ಮೂವರ ಸದಸ್ಯತ್ವ ರುದ್ದುಪಡಿಸಲಾಗುವುದು. ಪಕ್ಷದಿಂದ 6 ವರ್ಷ ಉಚ್ಚಾಟಿಸಲಾಗುವುದು. ಕೆ.ನಿರ್ಮಲಾ ವಸಂತ ಅವರು ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನ ಪಡೆದು, ಈಗ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಂಪ್ಲಿ ಪಟ್ಟಣದ ಜನಾದೇಶ ಬಿಜೆಪಿ ಪರವಾಗಿದೆ. ಆದರೆ, ಕಾಂಗ್ರೆಸ್ ಖರೀದಿ ಕೇಂದ್ರ ಮಾಡಿಕೊಂಡಿದೆ. ಮುಂದಿನ ದಿನದಲ್ಲಿ ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹವರಿಗೆ ಬರುವ ಪುರಸಭೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು. ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಗೈರಾದ ಮೂವರ ಭಾವಚಿತ್ರ ಪ್ರದರ್ಶಿಸಿ, ಪಕ್ಷದ್ರೋಹ ಮಾಡಿದ್ದಾರೆಂದು ಆರೋಪಿಸಿ, ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಡಾ.ವಿಲ್.ಬಾಬು, ಟಿ.ವಿ.ಸುದರ್ಶನರೆಡ್ಡಿ, ಎಸ್.ಎಂ.ನಾಗರಾಜ, ಎನ್.ರಾಮಾಂಜನೇಯಲು, ರಮೇಶ ಹೂಗಾರ, ಆರ್.ಆಂಜನೇಯ, ಶಾಂತಲಾ ವಿದ್ಯಾಧರ, ತಿಮ್ಮಕ್ಕ, ಹೇಮಾವತಿ, ಮುಖಂಡರಾದ ಭಾಸ್ಕರ್‌ರೆಡ್ಡಿ, ಪಿ.ಬ್ರಹ್ಮಯ್ಯ, ವಿದ್ಯಾಧರ, ಚಂದ್ರಕಾಂತರೆಡ್ಡಿ, ವಿರೂಪಾಕ್ಷಿ, ಸಿ.ಎ.ಚನ್ನಪ್ಪ, ಬಿ.ಕೆ.ವಿರೂಪಾಕ್ಷಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.
ಜ.002: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ನವರು ಬಿಜೆಪಿ ಸದಸ್ಯರನ್ನು ಖರೀದಿಸಿದ್ದಾರೆಂದು ಆರೋಪಿಸಿ, ಪ್ರತಿಭಟಿಸಿದರು.