ಮುಗಳಖೋಡ 13: ಸುಕ್ಷೇತ್ರ ಮುಗಳಖೋಡದ ಲಿಂ. ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜ ಶ್ರೀಮಠದ ಪರಂಪರೆ ಜಾತ್ಯಾತೀತ ಪರಂಪರೆ. ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಕಂಗೊಳಿಸುತ್ತಿರುವದು. ನಾನು ನಿಮ್ಮ ಗುರುವಾದರೆ ಶ್ರೀಮಠದ ಸಧ್ಭಕ್ತರು ನನ್ನ ತಂದೆ-ತಾಯಿ ಬಡ ಭಕ್ತನ ಗುಡಿಸಲಿನಲ್ಲಿ ಅರಮನೆಯನ್ನು ಕಾಣುವ ಮಠ ಮುಗಳಖೋಡ ಮಠ ಎಂದು ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ದಿ 13ರಂದು ಸಾಯಂಕಾಲ 6 ಗಂಟೆಗೆ ಸಿದ್ಧಲಿಂಗೇಶ್ವರ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶಿರ್ವಚನ ನೀಡಿದರು.
ನಮ್ಮ ಗುರುಪರಂಪರೆ ವಿಶಿಷ್ಟವಾದದ್ದು, ಈ ಮಠ ಭಕ್ತರಿಗೆ ಬೇಡಿದನ್ನು ನೀಡುವ ಕಲ್ಪವೃಕ್ಷ, ಇಲ್ಲಿ ನಿಷ್ಟೆಯಿಂದ, ಭಕ್ತಿಯಿಂದ ನಡೆದುಕೊಂಡವರನ್ನು ಯಲ್ಲಾಲಿಂಗೇಶ್ವರ ಮಹಾರಾಜರು ಹಾಗೂ ಸಿದ್ದರಾಮೇಶ್ವರ ಸ್ವಾಮಿಗಳು ಎಂದಿಗೂ ಕೈಬಿಡುವುದಿಲ್ಲ. ಸದಾಕಾಲ ಆ ಗುರುವಿನ ಆಶೀವರ್ಾದ ನಿಮ್ಮೆಲ್ಲರ ಮೇಲಿದೆ ಆಶೀರ್ವಚನದ ಮೂಲಕ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು. ಶನಿವಾರ ಬೆಳಿಗ್ಗೆ 6 ಗಂಟೆಗೆ ಸಿದ್ಧಲಿಂಗೇಶ್ವರ, ಯಲ್ಲಾಲಿಂಗೇಶ್ವರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ ಮಂಗಳಾರುತಿ, ಮುಂಜಾನೆ 10.30ಕ್ಕೆ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಅಗ್ನಿಕುಂಡದಲ್ಲಿ ಹಾಯ್ದು ಕಾರ್ಯಕ್ರಮ ನಡೆಯಿತು.
ಸಾಯಂಕಾಲ 6 ಗಂಟೆಗೆ ಸಿದ್ಧಲಿಂಗೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಮಹಾರಥೋತ್ಸವ ಕಾರ್ಯಕ್ರಮವು ನಡೆಯಿತು. ನಂತರದಲ್ಲಿ ರಾತ್ರಿ 8 ಗಂಟೆಗೆ ಸೊಲ್ಲಾಪೂರ ಭಕ್ತಿರಿಂದ ಮದ್ದು ಸುಡುವ ಕಾರ್ಯಕ್ರಮ ಜರುಗಿತು.
ಭವ್ಯ ಜಾತ್ರಾ ಮಹೋತ್ಸವದಲ್ಲಿ ಆಂಧ್ರ, ಗೋವಾ ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತ ಸಮೂಹದವರು ಪಾಲ್ಗೊಂಡಿದ್ದರು.
ರವಿವಾರ ದಿ. 14ರಂದು ಸಾಯಂಕಾಲ 4ಗಂಟೆಗೆ ಸುಪ್ರಸಿದ್ಧ ಪೈಲ್ವಾನರಿಂದ ಕುಸ್ತಿಗಳು ಡಾ.ಮುರಘರಾಜೇಂದ್ರ ಶ್ರೀಗಳ ಸಮ್ಮುಖದಲ್ಲಿ ನಡೆಯುವವು.