ಲೋಕದರ್ಶನ ವರದಿ
ಮುದ್ದೇಬಿಹಾಳ 22: ವಿರೋಧಿಗಳು ಸತ್ಯಕ್ಕೆ ದೂರವಿರುವ ಆರೋಪ ಹಾಗೂ ನಿಂದನೆಗಳನ್ನು ಮಾಡಿ ಮತಯಾಚನೆ ನಡೆಸಿದ್ದು ಜಿಗಜಿಣಗಿಯವರು ಸುಮಾರು 2 ಲಕ್ಷ ಮತಗಳ ಅಂತರದಲ್ಲಿ ವಿಜಯಪುರ ಸಂಸದರಾಗಿ ಗೆಲವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಪ್ರ.ಕಾರ್ಯದರ್ಶಿ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿನಡೆಸಿ ಮಾತನಾಡಿ ಜಿಗಜಿಣಗಿ ಅವರು ವಿಜಯಪುರ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ವಿರೋಧಿಗಳು ಕೇಳುತ್ತಿದ್ದು ಮೊದಲುಲ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಜನರ ಮುಂದೆ ಸ್ಪಷ್ಠಪಡಿಸಬೇಕಿದೆ. ಈಗಾಗಲೇ ಜಿಗಜಿಣಗಿ ಅವರ ಸಾಧನೆ ಮತ್ತು ಕೊಡುಗೆಗಳನ್ನು ಪ್ರಗತಿ ಪತ್ರಗಳನ್ನು ಜನರಿಗೆ ನೀಡಿ ಮತಯಾಚನೆ ಮಾಡಲಾಗುತ್ತಿದ್ದು ವಿರೋಧಿಗಳಿಗೆ ಜಿಗಜಿಣಗಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲಾ ಎಂದು ಅವರು ಕಿಡಿಕಾರಿದರು.
ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸೈನಿಕರ ಸಾಧನೆಯನ್ನು ಬಿಜೆಪಿ ಪಕ್ಷ ಯಾವತ್ತೂ ರಾಜಕೀಯಕ್ಕೆ ಬಳಸಿಲ್ಲ. ಪ್ರಧಾನಿ ಅವರು ಬಯೋತ್ಪಾದಕರಿಂದ ನಡೆದ ದಳಿಗೆ ತ್ರತ್ಯ್ತರ ನೀಡುವಲ್ಲಿ ಸೈನಿಕರಿಗೆ ಎಂತಹ ಅಧಿಕಾರ ನೀಡಿದರು ಎಂಬುವುದರ ಬಗ್ಗೆ ಜನರಲ್ಲಿ ತಿಳಿಸಿಕೊಡಲಾಗುತ್ತಿದೆ. ಸುಖಾಸುಮ್ಮನೆ ಮೈತ್ರಿ ಪಕ್ಷದವರು ಜಿಗಜಿಣಗಿ ಅವರ ಮೇಲೆ ಆರೋಪಿಸುತಿರುವುದು ಖಂಡನೀಯವಾದದ್ದು ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ.ಡಿ.ಕುಂಬಾರ, ಬಸವರಾಜ ಅಸ್ಕಿ ಮಾತನಾಡಿದರು. ಸಿದ್ದು ಹೆಬ್ಬಾಳ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಎಸ್.ಎಸ್.ಲೋಟಗೇರಿ, ದೇವೇಂದ್ರ ವಾಲಿಕಾರ, ಬಾಪುಗೌಡ ಪೀರಾಪೂರ, ಸುರೇಶಗೌಡ ಪಾಟೀಲ, ರಾಮನಗೌಡ ಇಂಗಳಗಿ ಇದ್ದರು.