ಮೃತ್ಯೋರ್ಮ ನಾಟಕ ಉದ್ಘಾಟನೆ ಸಮಾರಂಭ



ಲೋಕದರ್ಶನ ವರದಿ

ಧಾರವಾಡ 19:  ಧಾರವಾಡದ ಮಣ್ಣಿನಲ್ಲಿ ಸಂಗೀತ, ಸಾಹಿತ್ಯ, ಕಲೆ, ನೃತ್ಯ ಇದು ಜಾಗೃತಿವಾಗಿರುವ ದೃಷ್ಠಿಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವುದಕ್ಕೆ ಈ ನಾಟಕವೂ ಒಂದು ಸಾಕ್ಷಿಯಾಗಿದೆ.  ಎಷ್ಟೇ ಬದಲಾವಣೆ ಬಂದರೂ ಸಹಿತ ಅದಾವೂದಕ್ಕೂ ಅಡಚಣೆ-ಅಡೆತಡೆಗಳಿಲ್ಲದೆ ಧಾರವಾಡದಲ್ಲಿ ಜರುಗುವ ಕಾರ್ಯಕ್ರಮಗಳು ವಿಶ್ವಕ್ಕೆ ಮಾದರಿಯಾಗುವಂತೆ ನಡೆಯುತ್ತಿವೆ ಎಂದು ಡಾ.ಡಿ.ಎಮ್.ಹಿರೇಮಠ ಹೇಳಿದರು.  

ಕುಮಾರೇಶ್ವರ ಕಲ್ಚರಲ್ ಸೊಸೈಟಿ(ರಿ) ಆಶ್ರಯದಲ್ಲಿ ದಿ.18ರಂದು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಏರ್ಪಡಿಸಿರುವ 'ಮೃತ್ಯೋರ್ಮ ನಾಟಕವನ್ನು ಉದ್ಘಾಟಿಸಿದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ.ಎಮ್.ಹಿರೇಮಠ ಅವರು ಮಾತನಾಡುತ್ತ ಇವತ್ತಿನ ದಿನಮಾನದಲ್ಲಿ ಜರುಗುವ ಕಾರ್ಯಕ್ರಮಗಳ ಸುದ್ದಿಯು ವಿಶ್ವವ್ಯಾಪಿಯಾಗಿ ಪ್ರಸಾರವಾಗುತ್ತಿರುವುದು ಬಹಳ ಸಂತಷದ ಸಂಗತಿಯಾಗಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿದ್ದ ಹಿರಿಯ ರಂಗ ನಿದರ್ೆಶಕರಾದ ಡಾ.ಶಶಿಧರ ನರೇಂದ್ರ ಅವರು ಮಾತನಾಡುತ್ತ ಮೃತ್ಯೋರ್ಮ ನಾಟಕವು ಮಹಾಂತೇಶ  ರಾಮದುರ್ಗ ಅವರ ನಿದರ್ೆಶನದಲ್ಲಿ ಧಾರವಾಡದಲ್ಲಿ ಮೊದಲ ಬಾರಿಗೆ ಪ್ರಯೋಗವಾಗುತ್ತಿದೆ.  ಸಾವು ನಮ್ಮನ್ನು ನಿತ್ಯ ಕಾಡತಾ ಇರುವಂತ ಸಂಗತಿಯಾಗಿದೆ. ಪ್ರತಿಯೊಂದು ಸಂಗತಿ ಕೂಡ ಸಾವಿಗೆ ಹತ್ತಿರವಾಗುತ್ತದೆ.  ಸಾವಿನ ಕುರಿತು ನಾವು ವಿಚಾರ ಮಾಡತಾ ಹೋದರೆ ಇದೊಂದು ಗಂಭೀರವಾದಂಥ ಸಂಗತಿಯಾಗಿದೆ.  ಇಡೀ ಜಗತ್ತಿನಲ್ಲಿ ಯಾವುದೇ ಧರ್ಮ, ಜನಾಂಗ ತೆಗೆದುಕೊಂಡರು ಅವರಿಗೆ ಇರೋ ದೊಡ್ಡ ಚಿಂತೆ ಅಂದರೆ ಸಾವು.  ಮೃತ್ಯೋರ್ಮ ಅನ್ನುವಂಥದ್ದು ಪ್ರತಿಯೊಬ್ಬನಿಗೂ ಕೂಡ ನಾನು ಅಜರಾಮರವಾಗಿರಬೇಕು, ನಾನು ಸಾಯಬಾರದು, ಸಾವಿಗೆ ಹತ್ತಿರವಾಗಬಾರದು ಎಂದು ನಿರಂತರ ಪ್ರಯತ್ನ ಮಾಡತಾ ಇರತಾನ, ಆದರೆ ಬದುಕು ನಡೆತಾ ಇರತದ, ಸಾವು ಸಮೀಪಿಸುತ್ತಲೇ ಇರುತ್ತದೆ.  ಸಾವು ಹೇಗೆ ಅಂತ ಅಂದರೆ ಈ ಕ್ಷಣ ನಾವು ಇಲ್ಲಿದ್ದೇವೆ, ಮುಂದಿನ ಕ್ಷಣ ಏನು? ಎನ್ನುವುದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ.  ಹಾಗಾಗಿ ಸಾವು ಅನ್ನು ಪದ ಪ್ರತಿಯೊಬ್ಬರಿಗೂ ಕಾಡತದ ಅನ್ನುವ ಪ್ರಶ್ನೆಯನ್ನು ಪ್ರತಿಬಿಂಬಿಸುವುದೇ ಮೃತ್ಯೋರ್ಮ ನಾಟಕವಾಗಿದೆ. ನಾವಿಂದು ಆತ್ಮಹತ್ಯೆಗಳನ್ನು ನೋಡತಾ ಇದ್ದೇವೆ, ಬಹುಶಃ ಆತ್ಮಹತ್ಯೆ ಮಾಡಿಕೊಳ್ಳುವುದು ಜೀವ ಸಂಕುಲದಲ್ಲಿ ಮನುಷ್ಯ ಮಾತ್ರ.  ಇನ್ನುಳಿದ ಯಾವುದೇ ಪ್ರಾಣಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.  ಅಷ್ಟು ಅವುಗಳಿಗೆ ಜೀವದ ಒಂದು ದೃಢತೆ ಇರುತ್ತದೆ ಎಂದರು.  

ಕೆ.ಪಿ.ಅಪ್ಪಚ್ಚನ್ ರಚಿತ ಈ ನಾಟಕವು ಮೂಲ ಮಲೆಯಾಳಿಯಂನಲ್ಲಿದ್ದು, 1991ರಲ್ಲಿ ಕನ್ನಡಕ್ಕೆ ಅನುವಾದಿಸುವ ಕಾರ್ಯಮಾಡಿದ್ದೇನೆ.  ಈ ನಾಟಕವನ್ನು ನಾಟ್ಯಯೋಗ ಟ್ರಸ್ಟ್, ಸಾಲಾಪೂರ ತಂಡದವರು ರಾಜ್ಯವ್ಯಾಪಿಯಾಗಿ ತಿರುಗಾಟದ ಮೂಲಕ ಅತ್ಯುತ್ತಮವಾಗಿ ರಂಗಪ್ರಯೋಗಗಳನ್ನು ಮಾಡುತ್ತಿದ್ದಾರೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡುತ್ತ ವಿಶ್ವದಲ್ಲಿ ಸುಮಾರು ಕಾಯಕಗಳಿವೆ, ಆ ಎಲ್ಲ ಕಾಯಕಗಳನ್ನು ತೆಗೆದುಕೊಂಡಾಗ ಯಾವುದು ಹುಟ್ಟುತ್ತದೆಯೋ ಅದು ಅಂತ್ಯವಾಗಲೇ ಬೇಕು.  ಜಗತ್ತಿನಲ್ಲಿರುವ ಸುಮಾರು 88 ಕೋಟಿ ಜೀವಿ ರಾಶಿಗಳಿವೆಯೋ ಅವೆಲ್ಲ ಹುಟ್ಟಿದ ಮೇಲೆ ಒಂದಿಲ್ಲ ಒಂದಿನ ಅವು ಅಂತ್ಯ ಕಾಣಲೇ ಬೇಕು, ತಮ್ಮ ಇರುವಿಕೆಯನ್ನು ತಿರಸ್ಕರಿಸಿ ಹೋಗಲೇ ಬೇಕಾಗುತ್ತದೆ.  ಸಾವಿನ ಕುರಿತು ಬಹಳ ಅದ್ಭುತವಾಗಿ ರಚನೆಗೊಂಡಂತ ಮೃತ್ಯೋರ್ಮ ನಾಟಕವು ಯಶಸ್ವಿಯಾಗಿ ಜರುಗಲೆಂದು ಹಾರೈಸಿದರು.  

ಸಂಗಮೇಶ ಅಂಗಡಿಯವರು ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು.  ಮಲ್ಲಿಕಾಜರ್ುನ ಸೊಲಗಿ ಸ್ವಾಗತಿಸಿದರು.  ಪ್ರಕಾಶ ಬಾಳಿಕಾಯಿ ವಂದಿಸಿದರು.  ಮಲ್ಲಿಕಾಜರ್ುನ ಚಿಕ್ಕಮಠ ನಿರೂಪಿಸಿದರು.  ನಂತರ ಮಹಾಂತೇಶ ರಾಮದುರ್ಗ ಅವರ ನಿದರ್ೆಶನದಲ್ಲಿ, ಕಲ್ಲಪ್ಪ ಪೂಜೇರ ಅವರ ಸಂಚಾಲಕತ್ವದಲ್ಲಿ ನಾಟ್ಯಯೋಗ ಟ್ರಸ್ಟ್, ಸಾಲಾಪೂರ ತಂಡದಿಂದ ಮೃತ್ಯೋರ್ಮ ನಾಟಕ ಪ್ರದರ್ಶನಗೊಂಡಿತು.  

ಕಾರ್ಯಕ್ರಮದಲ್ಲಿ ಪ್ರಕಾಶ ಗರೂಡ, ಮಹಾದೇವ ದೊಡ್ಡಮನಿ, ಸುನಿಲ ಪತ್ರಿ, ವಿಜಯೇಂದ್ರ ಅರ್ಚಕ, ಗಿರಿಜಾ ಹಿರೇಮಠ, ಉಮೇಶ ತೇಲಿ, ವಿಜಯ ದೊಡ್ಡಮನಿ, ರಾಜು ಕುಲಕಣರ್ಿ, ಆರ್.ಎ.ಕನ್ನೂರ, ಬಿ.ಜಿ.ಬಶೆಟ್ಟಿ ಉಮೇಶ ಪಾಟೀಲ, ಶಂಕ್ರಣ್ಣ ಕೊತಬಾಳ ಮುಂತಾದ ರಂಗಾಸಕ್ತರು ಹಾಜರಿದ್ದರು.